ಪುತ್ತೂರು : ಚಿಕ್ಕಮುಡ್ನೂರು ಗ್ರಾಮದ ಬಡಾವು ದಿ.ಸೇಸಪ್ಪ ಗೌಡರ ಪತ್ನಿ, ಬಡಾವು ಕುಟುಂಬದ ಹಿರಿಯರಾಗಿದ್ದ ಚೆನ್ನಮ್ಮ(96ವ.)ರವರು ಹೃದಯಾಘಾತದಿಂದ ಜೂ.18ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ ಸೋಮಪ್ಪ ಗೌಡ ಬಡಾವು, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಲೆಕ್ಕಪರಿಶೋಧಕ ಶೀನಪ್ಪ ಗೌಡ ಬಡಾವು, ದರ್ಬೆ ಪ್ರಶಾಂತ್ ಮಹಲ್ನ ಮ್ಯಾನೇಜರ್ ರಾಮಣ್ಣ ಗೌಡ ಬಡಾವು, ಪುತ್ರಿ ಕಮಲ ಮೈಸೂರು, ಅಳಿಯ ನಿವೃತ್ತ ಪೊಲೀಸ್ ಅಧಿಕಾರಿ ಕಮಲಾಕ್ಷ ಮೈಸೂರು ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.