ಪಾಣಾಜೆ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಒಕ್ಕೂಟದ ಪದಗ್ರಹಣ, ಧಾರ್ಮಿಕ ಸಭೆ

0

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು, ಬೆಟ್ಟಂಪಾಡಿ ವಲಯ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಪಾಣಾಜೆ ಇದರ ಆಶ್ರಯದಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪಾಣಾಜೆ ಇದರ ಸಹಕಾರದೊಂದಿಗೆ ವೇದ ಮೂರ್ತಿ ಶ್ರೀಕೃಷ್ಣ ಭಟ್ ಬಟ್ಯಮೂಲೆ ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಒಕ್ಕೂಟದ ಪದಗ್ರಹಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ  ಜೂ.19 ರಂದು ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು.
ಬೆಳಿಗ್ಗೆ  ಪೂಜೆ ಪ್ರಾರಂಭವಾಗಿ ನಂತರ ಮಹಾ ಮಂಗಳಾರತಿ ನಡೆಯಿತು.  ನಂತರ ನಡೆದ ಧಾರ್ಮಿಕ ಸಭೆಯನ್ನು ಯೋಜನೆಯ ತಾಲೂಕು ಯೋಜನಾಧಿಕಾರಿ ಆನಂದ.ಕೆ ದೀಪ ಬೆಳಗಿಸಿ ತೆಂಗಿನ ಹಿಂಗಾರ ಅರಳಿಸಿ ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು. ವೇದ ಮೂರ್ತಿ ಶ್ರೀಕೃಷ್ಣ ಭಟ್ ಬಟ್ಯಮೂಲೆ ಧಾರ್ಮಿಕ ಉಪನ್ಯಾಸ ನೀಡಿದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ ಕಡಮಾಜೆ, ಪೂಜಾ ಸಮಿತಿ ಅಧ್ಯಕ್ಷ, ದ.ಕ ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಜನಜಾಗೃತಿ ವೇದಿಕೆಯ ಮಾಜಿ ವಲಯಾಧ್ಯಕ್ಷ ಸದಾಶಿವ ರೈ ಸೂರಂಬೈಲು, ಒಕ್ಕೂಟದ ಬೆಟ್ಟಂಪಾಡಿ ವಲಯಾಧ್ಯಕ್ಷ ನವೀನ್ ಕುಮಾರ್. ಎಂ, ಪಾಣಾಜೆ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಉದ್ಯಮಿ ಉಪೇಂದ್ರ ಬಲ್ಯಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ಅಧ್ಯಕ್ಷತೆ ವಹಿಸಿದ್ದರು.
