ಜೂ. 21: ರೇಡಿಯೋ ಪಾಂಚಜನ್ಯದಲ್ಲಿ ‘ದೈಹಿಕ ಆರೋಗ್ಯ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ಯೋಗ’ ನೇರಫೋನ್ ಇನ್ ಕಾರ್ಯಕ್ರಮ

0

ಪುತ್ತೂರು: ಯೋಗವನ್ನು ನೀ ಮಾಡುತ್ತಿದ್ದರೇ ರೋಗವನ್ನು ನೀ ತಡೆಯಬಹುದು ಯೋಗ ಮಾಡಿ ಆರೋಗ್ಯವಾಗಿರಿ ಎಂಬ ಧ್ಯೇಯದೊಂದಿಗೆ ಸೇಡಿಯಾಪು ಆಗ್ರೋ ಸೇಲ್ಸ್ ಬೊಳುವಾರು ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ರೇಡಿಯೋ ಪಾಂಚಜನ್ಯ 90.8 ಎಫ್.ಎಂ.ನಲ್ಲಿ ಜೂ. 21ರಂದು ಸಂಜೆ 8 ರಿಂದ 9ರವರೆಗೆ ‘ದೈಹಿಕ ಆರೋಗ್ಯ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ಯೋಗ’ ಈ ವಿಚಾರವಾಗಿ ನೇರಫೋನ್ ಇನ್ ಕಾರ್ಯಕ್ರಮ ಹಾಗೂ ಯೋಗದ ಕುರಿತು ಕ್ವಿಝ್(ರಸಪ್ರಶ್ನೆ)ನಲ್ಲಿ ಭಾಗವಹಿಸಿ ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಆಕರ್ಷಕ ಬಹುಮಾನ ಪಡೆಯಬಹುದಾಗಿದೆ.

ನೇರಫೋನ್ ಇನ್ ಕಾರ್ಯಕ್ರಮದಲ್ಲಿ ಪುತ್ತೂರು ಬೊಳುವಾರಿನ ಯೋಗ ಆರೋಗ್ಯ ಸಲಹೆಗಾರರಾದ ಡಾ. ಮಹಾಬಲ ಅವರು ಭಾಗವಹಿಸಲಿದ್ದಾರೆ. ಯಾರೆಲ್ಲಾ ಯೋಗ ಮಾಡಬಹುದು, ಯೋಗದಿಂದ ಆಗುವ ಲಾಭ ಏನು? ಯೋಗ ರೋಗವನ್ನು ದೂರವಾಗಿಸುತ್ತಾ ಇಂತಹ ಹಲವಾರು ಪ್ರಶ್ನೆಗಳಿಗೆ ಗೊಂದಲಗಳಿದ್ದರೆ ಡಾ. ಮಹಾಬಲ ಅವರೊಂದಿಗೆ ಮಾತನಾಡಿ ಉತ್ತರ ಪಡೆದುಕೊಳ್ಳಬಹುದು.

ನೇರಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಲು ದೂರವಾಣಿ ಸಂಖ್ಯೆ 18251 298499  ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here