ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

0

ಪುತ್ತೂರು: 2021-22 ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ವಿಶೇಷ ಸಾಧನೆಗೈದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ವಾಣಿಜ್ಯ ವಿಭಾಗದಲ್ಲಿ 593 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯದಲ್ಲಿ ನಾಲ್ಕನೇ ರ‍್ಯಾಂಕ್ ಮತ್ತು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ದೀಪ್ನಾ ಜೆ (ಕಾಸರಗೋಡಿನ ಮುಂಡಿತ್ತಡ್ಕದ ಎಸ್. ನಾರಾಯಣ ಮತ್ತು ಪುಷ್ಪ ಕೆ ದಂಪತಿ ಪುತ್ರಿ), ವಿಜ್ಞಾನ ವಿಭಾಗದಲ್ಲಿ 594 ಅಂಕಗಳನ್ನು ಗಳಿಸುವುದರ ಮೂಲಕ ರಾಜ್ಯದಲ್ಲಿ ಐದನೇ ರ‍್ಯಾಂಕ್ ಮತ್ತು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮನ್ವಿತ ಎನ್ ಪಿ(ಕಾಸರಗೋಡಿನ ನೀರ್ಚಾಲಿನ ಪುರುಷೋತ್ತಮ ಶರ್ಮ ಮತ್ತು ಸುಮಾ ದಂಪತಿ ಪುತ್ರಿ), ಕಲಾ ವಿಭಾಗದಲ್ಲಿ 580 ಅಂಕಗಳನ್ನು ಪಡೆಯುವುದರ ಮೂಲಕ ತಾಲೂಕಿನಲ್ಲಿ ಪುತ್ತೂರು ಪ್ರಥಮ ಸ್ಥಾನ ಪಡೆದ ವಸುದೇವ ತಿಲಕ್(ಉಡುಪಿಯ ಹೆಬ್ರಿಯ ಸಹದೇವ ಶೆಟ್ಟಿ ಮತ್ತು ವಸಂತ ಶೆಟ್ಟಿ ದಂಪತಿ ಪುತ್ರ), ವಿಜ್ಞಾನ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು 589 ಅಂಕಗಳನ್ನು ಪಡೆದು ರಾಜ್ಯದಲ್ಲಿ ಹತ್ತನೇ ರ‍್ಯಾಂಕ್ ಮತ್ತು ಕಾಲೇಜಿನಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ ಸ್ತುತಿ ಎಂ. ಎಸ್(ಪುತ್ತೂರಿನ ನೆಹರೂನಗರದ ಶ್ರೀಕೃಷ್ಣ ಗಣರಾಜ್ ಭಟ್ ಮತ್ತು ಸೌಮ್ಯ ಎಂ ದಂಪತಿ ಪುತ್ರಿ), ಪ್ರಾಪ್ತಿ ಗಂಭೀರ್(ಪುತ್ತೂರಿನ ಕೈಕಾರದ ವಿರೇಂದ್ರ ಎನ್ ಗಂಭೀರ್ ಮತ್ತು ಸೌಮ್ಯ ದಂಪತಿ ಪುತ್ರಿ) ಮತ್ತು ಎಂ. ವಿಶಾಖ್ ಕಾಮತ್(ಪುತ್ತೂರಿನ ಬೊಳುವಾರಿನ ಎಂ. ವಿದ್ಯಾಧರ್ ಕಾಮತ್ ಮತ್ತು ಎಂ. ಮುಕ್ತ ಕಾಮತ್ ದಂಪತಿ ಪುತ್ರ), ವಾಣಿಜ್ಯ ವಿಭಾಗದಲ್ಲಿ 588 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯದಲ್ಲಿ ಒಂಭತ್ತನೇ ರ‍್ಯಾಂಕ್ ಮತ್ತು ಕಾಲೇಜಿನಲ್ಲಿ ದ್ವಿತೀಯ ಸ್ಥಾನ ಪಡೆದ ಚೈತ್ರಾ ಎನ್(ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯದ ಚಂದ್ರ ಮತ್ತು ಶಶಿಕಲಾ ದಂಪತಿ ಪುತ್ರಿ), 587 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ ಚರೀಷ್ಮಾ ಎ(ಬಾಳಿಲದ ಸದಾನಂದ ಗೌಡ ಮತ್ತು ಚಂದ್ರಾವತಿ ದಂಪತಿ ಪುತ್ರಿ), ಕಲಾ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು 579 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಗಳಿಸಿದ ದಿಶಾ ಎಂ(ಉರಿಮಜಲಿನ ವಿಶ್ವನಾಥ ಎಂ ಮತ್ತು ವಿದ್ಯಾ ಕೆ ದಂಪತಿ ಪುತ್ರಿ) ಮತ್ತು ವರ್ಷಾ ಎ (ಶಿವಮೊಗ್ಗದ ಭದ್ರಾವತಿಯ ಆನಂದ ರಾಜ್ ಆರ್ ಮತ್ತು ದೀಪಾಲಕ್ಮೀ ಕೆ ದಂಪತಿ ಪುತ್ರಿ), 576 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ ಅಕ್ಷತಾ ಎಂ(ಬಂಟ್ವಾಳ ಬುಡೋಳಿಯ ಸಂಜೀವ ಮತ್ತು ವನಿತಾ ದಂಪತಿ ಪುತ್ರಿ) ಅವರಿಗೆ ಶಾಲು ಹೊದಿಸಿ, ಪುಸ್ತಕ ಮತ್ತು ಸಿಹಿ ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಕೃಷ್ಣಪ್ರಸಾದ್ ನಡ್ಸಾರ್, ಸದಸ್ಯರಾದ ಡಾ. ಕೆ.ಎನ್. ಸುಬ್ರಹ್ಮಣ್ಯ, ವತ್ಸಲಾ ರಾಜ್ಞಿ, ಪ್ರಾಂಶುಪಾಲ ಮಹೇಶ ನಿಟಿಲಾಪುರ, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ, ವಿದ್ಯಾರ್ಥಿಗಳ ಹೆತ್ತವರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here