ಒಕ್ಕೂಟದ ಪದಗ್ರಹಣ – ಪಾಣಾಜೆ  ನಿಕಟಪೂರ್ವ ಒಕ್ಕೂಟದ ಪದಾಧಿಕಾರಿಗಳಾದ ಅಧ್ಯಕ್ಷೆ ಯಶೋಧಾ ಒಡ್ಯ, ಉಪಾಧ್ಯಕ್ಷ ಉದಯ ಕುಮಾರ್ ರೈ ಸೂರಂಬೈಲು, ಕಾರ್ಯದರ್ಶಿ ಗೋಪಾಲ ಮಣಿಯಾಣಿ ದೇವಸ್ಯ, ಜತೆ ಕಾರ್ಯದರ್ಶಿ ಶೀಲಾವತಿ ಮಾಯಿಲಕಾನ, ಕೋಶಾಧಿಕಾರಿ ತಿಮ್ಮಪ್ಪ ಕುಲಾಲ್ ಪಿದಾರ ಇವರು ನೂತನ ಒಕ್ಕೂಟದ ಅಧ್ಯಕ್ಷ ಐತ್ತಪ್ಪ ನಾಯ್ಕ ತೂಂಬಡ್ಕ, ಉಪಾಧ್ಯಕ್ಷೆ ಭವಾನಿ ಶ್ರೀಧರ ನಾಯ್ಕ, ಕಾರ್ಯದರ್ಶಿ ಅನಿತ, ಜತೆ ಕಾರ್ಯದರ್ಶಿ ಲತಾ.ಡಿ ನಾಯ್ಕ, ಕೋಶಾಧಿಕಾರಿ ಉದಯ ಕುಮಾರ್ ಇವರುಗಳಿಗೆ ಗಣ್ಯರ ಸಮ್ಮುಖದಲ್ಲಿ ವೀಳ್ಯ ಹಸ್ತಾಂತರಿಸುವ ಮೂಲಕ ಜವಾಬ್ದಾರಿ ಹಸ್ತಾಂತರಿಸಿದರು.
ನೂತನ ಪಾಣಾಜೆ ‘ಎ’ ಒಕ್ಕೂಟದ ಪದಾಧಿಕಾರಿಗಳಾದ ಅಧ್ಯಕ್ಷೆ ಕಮಲ ಬಾಳೆಮೂಲೆ, ಉಪಾಧ್ಯಕ್ಷ ಧನ್ ರಾಜ್ ವಾಟೆಡ್ಕ, ಕಾರ್ಯದರ್ಶಿ ಜನಾರ್ದನ ಕೊಂದಲ್ಕಾನ, ಜತೆ ಕಾರ್ಯದರ್ಶಿ ಪ್ರಮೀಳಾ ಬೊಳ್ಳಿಂಬಳ, ಕೋಶಾಧಿಕಾರಿ ವೀಣಾ ಕಲ್ಲಪದವು ಇವರಿಗೆ ಗಣ್ಯರು ವೀಳ್ಯ ನೀಡಿ ಜವಾಬ್ದಾರಿ ನೀಡಲಾಯಿತು.
ಗ್ರೀಷ್ಮ.ಜಿ ಪ್ರಾರ್ಥಿಸಿ, ಗೋಪಾಲ ಮಣಿಯಾಣಿ ಸ್ವಾಗತಿಸಿದರು. ಕಾರ್ಯದರ್ಶಿ ಅನಿತ ಸಾಧನಾ ವರದಿ ವಾಚಿಸಿದರು. ಸೇವಾ ಪ್ರತಿನಿಧಿ ಜಯಶ್ರೀ. ಡಿ ವಂದಿಸಿದರು. ವಲಯ ಮೆಲ್ವೀಚಾರಕ ಶಿವಪ್ಪ. ಎಂ.ಕೆ ಕಾರ್ಯಕ್ರಮ ನಿರೂಪಿಸಿದರು. ನಿಕಟಪೂರ್ವ ಪದಾಧಿಕಾರಿಗಳಿಗೆ, ಅತಿಥಿಗಳಿಗೆ ಹಾಗೂ ದಾಖಲಾತಿ ಸಮಿತಿ ಸದಸ್ಯರುಗಳಾದ ಜಯಶ್ರೀ ತೂಂಬಡ್ಕ, ಜನಾರ್ದನ. ಕೆ, ಅನಿತ ದೇವಸ್ಯ, ಯಮುನಾ ಬೇರಿಕೆ, ಪವಿತ್ರ.ಕೆ ಇವರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮಧ್ಯಾಹ್ನ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು. ಉಪ್ಪಳಿಗೆ ಒಕ್ಕೂಟದ ಸೇವಾ ಪ್ರತಿನಿಧಿ ಭಾರತಿ ಉಪ್ಪಳಿಗೆ, ಪಾಣಾಜೆ ಎ ಒಕ್ಕೂಟದ ಸೇವಾ ಪ್ರತಿನಿಧಿ ಮಮತ, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಪೂಜಾ ಸಮಿತಿ ಸದಸ್ಯರು ಹಾಗೂ ಊರವರು ಪಾಲ್ಗೊಂಡರು.

LEAVE A REPLY

Please enter your comment!
Please enter your name here