ರಾಮಕುಂಜ ಪ.ಪೂ.ಕಾಲೇಜಿಗೆ ಶೇ.94 ಫಲಿತಾಂಶ

0

  • ವಿಜ್ಞಾನ ವಿಭಾಗ-ಶೇ.90
  • ವಾಣಿಜ್ಯ ವಿಭಾಗ-ಶೇ. 97
  • ಕಲಾ ವಿಭಾಗ- ಶೇ.91

ರಾಮಕುಂಜ: 2021-22ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿಗೆ ಶೇ.94 ತೇರ್ಗಡೆ ಫಲಿತಾಂಶ ಬಂದಿದೆ.


ಸಂಸ್ಥೆಯಿಂದ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 213 ವಿದ್ಯಾರ್ಥಿಗಳ ಪೈಕಿ 200 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.94 ಫಲಿತಾಂಶ ಲಭಿಸಿದೆ. 54 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 117 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 23 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 6 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗಕ್ಕೆ ಶೇ.90: ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 59 ವಿದ್ಯಾರ್ಥಿಗಳ ಪೈಕಿ 53 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.90 ಫಲಿತಾಂಶ ಬಂದಿದೆ. ಈ ಪೈಕಿ 17 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸಿಂಚನ ಕೆ 567, ಸಿಂಚನ ವಿ.ಎಸ್. 566, ಬಿ.ಶ್ರದ್ಧಾ ಶೆಟ್ಟಿ 551, ಅಖಿಲ್ ಕೆ.ಎಂ. 542, ಯುವರಾಜ್ ಬಿ 535, ಕಿರಣ್ ಎ 531, ಸಂತೋಷ್ ಎಂ.ಎA. 530, ಯಶವಂತ ಎಸ್. 529, ಅನಿಲ್ ಎಸ್.ಡಿ.527, ಹರ್ಷಿತಾ 527, ದಿಶಾ ಎ 521, ಹರ್ಷಿತ್ ಆರ್ 516, ಪ್ರತೀಕ್ಷಾ 515, ಜಿ.ಎಲ್.ಶ್ರೇಯಾ 514, ಶ್ರೀನಿಧಿ ಎ.ಯು.514, ಅನಘಾ ಎಸ್.ಪಿ. 513, ಶ್ರದ್ದಾ ರೈ ಕೆ 513 ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗಕ್ಕೆ ಶೇ.97: ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 122 ವಿದ್ಯಾರ್ಥಿಗಳ ಪೈಕಿ 118 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ. 97 ಫಲಿತಾಂಶ ಬಂದಿದೆ. 32 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 68 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 14 ವಿದ್ಯಾರ್ಥಿಗಳು ದ್ವಿತೀಯ ಹಾಗೂ ನಾಲ್ವರು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶ್ರೀರಕ್ಷಾ ಎನ್ 592, ಶ್ರೇಯಾ ಸಿ.ಹೆಚ್.588, ಮಯೂರಿ ಎಂ.ಜಿ.586, ಭಾರತಿ ಎಂ. 576, ಜಿತಿನ್ ಬಿ.ಕೆ.575, ಸಿಂಚನ ಪಿ 569, ಪ್ರಜ್ಞಾ ಪಿ ಗೌಡ 567, ಕೀರ್ತನ್ ಕೆ 565, ಫಾತಿಮತ್ ಝಾಹಿದ 562, ಧನ್ಯಶ್ರೀ 560, ಶ್ರೀರಾಮ 557, ಮುರಳೀಧರ ವಿ 556, ವೈಶಾಲಿ ಕೆ 551, ವಿ.ಎಸ್.ಗೌತಮಿ 550, ಹರ್ಷಿತಾ ಬಿ.ಕೆ. 548, ಕುಸುಮಾಧರ ಎ.ಪಿ.547, ಶ್ರೇಯಸ್ ಪಿ.ಡಿ.547, ದೀಕ್ಷಿತಾ 546, ಅಭಿಜ್ಞಾ ಬಿ 543, ದೇವಿಕಾ 543, ಜ್ಯೋತಿಕಾ 542, ಕೆ.ಕಿರಣ್ 542, ಭಾಗ್ಯಶ್ರೀ ಕೆ 540, ಅಫ್ಜಲ್ ಅಬ್ದುಲ್ಲಾ 538, ಸುಮತಿ ಜಿ 534, ಆಯುಷ್ ಎ.ಎಸ್. 529, ಫಾತಿಮತುಲ್ ಅಸ್ಫನ 524, ನಿತೇಶ್ ಕೆ.ಎಸ್. 522, ಯಶಸ್ವಿ ರೈ ಎಂ. 522, ಜೀವಿತ ಎನ್.ಬಿ.521, ಮುಕ್ತಾರ್ ಕೆ.ಎಂ. 518, ಯಕ್ಷಿತಾ ಎನ್. 514 ಅಂಕ ಪಡೆದುಕೊಂಡಿದ್ದಾರೆ.

ಕಲಾ ವಿಭಾಗಕ್ಕೆ ಶೇ.91: ಕಾಲೇಜಿನ ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳ ಪೈಕಿ 29 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.91 ಫಲಿತಾಂಶ ಬಂದಿದೆ. 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ಇಬ್ಬರು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅಶ್ವಿನ್ ಎ.ಎಲ್. 553, ಪ್ರಜ್ವಲ್‌ಕ್ರಷ್ಣ ಹೆಚ್.ಕೆ. 548, ಸರಿನಾ ಎ. 536, ಕೆ.ಎಸ್.ಭಾರ್ಗವಿ 520, ಅಭಿಷೇಕ್ ಎ. 517 ಅಂಕ ಪಡೆದುಕೊಂಡು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here