ಗೋಳಿತ್ತೊಟ್ಟು ಗ್ರಾ.ಪಂ.ನಲ್ಲಿ ವಿದ್ಯುತ್ ಅದಾಲತ್

0

ನೆಲ್ಯಾಡಿ: ಗ್ರಾಮೀಣ ಜನತೆಯ ವಿದ್ಯುತ್ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಸರಕಾರ ಆರಂಭಿಸಿರುವ ಪ್ರತಿ ತಿಂಗಳ ಮೂರನೇ ಶನಿವಾರ ನಡೆಯುವ ‘ವಿದ್ಯುತ್ ಅದಾಲತ್’ ಜೂ.೧೮ರಂದು ಗೋಳಿತ್ತೊಟ್ಟು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.


ಮೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಸಹಾಯಕ ಇಂಜಿನಿಯರ್ ರಾಜೇಶ್ ಕೆ.,ರವರು ಮಾಹಿತಿ ನೀಡಿದರು. ಸಹಾಯಕ ಲೆಕ್ಕಾಧಿಕಾರಿ ಸುಷ್ಮಾ, ಇಂಜಿನಿಯರ್ ಸವಿತಾ, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಠೇರಿ, ಉಪಾಧ್ಯಕ್ಷೆ ಶೋಭಾಲತಾ, ಪಿಡಿಒ ಜಗದೀಶ್ ನಾಯ್ಕ್, ಗೋಳಿತ್ತೊಟ್ಟು ವಿದ್ಯುತ್ ಬಳಕೆದಾರರ ವೇದಿಕೆ ಅಧ್ಯಕ್ಷ ಸತೀಶ್ ರೈ ಕೊಣಾಲುಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯುತ್ ಬಳಕೆದಾರರು ವಿವಿಧ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ವಿದ್ಯುತ್ ಬಿಲ್ಲು ಸಂಗ್ರಹ ಮಾಡಲು ಗೋಳಿತ್ತೊಟ್ಟಿನಲ್ಲಿ ಸ್ಥಳಾವಕಾಶ, ಮೆಸ್ಕಾಂ ಹೊಸ ಶಾಖಾ ಕಚೇರಿ ಗೋಳಿತ್ತೊಟ್ಟಿನಲ್ಲಿ ಪ್ರಾರಂಭಿಸುವುದು, ಶಿಥಿಲ ಅವಸ್ಥೆಯಲ್ಲಿರುವ ಹಳೆಯ ವಿದ್ಯುತ್ ತಂತಿಗಳನ್ನು ಬದಲಿಸುವುದು, ಹೆಚ್ಚುವರಿ ಟಿ.ಸಿ.ಅಳವಡಿಕೆ, ಗೋಳಿತ್ತೊಟ್ಟು ಭಾಗಕ್ಕೆ ಹೆಚ್ಚುವರಿ ಪವರ್‌ಮ್ಯಾನ್ ನೇಮಕ, ಮಧ್ಯಂತ ಕಂಬ ಅಳವಡಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಗೋಳಿತ್ತೊಟ್ಟು ವಿದ್ಯುತ್ ಬಳಕೆದಾರರ ವೇದಿಕೆ ವತಿಯಿಂದ ಸಲ್ಲಿಸಲಾಯಿತು.

ಎಪಿಎಂಸಿ ಮಾಜಿ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ಗ್ರಾ.ಪಂ.ಸದಸ್ಯರಾದ ನೋಣಯ್ಯ ಗೌಡ ಡೆಬ್ಬೇಲಿ, ಶಿವಪ್ರಸಾದ್, ಬಾಲಕೃಷ್ಣ ಅಲೆಕ್ಕಿ, ಬಾಬು ಪೂಜಾರಿ ಕಿನ್ಯಡ್ಕ, ಪದ್ಮನಾಭ, ವಿದ್ಯುತ್ ಬಳಕೆದಾರರ ವೇದಿಕೆ ಉಪಾಧ್ಯಕ್ಷ ವೆಂಕಪ್ಪ ಗೌಡ ಪೆರ್ಲ, ಕಾರ್ಯದರ್ಶಿ ಕೊರಗಪ್ಪ ಗೌಡ ಕಲ್ಲಡ್ಕ, ಜೊತೆ ಕಾರ್ಯದರ್ಶಿ ನೇಮಣ್ಣ ಪೂಜಾರಿ ಪಾಲೇರಿ, ಅಬ್ದುಲ್ ಕುಂಞಿ ಕೊಂಕೋಡಿ, ಸದಸ್ಯರಾದ ವೆಂಕಪ್ಪ ಗೌಡ ಡೆಬ್ಬೇಲಿ, ಸುಂದರ ಶೆಟ್ಟಿ ಪುರ ಮತ್ತಿತರರು ಉಪಸ್ಥಿತರಿದ್ದರು. ಮೆಸ್ಕಾಂ ನೆಲ್ಯಾಡಿ ಶಾಖಾ ಜೆಇ ರಮೇಶ್ ಕುಮಾರ್, ಪವರ್‌ಮ್ಯಾನ್ ದುರ್ಗಾಸಿಂಗ್ ಸಹಕರಿಸಿದರು.

ಎಸ್‌ಕೆಎಸ್‌ಎಸ್‌ಎಫ್‌ನಿಂದ ಅಗತ್ಯ ಸಲಕರಣೆ:
ಗೋಳಿತ್ತೊಟ್ಟು ಭಾಗದ ಪವರ್‌ಮ್ಯಾನ್‌ಗಳಿಗೆ ಅನುಕೂಲವಾಗುವಂತೆ ೨೦ ಅಡಿ ಉದ್ದದ ಏಣಿ ಮತ್ತು ಮರಗಳ ರೆಂಬೆ ಕಡಿಯಲು ಅನುಕೂಲವಾಗುವಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಸುಮಾರು ೧೪ ಸಾವಿರ ರೂ.,ಮೊತ್ತದ ಸಲಕರಣೆಗಳನ್ನು ಎಸ್‌ಕೆಎಸ್‌ಎಸ್‌ಎಫ್ ಕೊಚ್ಚಿಲ ಗೋಳಿತ್ತೊಟ್ಟು  ಘಟಕದ ವತಿಯಿಂದ ಮೆಸ್ಕಾಂ ಇಲಾಖೆಗೆ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here