ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

0

 

 

ಪುತ್ತೂರು:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ). ಪುತ್ತೂರು ಪ್ರವರ್ತಿತ ಪ್ರಗತಿಬಂಧು, ಸ್ವ ಸಹಾಯ ಸಂಘಗಳ ಒಕ್ಕೂಟ ಮುಂಡೂರು ಎ ಮತ್ತು ಬಿ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು ಇಸಭಾಂಗಣದಲ್ಲಿ ಜೂ.19ರಂದು  ನಡೆಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಮುಂಡೂರು ಗ್ರಾಮಪಂಚಾಯತ್ ಅಧ್ಯಕ್ಷರಾದ ಪುಷ್ಪಾ ಅವರು ಆಗಮಿಸಿ ಗ್ರಾಮಾಭಿವೃದ್ಧಿ ಯೋಜನೆಯ ಕೆಲಸ ಕಾರ್ಯಗಳನ್ನು ಕೊಂಡಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಜನಜಾಗೃತಿ ವೇದಿಕೆ ವಲಯಾಧ್ಯಕ್ಷ  ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿ ಆಗಿದ್ದಾರೆ.

ಹಲವಾರು ಕುಟುಂಬಗಳು ಮಧ್ಯ ಮುಕ್ತವಾಗಿದೆ ಎಂದು ಶುಭ ಹಾರೈಸಿದರು. ಮತ್ತೋರ್ವ ಮುಖ್ಯ ಅತಿಥಿ ಪುರಂದರ ಪೂಜಾರಿ ಯೋಜನಾಧಿಕಾರಿಗಳು ಉಡುಪಿ ಕರಾವಳಿ ಪ್ರಾದೇಶಿಕ ಕಚೇರಿ ಇವರು ಮಾತನಾಡಿ ಯೋಜನೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ  ರಮೇಶ್ ಪಜಿಮಣ್ಣು ಎಸ್ ಡಿ ಎಂ ಸಿ ಅಧ್ಯಕ್ಷರು ಮುಂಡೂರು ಶಾಲೆ ಇವರು ಮಾತನಾಡಿ ಯೋಜನೆಯು ಎಲ್ಲಾ ಸಮಯದಲ್ಲಿ ಎಲ್ಲರಿಗೂ ಸಹಕಾರ ನೀಡಿದೆ. ಎಲ್ಲಾ ಪದಾಧಿಕಾರಿಗಳು ಉತ್ತಮ ಕಾರ್ಯ ನಿರ್ವಹಿಸಿ ಕೊರೋನಾ ಕಾಲದಲ್ಲೂ ಅತ್ಯುತ್ತಮ ಕಾರ್ಯ ನಿರ್ವಹಿಸಿದೆ ಎಂದು ಶ್ಲಾಘನೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರುಗಳಾದ ರಾಮಣ್ಣ ನಾಯ್ಕ ಯೆನೇಕಲ್ ಮತ್ತು  ಪ್ರಕಾಶ್ ಡಿ ಸೋಜಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಮತ್ತು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬೇರೆ ಕಾರ್ಯ ಕ್ಷೇತ್ರಕ್ಕೆ ವರ್ಗಾವಣೆಗೊಂಡ ಸೇವಾಪ್ರತಿನಿಧಿಗಳಾದ ರಜನಿ ಮತ್ತು  ನಳಿನಾಕ್ಷಿ ಇವರನ್ನು ಸನ್ಮಾನಿಸಲಾಯಿತು.ಕುಮಾರಿ ಹೇಮಲತಾ ಇವರು ಸ್ವಾಗತಿಸಿ ಶ್ರೀ ಉಮೇಶ್ ಅಂಬಟ ಇವರು ವಂದಿಸಿದರು. ಮೇಲ್ವಿಚಾರಕರಾದ  ಸುನೀತಾ ಶೆಟ್ಟಿ ಮತ್ತು ಮೋಹಿನಿ ಗೌಡ ಇವರು ಕಾರ್ಯಕ್ರಮ ನಿರೂಪಿಸಿದರು. ಎ ಒಕ್ಕೂಟದ ನೂತನ ಅಧ್ಯಕ್ಷರಾಗಿ  ಪ್ರೇಮಾ, ಉಪಾಧ್ಯಕ್ಷರಾಗಿ  ಅಪ್ಸಾ, ಕಾರ್ಯದರ್ಶಿಯಾಗಿ ಹೇಮಲತಾ, ಜೊತೆ ಕಾರ್ಯದರ್ಶಿಯಾಗಿ  ಮಂಗಳಾ ಮತ್ತು ಕೋಶಾಧಿಕಾರಿಯಾಗಿ ರಾಧಾಕೃಷ್ಣ ಅವರು ಅಧಿಕಾರ ಸ್ವೀಕರಿಸಿದರು.

ಬಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಪುಷ್ಪಾ, ಉಪಾಧ್ಯಕ್ಷರು  ಜಯಾನಂದ ಆಳ್ವ, ಕಾರ್ಯದರ್ಶಿಯಾಗಿ ಮೀನಾಕ್ಷಿ, ಜೊತೆ ಕಾರ್ಯದರ್ಶಿಯಾಗಿ  ಚಿತ್ರಾ ಮತ್ತು ಕೋಶಾಧಿಕಾರಿಯಾಗಿ ಪುಟ್ಟಣ್ಣ ಗೌಡ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಲಘು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

LEAVE A REPLY

Please enter your comment!
Please enter your name here