ಪಿಯುಸಿ ಫಲಿತಾಂಶ: ರಾಜ್ಯ ಮಟ್ಟದಲ್ಲಿ ಮಿಂಚಿದ ವಿವೇಕಾನಂದ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು

0

  • ವಾಣಿಜ್ಯ ವಿಭಾಗದ ದೀಪ್ನಾಜೆ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್, ವಿಜ್ಞಾನ ವಿಭಾಗದ ಮನ್ವಿತ ಎನ್ ಪಿ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ ಐದನೇ ರ‍್ಯಾಂಕ್, ಕಲಾ ವಿಭಾಗದ ವಸುದೇವ ತಿಲಕ್‌ ತಾಲೂಕಿಗೆ ಪ್ರಥಮ

ಪುತ್ತೂರು: 2021-22ನೇ ಶೈಕ್ಷಣಿಕ ವರ್ಷದದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿಗೆ ಶೇ 96 ಫಲಿತಾಂಶವನ್ನು ಪಡೆದಿದೆ.

ವಾಣಿಜ್ಯ ವಿಭಾಗದಲ್ಲಿ ದೀಪ್ನಾಜೆ 593 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯದಲ್ಲಿ ನಾಲ್ಕನೇ ರ‍್ಯಾಂಕ್ ಮತ್ತು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.ಇವರು ಅರ್ಥಶಾಸ್ತ್ರ 100, ವ್ಯವಹಾರ ಅಧ್ಯಯನ 99, ಲೆಕ್ಕಶಾಸ್ತ್ರ 100, ಸಂಖ್ಯಾಶಾಸ್ತ್ರ 100, ಇಂಗ್ಲೀಷ್ 95 ಮತ್ತು ಸಂಸ್ಕೃತದಲ್ಲಿ 99 ಅಂಕಗಳನ್ನು ಗಳಿಸಿರುತ್ತಾರೆ.ಈಕೆ ಕಾಸರಗೋಡಿನ ಮುಂಡಿತ್ತಡ್ಕದ ಎಸ್. ನಾರಾಯಣ ಮತ್ತು ಪುಷ್ಪ ಕೆ ದಂಪತಿ ಪುತ್ರಿ.

ವಿಜ್ಞಾನ ವಿಭಾಗದಲ್ಲಿ 594 ಅಂಕಗಳನ್ನು ಗಳಿಸುವುದರ ಮೂಲಕ ಮನ್ವಿತ ಎನ್ ಪಿ ರಾಜ್ಯದಲ್ಲಿ ಐದನೇ ರ‍್ಯಾಂಕ್ ಮತ್ತು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಇವರು ಭೌತಶಾಸ್ತ್ರ 100, ರಸಾಯನಶಾಸ್ತ್ರ 100, ಗಣಿತಶಾಸ್ತ್ರ100, ಜೀವಶಾಸ್ತ್ರ 100, ಸಂಸ್ಕೃತ 100 ಮತ್ತುಇಂಗ್ಲಿಷ್ 94 ಅಂಕಗಳನ್ನು ಪಡೆಯುವುದರ ಮೂಲಕ ಒಟ್ಟು 594 ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಈಕೆ ಕಾಸರಗೋಡಿನ ನೀರ್ಚಾಲಿನ ಪುರುಷೋತ್ತಮ ಶರ್ಮ ಮತ್ತು ಸುಮಾದಂಪತಿ ಪುತ್ರಿ.

ಕಲಾ ವಿಭಾಗದಲ್ಲಿ 580 ಅಂಕಗಳನ್ನು ಪಡೆಯುವುದರ ಮೂಲಕ ವಸುದೇವ ತಿಲಕ್‌ ತಾಲೂಕಿನಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಈತನು ಕನ್ನಡ 95, ಇಂಗ್ಲೀಷ್ 90, ಇತಿಹಾಸ 99, ಅರ್ಥಶಾಸ್ತ್ರ 100, ಸಮಾಜಶಾಸ್ತ್ರ 96 ಮತ್ತು ರಾಜ್ಯಶಾಸ್ತ್ರದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ. ಈತನು ಉಡುಪಿಯ ಹೆಬ್ರಿಯ ಸಹದೇವ ಶೆಟ್ಟಿ ಮತ್ತು ವಸಂತ ಶೆಟ್ಟಿದಂಪತಿ ಪುತ್ರ ವಿಜ್ಞಾನ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು 589 ಅಂಕಗಳನ್ನು ಪಡೆದು ರಾಜ್ಯದಲ್ಲಿ ಹತ್ತನ ರ‍್ಯಾಂಕ್ ಮತ್ತು ಕಾಲೇಜಿನಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಸ್ತುತಿ ಎಂ.ಎಸ್(ಪುತ್ತೂರಿನನೆಹರೂನಗರದ ಶ್ರೀಕೃಷ್ಣ ಗಣರಾಜ್ ಭಟ್ ಮತ್ತು ಸೌಮ್ಯ ಎಂ ದಂಪತಿ ಪುತ್ರಿ), ಪ್ರಾಪ್ತಿ ಗಂಭೀರ್(ಪುತ್ತೂರಿನಕೈಕಾರದ ವಿರೇಂದ್ರ ಎನ್‌ ಗಂಭೀರ್ ಮತ್ತು ಸೌಮ್ಯದಂಪತಿ ಪುತ್ರಿ) ಮತ್ತು ಎಂ. ವಿಶಾಖ್‌ಕಾಮತ್(ಪುತ್ತೂರಿನ ಬೊಳುವಾರಿನ ಎಂ. ವಿದ್ಯಾಧರ್‌ಕಾಮತ್ ಮತ್ತು ಎಂ. ಮುಕ್ತ ಕಾಮತ್‌ದಂಪತಿ ಪುತ್ರ)ಇವರುರಾಜ್ಯದಲ್ಲಿ ಹತ್ತನರ‍್ಯಾಂಕ್‌ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 588 ಅಂಕಗಳನ್ನು ಪಡೆಯುವುದರ ಮೂಲಕ ಚೈತ್ರಾಎನ್‌ ರಾಜ್ಯದಲ್ಲಿ ಒಂಭತ್ತನೇ ರ‍್ಯಾಂಕ್ ಮತ್ತು ಕಾಲೇಜಿನಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.ಈಕೆ ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯದ ಚಂದ್ರ ಮತ್ತು ಶಶಿಕಲಾ ದಂಪತಿಗಳ ಪುತ್ರಿ, ಕಲಾ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು 579 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ದಿಶಾ ಎಂ(ಉರಿಮಜಲಿನ ವಿಶ್ವನಾಥ ಎಂ ಮತ್ತು ವಿದ್ಯಾ ಕೆ ದಂಪತಿಪುತ್ರಿ)ಮತ್ತು ವರ್ಷಾ ಎ (ಶಿವಮೊಗ್ಗದ ಭದ್ರಾವತಿಯಆನಂದರಾಜ್‌ಆರ್ ಮತ್ತು ದೀಪಾಲಕ್ಮೀ ಕೆ ದಂಪತಿ ಪುತ್ರಿ)ಕಾಲೇಜಿಗೆದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.

ವಿಜ್ಞಾನ ವಿಭಾಗದ ಒಟ್ಟು335 ಮಂದಿ ವಿದ್ಯಾರ್ಥಿಗಳಲ್ಲಿ 140 ಮಂದಿ ಡಿಸ್ಟಿಂಕ್ಷನ್, 164 ಮಂದಿ ಪ್ರಥಮದರ್ಜೆಯಲ್ಲಿತೇರ್ಗಡೆ ಹೊಂದಿ ಶೇ 93.73 ಫಲಿತಾಂಶ, ವಾಣಿಜ್ಯ ವಿಭಾಗದ ಒಟ್ಟು264 ವಿದ್ಯಾರ್ಥಿಗಳಲ್ಲಿ 91 ಮಂದಿ ಡಿಸ್ಟಿಂಕ್ಷನ್ ಹಾಗೂ 124 ಮಂದಿ ಪ್ರಥಮ ದರ್ಜೆಯಲ್ಲಿತೇರ್ಗಡೆ ಹೊಂದಿ ಶೇ 93.56 ಫಲಿತಾಂಶ, ಕಲಾ ವಿಭಾಗ ದಒಟ್ಟು46 ವಿದ್ಯಾರ್ಥಿಗಳಲ್ಲಿ 20 ಮಂದಿ ಡಿಸ್ಟಿಂಕ್ಷನ್, 19 ಮಂದಿ ಪ್ರಥಮ ದರ್ಜೆಯಲ್ಲಿತೇರ್ಗಡೆ ಹೊಂದಿಶೇ 100 ಫಲಿತಾಂಶಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರವೀಂದ್ರಪಿ, ಸಂಚಾಲಕ ಕೃಷ್ಣಪ್ರಸಾದ್ ನಡ್ಸಾರ್, ಪ್ರಾಂಶುಪಾಲ ಮಹೇಶ ನಿಟಿಲಾಪುರ, ಶಿಕ್ಷಕ-ರಕ್ಷಕ ಸಂಘ ಹಾಗೂ ಅಧ್ಯಾಪಕ ಮತ್ತುಅಧ್ಯಾಪಕೇತರ ವೃಂದ ಸಂತಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here