- 1 ಕೋಟಿ, 16 ಲಕ್ಷ ರೂಪಾಯಿ ವ್ಯವಹಾರ, 4 ಲಕ್ಷದ 7 ಸಾವಿರ ನಿವ್ವಳ ಲಾಭ
ಉಪ್ಪಿನಂಗಡಿ: 34-ನೆಕ್ಕಿಲಾಡಿ ಹಾಲು ಉತ್ಪಾದಕರ ಸಹಕಾರ ಸಂಘ 2021-22ರ ಸಾಲಿನಲ್ಲಿ 1 ಕೋಟಿ 86 ಲಕ್ಷದ 35 ರೂಪಾಯಿ ವ್ಯವಹಾರ ನಡೆಸಿದ್ದು, ಈ ಪೈಕಿ 4 ಲಕ್ಷದ 7 ಸಾವಿರದ 669 ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಗೌಡ ಘೋಷಣೆ ಮಾಡಿದರು.
ಅವರು ಜೂನ್16 ರಂದು ನಡೆದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಸದಸ್ಯರುಗಳಿಗೆ ಪ್ರತಿ ಲೀಟರ್ಗೆ 1.26 ಪೈಸೆ ಬೋನಸ್ ಮತ್ತು ಲಾಭಾಂಶದಲ್ಲಿ 25 ಶೇಕಡಾ ಡೆವಿಡೆಂಟ್ ನೀಡಲು ನಿರ್ಧರಿಸಲಾಗಿದೆ. 2022-2023ನೇ ಸಾಲಿನಲ್ಲಿ 6 ಲಕ್ಷದ 46ಸಾವಿರ ರೂಪಾಯಿ ನಿವ್ವಳ ಲಾಭ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ ಗುಣಮಟ್ಟದ ಹಾಲು ನೀಡುವ ಬಗ್ಗೆ ಅದಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮತ್ತು ಪಶು ವೈದ್ಯಾಧಿಕಾರಿ ಜಿತೇಂದ್ರ ರಾಸುಗಳ ಆರೋಗ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಹೊನ್ನಪ್ಪ ನಾಯ್ಕ, ನಿರ್ದೇಶಕರಾದ ಕಿಶೋರ ಗೌಡ, ದಿವಾಕರ, ಚನ್ನಕೇಶವ, ನಾರಾಯಣ ಗೌಡ, ಸುರೇಶ್ ಮಡಿವಾಳ, ರಾಜೀವ ಪೂಜಾರಿ, ಗೀತಾ, ವಾರಿಜಾ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರಾಜೇಶ್ ನಾಯಕ್ ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರು.