ಕಾಣಿಯೂರು:ಪಳ್ಳತ್ತಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಮುಖ್ಯಮಂತ್ರಿಯಾಗಿ 7 ನೇ ತರಗತಿಯ ಮಹಮ್ಮದ್ ಅನಾಸ್ ಮತ್ತು ಉಪ ಮುಖ್ಯಮಂತ್ರಿಯಾಗಿ 6 ನೇ ತರಗತಿಯ ಮಹಮ್ಮದ್ ಫಝಲ್ ಆಯ್ಕೆಯಾಗಿದ್ದಾರೆ.
ಶಿಕ್ಷಣ ಮಂತ್ರಿಯಾಗಿ ಸಮ್ನಾ, ಆರೋಗ್ಯ ಮಂತ್ರಿಯಾಗಿ ಜಾಸಿರ್, ಕ್ರೀಡಾ ಮಂತ್ರಿಯಾಗಿ ಫರ್ಹಾನ, ಸಾಂಸ್ಕೃತಿಕ ಮಂತ್ರಿಯಾಗಿ ಫರ್ಹ, ನಸೀಬ, ಸ್ವಚ್ಛತಾ ಮಂತ್ರಿಯಾಗಿ ತಸ್ರೀಫ್, ಆಹಾರ ಮಂತ್ರಿಯಾಗಿ ಲಿಯಾನ, ಮಹ್ಶೂಕಾ, ನೀರಾವರಿ ಮಂತ್ರಿಯಾಗಿ ಅಸೀಬ್, ಗ್ರಂಥಾಲಯ ಮಂತ್ರಿಯಾಗಿ ಸನಾ ಆಯ್ಕೆಯಾದರು.
ಶಾಲಾ ಮುಖ್ಯಗುರು ಸೀತಾರಾಮ ಕೆ ಜಿ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಶಿಕ್ಷಕರಾದ ಕುಶಾಲಪ್ಪ ಗೌಡ, ರಂಗನಾಥ, ಶಿಕ್ಷಕಿಯರಾದ ಸರೋಜ, ಝರೀನಾ ಸಹಕರಿಸಿದರು