ಶ್ರೀಧಾಮ ಮಾಣಿಲದಲ್ಲಿ 48 ದಿನಗಳ ವರೆಗೆ ನಡೆಯಲಿರುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಗೆ ಚಾಲನೆ

  • ಭಜನೆಯಿಂದ ದೇಶದ ಸಂಬ್ರಕ್ಷಣೆ ಸಾಧ್ಯ: ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ

 

ವಿಟ್ಲ: ಭಜನೆಯಿಂದ ದೇಶದ ಸಂಬ್ರಕ್ಷಣೆ ಸಾಧ್ಯ. ನಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುವ ಕೆಲಸವಾಗಬೇಕು. ವಿದ್ಯಾರ್ಥಿಗಳನ್ನು ಪ್ರಬುದ್ದರಾಗಿ ಮಾಡುವ ಕೆಲಸ ಶಿಕ್ಷಕರಿಂದ ಆಗುತ್ತಿದೆ. ಓರ್ವ ಸಂತ ಸಮಾಜಕ್ಕಾಗಿ ಕಾಯಾ, ವಾಚ, ಮನಸ್ಸ ಸಹಕಾರ ನೀಡುವುದು ಅಗತ್ಯ ಎಂದು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.

ಅವರು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಆ.೫ರಂದು ನಡೆಯಲಿರುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಪ್ರಯುಕ್ತ ೪೮ದಿನಗಳ ವರೆಗೆ ನಡಯಲಿರುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಪ್ರಥಮ ದಿನವಾದ ಜೂ.೧೯ರಂದು ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ನಲವತ್ತೆಂಟು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ. ಸಮರ್ಪಣಾ ಭಾವದ ಸೇವೆ ಮಾಡಿದವರಿಗೆ ಮಹಾಲಕ್ಷಿ ತಾಯಿ ಶ್ರೀರಕ್ಷೆಯಾಗಿದ್ದಾಳೆ. ಕ್ಷೇತ್ರಕ್ಕೆ ಯಾರೂ ವಿರೋದಿಗಳಿಲ್ಲ. ಕ್ಷೇತ್ರ ಎಲ್ಲರ ಹಿತವನ್ನೆ ಬಯಸುತ್ತದೆ. ಮತಿಭ್ರಮಣೆ ದೇಶದಲ್ಲಿ ಹೆಚ್ಚಾಗುತ್ತಿದೆ. ದಾಯಾದಿ ಮತ್ಸರಗಳು ದೂರವಾಗಬೇಕು. ಮನುಷ್ಯ ಯಾವತ್ತು ಶಾಂತಚಿತ್ತವಾಗಿರಬೇಕು. ಪ್ರಕೃತಿಯ ಏರುಪೇರಿನಿಂದ ಅನಾಹುತ ಸೃಷ್ಟಿಯಾಗಬಹುದು. ಕೆಟ್ಟ ಭಾವನೆ ಕಟ್ಟ ಪ್ರಪಂಚವನ್ನು‌ ಸೃಷ್ಟಿ ಮಾಡೀತು. ಕ್ಷೇತ್ರದ ಮೇಲೆ ಜನ‌ ಇಟ್ಟಿರುವ ನಂಬಿಕೆ ಕ್ಷೇತ್ರದ ಅಭಿವೃದ್ಧಿಗೆ ಪೂರಕ. ಕ್ಷೇತ್ರದಿಂದ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಕಷ್ಟದಲ್ಲಿರುವ ಕುಟುಂಬದ ಹೆಣ್ಣು ಮಗಳಿಗೆ ವಿವಾಹ ಮಾಡುವ ಕೆಲಸವೂ ಕ್ಷೇತ್ರದಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ. ಮಾನವೀಯ ಮೌಲ್ಯದೊಂದಿಗೆ ಬದುಕು ಸಾಗಿಸುವ ಕೆಲಸ ನಮ್ಮಿಂದ ಆಗಬೇಕಿದೆ. ಇಡೀ ಸಮಾಜವನ್ನು , ಪ್ರತಿಯೊಂದೂ ಜೀವ ರಾಶಿಯನ್ನು ಪ್ರೀತಿಸುವ ಮನಸ್ಸು ನಮ್ಮದಾಗಬೇಕು ಎಂದರು.


