ಪುತ್ತೂರು : ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಪ್ರಾರಂಭೋತ್ಸವ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ಸಂಸ್ಥೆಯಲ್ಲಿ ನಡೆಯಿತು.
ರೋಟರಿ ಕ್ಲಬ್ 3181ನ ಝೋನಲ್ ಲೆಫ್ಟಿಂನೆಂಟ್ ಎ. ಕೆ ಮಣಿಯಾಣಿ 2022-23ನೇ ಸಾಲಿನ ಖಾಸಗಿಯಾಗಿ ಎಸ್ಎಸ್ಎಲ್ ಸಿ, ಪಿಯುಸಿ ಹಾಗೂ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಶೈಕ್ಷಣಿಕ ಚಟುವಟಿಕೆಗಳನ್ನು ಉದ್ಘಾಟಿಸಿದರು. 2021-22ನೇ ಸಾಲಿನಲ್ಲಿ ಖಾಸಗಿಯಾಗಿ ಪಿಯುಸಿ ಕಲಾ ವಿಭಾಗದಲ್ಲಿ 502 ಅಂಕ ಪಡೆದ ಪುನೀತ್ ಎನ್ ಎಂ ಅವರನ್ನು ಸನ್ಮಾನಿಸಲಾಯಿತು. ಬೆಳ್ಳಾರೆ ಟೌನ್ ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷ ಕೇಶವಮೂರ್ತಿ ಕೆ, ಕಾರ್ಯದರ್ಶಿ ವಿನಯ ಕುಮಾರ್, ಉಪನ್ಯಾಸಕ ಚಂದ್ರಶೇಖರ್ ಆಲೆಟ್ಟಿ, ಉಪನ್ಯಾಸಕಿ ಅಮಿತಾ ವೈ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಶರತ್ ವಂದಿಸಿದರು. ಉಪನ್ಯಾಸಕ ಗಣೇಶ್ ನಾಯಕ್ ಪುತ್ತೂರು ಕಾರ್ಯಕ್ರಮ ನಿರ್ವಹಿಸಿದರು.