ಆಲಂಕಾರು ಜೆಸಿಐ ವತಿಯಿಂದ ರಾಮಕುಂಜ ಪದವಿ ಕಾಲೇಜಿನಲ್ಲಿ ’ವಿಕಾಸ್’ ತರಬೇತಿ ಉದ್ಘಾಟನೆ

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನಲ್ಲಿ ಉದ್ಯೋಗ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಆಲಂಕಾರು ಜೆಸಿಐ ವತಿಯಿಂದ ಹಮ್ಮಿಕೊಂಡ ಸರಣಿ ತರಬೇತಿಯ ಉದ್ಘಾಟನೆ ಇತ್ತೀಚೆಗೆ ನಡೆಯಿತು.

ಜೆಸಿಐ ವಲಯ 15ರ ಅಧ್ಯಕ್ಷ ರೋಯನ್ ಉದಯ ಕ್ರಾಸ್ತರವರು ಉದ್ಘಾಟಿಸಿ ಮಾತನಾಡಿ, ಯುವ ಜನತೆಗೆ ಸರಿಯಾದ ಮಾರ್ಗದರ್ಶನ, ತರಬೇತಿ ನೀಡಿದರೆ, ಅವರು ಉದ್ಯೋಗದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುವುದಲ್ಲದೆ, ಸಮಾಜದ ಮಿಡಿತಕ್ಕೆ ಪೂರಕವಾಗಿ ಸೇವೆಯನ್ನು ಮಾಡಲು ಶಕ್ತರಾಗುತ್ತಾರೆ. ಹಾಗಾಗಿ ಒಂದು ವಾರದ ಕಾಲ ನಡೆಯುವ ಈ ತರಬೇತಿಯು ಯಶಸ್ವಿಯಾಗಲಿ, ಇದರ ಪರಿಣಾಮ ವಿದ್ಯಾರ್ಥಿಗಳಲ್ಲಿ ಕಾಣುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯಅತಿಥಿಯಾಗಿದ್ದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ.,ಅವರು ಮಾತನಾಡಿ, ಜೆಸಿಐ ಸಂಘಟನೆಯು ಯುವಜನರ ಸಬಲೀಕರಣ ಮಾಡುವ ಸಂಘಟನೆಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ ಸಂಘಟನೆ. ಇದರ ತರಬೇತಿಗಳು ಇಂದಿನ ಯುಗಕ್ಕೆ ಬಹಳ ಪ್ರಸ್ತುತವಾಗಿದೆ. ಜೆಸಿಐಯ ಜೀವಾಳವೇ ತರಬೇತಿಗಳು. ಈ ಸಂಸ್ಥೆಯಲ್ಲಿ ನಡೆಯುವ ಈ ತರಬೇತಿಗಳು ಅತ್ಯುತ್ತಮವಾಗಿ ಮೂಡಿಬರಲಿ ಎಂದರು. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆಯವರು ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜೆಸಿಐ ಆಲಂಕಾರು ಘಟಕದ ಅಧ್ಯಕ್ಷ ಅಜಿತ್ ರೈಯವರು ತರಬೇತಿಯ ವಿವರವನ್ನು ತಿಳಿಸಿ, ಒಂದು ವಾರ ನಡೆಯುವ ಈ ತರಬೇತಿಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟರು.

ಜೆಸಿಐ ವಲಯ 15ರ ಅಧಿಕಾರಿ ಮೋಹನ್ ನಕ್ರೆ, ಪೂರ್ವ ವಲಯ ಉಪಾಧ್ಯಕ್ಷ ಪ್ರದೀಪ್ ಬಾಕಿಲ, ಜೇಸಿರೆಟ್ ಅಧ್ಯಕ್ಷೆ ಮಮತಾ ಅಂಬರಾಜೆ, ನಿಕಟಪೂರ್ವ ಅಧ್ಯಕ್ಷ ಗಣೇಶ್ ಕಟ್ಟಪುಣಿ, ಘಟಕದ ಪೂರ್ವಾಧ್ಯಕ್ಷ ತೋಷಿತ್ ರೈ, ಸದಸ್ಯ ಅಜಿತ್ ಪಾಲೇರಿ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಚೇತನ್ ಎಂ., ವಂದಿಸಿದರು. ಯೋಗೀಶ್ ಜೆಸಿವಾಣಿ ವಾಚಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.