ಬೆಳ್ಳಿಪ್ಪಾಡಿ: ಜಾಗದ ಹಕ್ಕುಪತ್ರ ಪಡೆಯುವುದಕ್ಕಾಗಿ ಪಾದೆಕಲ್ಲು ಜರಿ ನಿವಾಸಿಗಳಿಂದ ಹೋರಾಟ ಸಮಿತಿ ರಚನೆ

0

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಪಾದೆಕಲ್ಲು ಜರಿ ನಿವಾಸಿಗಳು ತಮ್ಮ ಜಾಗದ ಹಕ್ಕುಪತ್ರ ಪಡೆಯುವುದಕ್ಕಾಗಿ ಹೋರಾಟ ಸಮಿತಿ ರಚಿಸಿದ್ದಾರೆ.

ಕಳೆದ ನೂರು ವರ್ಷಗಳಿಂದ ಅರಣ್ಯ ಪ್ರದೇಶದ ಬದಿಯಲ್ಲಿ ವಾಸಿಸುತ್ತಿದ್ದು ಜಾಗದ ಹಕ್ಕು ಪತ್ರ ಇಲ್ಲದ ಕಾರಣ ಸರಕಾರದ ಸವಲತ್ತುಗಳಿಂದ ವಂಚಿತರಾಗುವಂತಾಗಿದೆ. ಅನೇಕ ವರ್ಷಗಳಿಂದ ಇಲಾಖೆಗಳಿಗೆ ಮನವಿ, ದೂರು ನೀಡಿದರೂ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ಇದೀಗ -ಲಾನುಭವಿಗಳು ಒಗ್ಗಟ್ಟಾಗಿ ಹೋರಾಟ ಮಾಡಿ ಜಾಗದ ಹಕ್ಕು ಪತ್ರವನ್ನು ಪಡೆಯುವ ಉದ್ದೇಶದಿಂದ ಹೋರಾಟ ಸಮಿತಿ ರಚನೆ ಮಾಡಿದ್ದಾರೆ. ತಮಗೆ ಸಲಹೆ, ಸೂಚನೆ ನೀಡುವುದಕ್ಕಾಗಿ ಸಮಿತಿಯ ಗೌರವಾಧ್ಯಕ್ಷರಾಗಿ ಗ್ರಾ.ಪಂ.ಮಾಜಿ ಸದಸ್ಯ ಮೋನಪ್ಪ ಗೌಡ ಪಮ್ಮನಮಜಲು, ಗೌರವ ಸಲಹೆಗಾರರಾಗಿ ಗ್ರಾ.ಪಂ.ಸದಸ್ಯ ಜಯಪ್ರಕಾಶ್ ಬದಿನಾರು ಮತ್ತು ಅಧ್ಯಕ್ಷರಾಗಿ ಜಗದೀಶ್ ಕಜೆರವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಬಾಬು ನೆಕ್ಕರೆ , ಉಪಾಧ್ಯಕ್ಷರಾಗಿ ಮಾಧವ, ನಾಗೇಶ್, ನೋಣಯ್ಯ ಮತ್ತು ಸದಸ್ಯರಾಗಿ ಶಂಕರ, ಸುಧಾಕರ, ಚೆನ್ನಮ್ಮ, ಕವಿತಾ, ಸುಂದರಿ, ನವೀನ, ಸೀತಮ್ಮ, ಜಯಾನಂದ, ವಿಶ್ವನಾಥ ಮತ್ತು ಸುಮತಿಯವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here