ಆಂಧ್ರಪ್ರದೇಶದ ಅಮಲಾಪುರ ಕೋನಸೀಮೆ ಎಸ್ಪಿಯಾಗಿ ಸುಧೀರ್ ಕುಮಾರ್ ರೆಡ್ಡಿ ನೇಮಕ

0

ಪುತ್ತೂರು: ದಕ್ಷಿಣ ಕನ್ನಡ‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸೇವೆ ಸಲ್ಲಿಸಿ ಆಂದ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದ ಸುಧೀರ್ ಕುಮಾರ್ ರೆಡ್ಡಿಯವರು ಇದೀಗ ‌ಆಂದ್ರಪ್ರದೇಶದ ಅಮಲಾಪುರ ಕೋನಸೀಮಾದ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

2017ರ ಜೂನ್ 22ರಂದು ಸುಧೀರ್‌ ಕುಮಾರ್ ರೆಡ್ಡಿ ದ.ಕ.ಜಿಲ್ಲಾ ಎಸ್ಪಿಯಾಗಿ‌ ಕಾರ್ಯ ನಿರ್ವಹಿಸಿದ್ದರು.‌ 2010ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಇವರು ಜಿಲ್ಲೆಯಲ್ಲಿ ಕೋಮುಗಲಭೆಯನ್ನು‌ ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದರು‌. ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿದ್ದ ಇವರು ಕಾನೂನು‌ ಸುವ್ಯವಸ್ಥೆ ಕಾಪಾಡುವಲ್ಲಿ ಮುತುವರ್ಜಿ ವಹಿಸಿದ್ದರು. ಜಿಲ್ಲೆಯಿಂದ ವರ್ಗಾವಣೆಗೊಂಡ ಬಳಿಕ‌ ವಿವಿದೆಡೆ ಕರ್ತವ್ಯ ನಿರ್ವಹಿಸಿರುವ ಸುಧೀರ್ ಕುಮಾರ್ ರೆಡ್ಡಿಯವರು‌ ಆಂದ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಎಸ್.ಪಿ.ಯಾಗಿದ್ದರು. ಇದೀಗ ಅಮಲಾಪುರ‌ ಕೋನಸೀಮಾ ಜಿಲ್ಲೆಯ‌ ವರಿಷ್ಠಾಧಿಕಾರಿಯಾಗಿ ಸುಧೀರ್ ಕುಮಾರ್ ರೆಡ್ಡಿಯವರನ್ನು ನೇಮಕ ಮಾಡಲಾಗಿದೆ.

ಇವರು ಓರ್ವ ಉತ್ತಮ ಕ್ರಿಕೆಟ್‌ ಆಟಗಾರರಾಗಿದ್ದು, ಪತ್ರಕರ್ತರ ಮತ್ತು ಪೊಲೀಸ್‌ ಇಲಾಖೆಯವರ ನಡುವಿನ ಸೌಹಾರ್ದತೆಗಾಗಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕ್ರಿಕೆಟ್‌ ಪಂದ್ಯಾಟವನ್ನು ಏರ್ಪಡಿಸಿ ಗಮನ ಸೆಳೆದಿದ್ದರು.

LEAVE A REPLY

Please enter your comment!
Please enter your name here