- ಮುಖ್ಯಮಂತ್ರಿಯಾಗಿ ಸಫೀದಾ; ಉಪಮುಖ್ಯಮಂತ್ರಿ: ಚಿಂತನ
ಪುತ್ತೂರು: ನರಿಮೊಗರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಂತ್ರಿಮಂಡಲ ರಚಿಸಲಾಯಿತು. ಮುಖ್ಯಮಂತ್ರಿಯಾಗಿ ಖದೀಜತ್ ಸಫೀದಾ (ಉಮ್ಮರ್ ಕೆ.ಪಿ ಹಾಗೂ ಫಾತಿಮಾರವರ ಪುತ್ರಿ) ಹಾಗೂ ಉಪ ಮುಖ್ಯಮಂತ್ರಿಯಾಗಿ ಚಿಂತನ (ಸಂತೋಷ್ ಪೂಜಾರಿ ಇಂದಿರಾನಗರ ಮತ್ತು ನಮಿತಾರವರ ಪುತ್ರಿ) ಆಯ್ಕೆಯಾದರು. ಶಾಲಾ ದೈ.ಶಿ ಶಿಕ್ಷಕಿ ಶ್ರೀಲತಾ ರವರು ಶಿಕ್ಷಕ ವೃಂದದವರ ಸಹಕಾರದೊಂದಿಗೆ ಮತದಾನ ಪ್ರಕ್ರಿಯೆ ಮೂಲಕ ಮಂತ್ರಿಮಂಡಲವನ್ನು ರಚಿಸಿದರು. ಮುಖ್ಯಗುರು ಮುಖ್ಯಗುರು ಜುಸ್ತಿನ್ ಲಿಡ್ವಿನ್ ಡಿಸೋಜಾ ಪ್ರಮಾಣ ವಚನ ಬೋಧಿಸಿ ಜವಾಬ್ದಾರಿಗಳನ್ನು ಹಂಚಿದರು.