ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ

0

  • 16 ಡಿಸ್ಟಿಂಕ್ಷನ್, 56 ಪ್ರಥಮ ಶ್ರೇಣಿ , ಶೇ 84 % ಫಲಿತಾಂಶ

 

ಕಾಣಿಯೂರು: ಕಳೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಒಟ್ಟು 115 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 96 ಮಂದಿ ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ. 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 56ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಶೇ 84% ಫಲಿತಾಂಶ ಗಳಿಸಿಕೊಂಡಿದೆ. ಒಟ್ಟು 8 ಮಂದಿ ವಿದ್ಯಾರ್ಥಿಗಳು 100 ಅಂಕಗಳನ್ನು ಗಳಿಸಿಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಜಯಂತಿ ಅವರು ತಿಳಿಸಿದ್ದಾರೆ.

 

ವಿಜ್ಞಾನ ವಿಭಾಗ 84%

ವಿಜ್ಞಾನ ವಿಭಾಗದಲ್ಲಿನ 25 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 21ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ 84 ಫಲಿತಾಂಶ ಗಳಿಸಿಕೊಂಡಿದೆ. 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ. ನಾರಾಯಣ ಭಟ್ ಕಾಣಿಯೂರು ಮತ್ತು ಶೈಲಶ್ರೀರವರ ಪುತ್ರಿ ಶ್ರೀದೇವಿ (581), ಕಾಪೆಜಾಲು ಸಂಜೀವ ಗೌಡ ಮತ್ತು ಲೋಲಾಕ್ಷೀರವರ ಪುತ್ರಿ ಮಧುಶ್ರೀ (569), ಕೋಡಂದೂರು ಆನಂದ ಗೌಡ ಮತ್ತು ಯಶೋದರವರ ಪುತ್ರ ಗಗನ್( 568)ಅಂಕ ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗ 85.24%
ವಾಣಿಜ್ಯ ವಿಭಾಗದಲ್ಲಿನ 61 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, 52 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ 85.47ಫಲಿತಾಂಶ ಗಳಿಸಿಕೊಂಡಿದೆ. 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ. ಕಟ್ಟತ್ತಾರು ವಾಸುದೇವ ಗೌಡ ಮತ್ತು ಪುಷ್ಪಾವತಿರವರ ಪುತ್ರಿ ಅನನ್ಯ (574), ಅಗಳಿ ವೇಂಕಟೇಶ ಮತ್ತು ಪ್ರೇಮಲತಾರವರ ಪುತ್ರಿ ಅಂಜಲಿ(574), ಮಿತ್ತಮೂಲೆ ಮಾಧವ ಮತ್ತು ಸೀತಮ್ಮರವರ ಪುತ್ರಿ ಕೇಶ್ಮಾ (567), ಖಂಡಿಗ ವಾಚಣ್ಣ ಗೌಡ ಮತ್ತು ವಿಮಲಾರವರ ಪುತ್ರಿ ರಕ್ಷಾ( 556) ಅಂಕ ಪಡೆದುಕೊಂಡಿದ್ದಾರೆ.

ಕಲಾ ವಿಭಾಗ 80%
ಕಲಾ ವಿಭಾಗದಲ್ಲಿನ 29 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 23 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ 80 ಫಲಿತಾಂಶ ಗಳಿಸಿಕೊಂಡಿದೆ. ಮಿತ್ತಮೂಲೆ ಮೋನಪ್ಪ ಗೌಡ ಮತ್ತು ಹೇಮರವರ ಪುತ್ರಿ ಪ್ರಜ್ಞಾ ( 476), ಚಾರ್ವಾಕ ನಾಗಪ್ಪ ಮತ್ತು ಶೇಷಮ್ಮರವರ ಪುತ್ರಿ ಶುಭ(435), ಕಂಪ ಶೀನಪ್ಪ ಗೌಡ ಮತ್ತು ಮೋಹಿನಿರವರ ಪುತ್ರಿ ಮೇಘಶ್ರೀ( 432) ಅಂಕ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here