ಟ್ರಸ್ಟಿ ತಾರನಾಥ ಕೊಟ್ಟಾರಿರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಲ್ಲಿನ ಬಾಲಭೋಜನದಲ್ಲಿ ಪಾಲ್ಗೊಂಡ ಹಲವಾರು ಮಕ್ಕಳು ಇದೀಗ ಅವರವರ ಕಾಲಮೇಲೆ ನಿಂತು‌ ಸಂಸ್ಕಾರಯುತ ಜೀವನ‌ಸಾಗಿಸ್ತಾ ಇದ್ದಾರೆ. ಮಕ್ಕಳಿಗೆ ನೈತಿಕತೆಯ ಧಾರ್ಮಿಕ ಶಿಕ್ಷಣ ನೀಡುವ ಕೆಲಸ‌ ಕ್ಷೇತ್ರದ ಸ್ವಾಮೀಜಿಯವರಿಂದ ಆಗುತ್ತಿದೆ. ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಇನ್ನಿತರ ಕ್ಷೇತ್ರದ ಅಭಿವೃದ್ಧಿಯಲ್ಲಿ ಸ್ವಾಮೀಜಿಯವರು ತೊಡಗಿಸಿಕೊಂಡಿರುವುದು ವಿಶೇಷವಾಗಿದೆ. ಸ್ವಾಮೀಜಿಯವರ ಸಂಕಲ್ಪದಂತೆ ಬಾಲಭೋಜನ ಬಹಳಷ್ಟು ಮಹತ್ವವನ್ನು ಪಡೆಯುತ್ತಿದೆ ಎಂದರು.

ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ರವರು ಅಗಮಿಸಿ ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಸ್ವಾಮೀಜಿಯವರು ಅವರನ್ನು ಶಾಲುಹೊದಿಸಿ ಗೌರವಿಸಿದರು.

ಚಿಕ್ಕಮಗಳೂರು ಮೂಲದ ಶ್ರೀ ಚಿದಾನಂದ ಗುರೂಜಿ ಉದ್ಯಮಿ ಭಾಸ್ಕರ ಶೆಟ್ಟಿ ಪುಣೆ, ಮಂಗಳೂರು ಸೂರ್ಯ ನಾರಾಯಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ. ದಾರಮೋದರ, ಅಳಿಕೆ ಕೃಷ್ಣ, ಮಲ್ಲಿಕಾ – ಮನಿಶ್ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪೂವಪ್ಪ ಶೆಟ್ಟಿ, ಲತಾ ಶೆಟ್ಟಿ ದಂಪತಿಗಳು ಮೃತ ಪುತ್ರಿಯ ಹೆಸರಿನಲ್ಲಿ ಮಾಣಿಲ ಶಾಲೆಯ ಮಕ್ಕಳಿಗೆ ವಸ್ತ್ರ ದಾನ ಮಾಡಿದರು. ಟ್ರಸ್ಟಿ ತಾರನಾಥ ಕೊಟ್ಟಾರಿ ಸ್ವಾಗತಿಸಿದರು. ಟ್ರಸ್ಟಿ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬೆಳಗ್ಗೆ ಗಣಪತಿ ಹವನ, ಶ್ರೀ ವಿಠೋಭ ರುಕ್ಕಯಿ ಧ್ಯಾನ ಮಂದಿರದಲ್ಲಿ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ವಾಯನ ದಾನ, ಶ್ರೀ ಗುರು ಪೂಜೆ, ಬಾಲಭೋಜನ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ ಬಳಿಕ ಸಾಮೂಹಿಕ ಕುಂಕುಮಾರ್ಚನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ನಂತರ ಅನ್ನಸಂತರ್ಪಣೆ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.