ಕಡಬ: ಅಂತರಾಷ್ಟ್ರೀಯ ಯೋಗ ದಿನಾಚರಣೆ-2022ರ ಅಂಗವಾಗಿ ಕುಂತೂರುಪದವು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಜೂ.1ರಂದು ಯೋಗ ದಿನಾಚರಣೆ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಸೋಮಪ್ಪ ಗೌಡ, ಉಪಾಧ್ಯಕ್ಷ ವಸಂತ ಕೆ., ನಿರ್ದೇಶಕರುಗಳಾದ ಪದ್ಮನಾಭ, ಎ.ಚಂದ್ರಶೇಖರ, ಶ್ರೀಮತಿ ವಿಜಯ, ಮಾಜಿ ಉಪಾಧ್ಯಕ್ಷ ಜಾರಪ್ಪ ಗೌಡ, ಸಂಘದ ಕಾರ್ಯದರ್ಶಿ ನೀಲಯ್ಯ ಗೌಡ, ಹಾಲು ಪರೀಕ್ಷಕ ಶ್ರೇಯಸ್, ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಸಂಘದ ಮಾಜಿ ಅಧ್ಯಕ್ಷ ಕೆ.ಎಸ್.ಬಾಬು ಗೌಡ ಮತ್ತು ದಿನೇಶ್ರವರು ಯೋಗಭ್ಯಾಸ ನಡೆಸಿಕೊಟ್ಟರು.