ಪುತ್ತೂರು: ಸಾಹಿತ್ಯಾಸಕ್ತಿಯನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳಬೇಕು. ಕಲಿಕೆಯೊಂದಿಗೆ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳವುದರಿಂದ ಪದ ಭಂಡಾರ ಹೆಚ್ಚಾಗುತ್ತದೆ. ಕವಿಗಳು ವಿಶಿಷ್ಟ ಪದ ಬಳಕೆಯ ಕೌಶಲ್ಯವನ್ನು ಹೊಂದಿರಬೇಕು. ಕವಿಯಾಗಲು ಬಯಸುವವರು ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ರೇಡಿಯೋ ಪಾಂಚಜನ್ಯ ಹಾಗೂ ಚಿಗುರೆಲೆ ಸಾಹಿತ್ಯ ಬಳಗದ ಜಂಟಿ ಆಶ್ರಯದಲ್ಲಿ ನಡೆದ ‘ವರ್ಷಧಾರೆ ಸಾಹಿತ್ಯ ಸಂಭ್ರಮ 2022’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾತನಾಡುವ ಸಾಮರ್ಥ್ಯದೊಂದಿಗೆ ಇತರರ ಮಾತುಗಳನ್ನು ಆಲಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಕಾಲೇಜು ಆವರಣದಲ್ಲಿರುವ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಪಾಂಚಜನ್ಯದಲ್ಲಿ ಉಚಿತವಾಗಿ ಕಾರ್ಯಕ್ರಮ ನೀಡುವ ಅವಕಾಶವನ್ನು ಒದಗಿಸಲಾಗುತ್ತಿದೆ. ಎಲ್ಲರೂ ಅದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ರಮೇಶ್ ಉಳಯ ಮಾತನಾಡಿ ಮಳೆಯನ್ನು ಮಳೆಯಾಗಿ ನೋಡಿದರೆ ಮಳೆ. ಹೆಣ್ಣಾಗಿ ನೋಡಿದರೆ ಹೆಣ್ಣು. ಮಗುವಾಗಿ ನೋಡಿದರೆ ಮಗು. ಹೀಗೆ ಹಲವು ಸ್ತರಗಳಲ್ಲಿ ಮಳೆಯ ವರ್ಣನೆಯನ್ನು ನೋಡಬಹುದು ಎಂದರು. ಕವಿಗೋಷ್ಠಿಗೆ ನೀಡಿದ ವಿಷಯ ಬಗ್ಗೆ ಮಾತ್ರವಲ್ಲದೇ, ಅದರ ಹೊರತಾಗಿಯೂ ಯೋಚಿಸಿ ಕವನ ರಚಿಸುವ ಕೌಶಲ್ಯವನ್ನು ಕವಿಯಾದವನು ಹೊಂದಿರಬೇಕು ಎಂದು ಹೇಳಿದರು.
ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಹಾಗೂ ಕಾರ್ಯದರ್ಶಿ ಪದ್ಮಾ ಕೆ.ಆರ್ ಆಚಾರ್ಯ ಮಾತನಾಡಿ ಶುಭ ಹಾರೈಸಿದರು. ತೇಜಸ್ವಿ ರಾಜೇಶ್ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಕವಿಗೋಷ್ಠಿ ಸಂಚಾಲಕಿ ಅಪೂರ್ವ ಕಾರಂತ್ ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಸುಪ್ರೀತಾ ಚರಣ್ ಪಾಲಪ್ಪೆ, ಧನ್ವಿತಾ ಕಾರಂತ್ ಅಳಿಕೆ, ಶ್ರೀಕಲಾ ಕಾರಂತ್ ಅಳಿಕೆ, ಅನ್ನಪೂರ್ಣ ಎನ್. ಕೆ, ರಮ್ಯ ಎನ್. ನೆಕ್ಕರಾಜೆ, ಅರ್ಚನಾ ಎಂ. ಕುಂಪಲ, ಮಂಜುಶ್ರೀ ನಲ್ಕ, ವಿಖ್ಯಾತಿ ಬೆಜ್ಜoಗಳ, ಶಿವಪ್ರಸಾದ್ ಕೊಕ್ಕಡ, ಕಾವ್ಯಶ್ರೀ ಅಳಿಕೆ, ಮಲ್ಲಿಕಾ. ಜೆ. ರೈ, ಮಾನಸ ವಿಜಯ್ ಕೈಂತಜೆ, ಸಿದ್ಧನಗೌಡ, ದೀಪ್ತಿ ಅಡ್ಡಂತಡ್ಕ, ಮಹಮ್ಮದ್ ಸಿಂಸಾರುಲ್ ಹಕ್, ಜೆಸ್ಸಿ. ಪಿ. ವಿ, ಉಮಾಶಂಕರಿ ಮರಿಕೆ, ಪ್ರತೀಕ್ಷಾ ಆರ್. ಕಾವು, ವಿಶ್ವನಾಥ್ ಕುಲಾಲ್, ಹಿತೇಶ್ ಕುಮಾರ್ ನೀರ್ಚಾಲು, ಶಾಂತಾ ಪುತ್ತೂರು, ಅಪೂರ್ವ ಕಾರಂತ್, ನಳಿನಿ. ಡಿ. ನವ್ಯ ಶ್ರೀ ಮಾಯಿಲ ಕೊಚ್ಚಿ, ಪೂರ್ಣಿಮಾ ಪೆರ್ಲಂಪಾಡಿ, ಅಶೋಕ್. ಎನ್. ಕಡೆಶಿವಾಲಯ, ಸೌಜನ್ಯ. ಬಿ. ಎಂ. ಕೆಯ್ಯೂರು, ಆನಂದ ರೈ ಅಡ್ಕಸ್ಥಳ, ಸಂಜೀವ ಮಿತ್ತಳಿಕೆ, ಶ್ರುತಿಕಾ ಓಜಾಲ, ವಿಭಾಶ್ರೀ ಭಟ್, ಚೈತ್ರಾ ಮಾಯಿಲಕೊಚ್ಚಿ, ಚಂದ್ರಮೌಳಿ ಅಭಿನವ್ ಹಾಗೂ ನಾರಾಯಣ ಕುಂಬ್ರ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಅದೃಷ್ಟವಂತ ಕವಿಯಾಗಿ ಈ ಬಾರಿ ಕು. ಮಂಜುಶ್ರೀ ನಲ್ಕ ಆಯ್ಕೆಯಾದರು.
ಚೈತ್ರಾ ಮತ್ತು ನವ್ಯಶ್ರೀ ಮಾವಿಲಕೊಚ್ಚಿ ಪ್ರಾರ್ಥಿಸಿದರು. ಪ್ರತೀಕ್ಷಾ ಆರ್. ಕಾವು ಸ್ವಾಗತಿಸಿದರು. ವಿಭಾಶ್ರೀ ಭಟ್ ವಂದಿಸಿದರು. ಸಭಾ ಕಾರ್ಯಕ್ರಮವನ್ನು ಸೌಜನ್ಯ ಬಿ.ಎಂ ಕೆಯ್ಯೂರು ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಚೈತ್ರಾ ಮಾಯಿಲಕೊಚ್ಚಿ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕರಾಗಿ ತೇಜಸ್ವಿನಿ ರಾಜೇಶ್, ಪ್ರಶಾಂತ್ ಮತ್ತು ನಾರಾಯಣ ಕುಂಬ್ರ ಸಹಕರಿಸಿದರು.