ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರಿಗೆ ಎಂಎ ಎಜ್ಯುಕೇಶನ್‌ನಲ್ಲಿ ಪ್ರಥಮ ರ್‍ಯಾಂಕ್

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದಲ್ಲಿನ ಸಂತ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ಹಾಗೂ ಸಹಾಯಕ ಪ್ರಾಧ್ಯಾಪಕರಾಗಿರುವ ವಂ|ಸ್ಟ್ಯಾನಿ ಪಿಂಟೋರವರು ಎಂಎ ಇನ್ ಎಜ್ಯುಕೇಶನ್‌ನಲ್ಲಿ ಪ್ರಥಮ ರ್‍ಯಾಂಕ್‌ನ್ನು ಪಡೆದುಕೊಂಡಿದ್ದಾರೆ.
ಜೂನ್ 16 ರಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿ ಜರಗಿದ 31 ಮತ್ತು 32ನೇ ಘಟಿಕೋತ್ಸವದಲ್ಲಿ ವಂ|ಸ್ಟ್ಯಾನಿ ಪಿಂಟೋರವರಿಗೆ ಪ್ರಥಮ ರ್‍ಯಾಂಕ್‌ನ್ನು ಪ್ರದಾನ ಮಾಡಿರುತ್ತಾರೆ. ವಂ|ಸ್ಟ್ಯಾನಿ ಪಿಂಟೋರವರು ಈಗಾಗಲೇ ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂಎ ಇಂಗ್ಲೀಷ್ ಪದವಿಯನ್ನು ಗಳಿಸಿದ್ದು ಮಾತ್ರವಲ್ಲದೆ ಎಜ್ಯುಕೇಶನ್‌ನಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಓಇಖಿ) ಉತ್ತೀರ್ಣರಾಗಿರುತ್ತಾರೆ. ಪ್ರಸ್ತುತ ಅವರು ಸಾರ್ವಜನಿಕ ಆಡಳಿತ(ಪಬ್ಲಿಕ್ ಅಡ್ಮಿಸ್ಟ್ರೇಶನ್)ದಲ್ಲಿ ಎಂಎ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ವಂ|ಸ್ಟ್ಯಾನೀರವರು ಎಂಎ ಇಂಗ್ಲೀಷ್ ಹಾಗೂ ಎಂಎ ಎಜ್ಯುಕೇಶನ್‌ನ್ನು ಪ್ರಥಮ ರ್‍ಯಾಂಕ್‌ನೊಂದಿಗೆ ಎರಡು ಚಿನ್ನದ ಪದಕಗಳನ್ನು ಪಡೆದಿರುತ್ತಾರೆ.

 


ಬೆಳ್ತಂಗಡಿಯ ಇಂದುಬೆಟ್ಟು ಚರ್ಚ್‌ನ ನಿವಾಸಿ ರೋಮನ್ ಪಿಂಟೋ ಹಾಗೂ ಸಿಸಿಲಿಯಾ ಡಿ’ಸೋಜರವರ ಏಳು ಮಂದಿ ಮಕ್ಕಳ ಪೈಕಿ ಆರನೇಯವರಾಗಿ ಜನಿಸಿದ ವಂ|ಸ್ಟ್ಯಾನೀ ಪಿಂಟೋರವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಬೆಳ್ತಂಗಡಿ ಶಾಲೆಯಲ್ಲಿ ಪೂರೈಸಿದ್ದು, ಪದವಿ ಪೂರ್ವ ಶಿಕ್ಷಣವನ್ನು ರುಜಾಯ್ ಗ್ಲ್ಯಾಡ್ಸನ್ ಕಾಲೇಜಿನಲ್ಲಿ, ಎಸ್‌ಡಿಎಂ ಕಾಲೇಜಿನಲ್ಲಿ ಇಂಗ್ಲೀಷ್ ಮೇಜರ್ ಹಾಗೂ ಜರ್ನಲಿಸಂ ಶಿಕ್ಷಣವನ್ನು, ದೇವಶಾಸ್ತ್ರ ಹಾಗೂ ತತ್ವಶಾಸ್ತ್ರ ಯಾಜಕೀ ಧಾರ್ಮಿಕ ಶಿಕ್ಷಣವನ್ನು ಸೈಂಟ್ ಪೀಯೂಸ್ ಸೆಮಿನರಿಯಲ್ಲಿ ಪೂರೈಸಿರುತ್ತಾರೆ. ಬಳಿಕ ರೀಜೆನ್ಸಿ ಶಿಕ್ಷಣವನ್ನು ಮಂಗಳೂರಿನ ಬಜ್ಜೋಡಿ ಪಾಲನಾ ಕೇಂದ್ರದಲ್ಲಿ ಹಾಗೂ ದಿಯಾಕೋನ್ ಆಗಿ ಫಜೀರ್ ಚರ್ಚ್‌ನಲ್ಲಿ ವಂ|ಸ್ಟ್ಯಾನೀರವರು ಸೇವೆ ಸಲ್ಲಿಸಿರುತ್ತಾರೆ. 2015, ಏಪ್ರಿಲ್ 16 ರಂದು ನಿಕಟಪೂರ್ವ ಧರ್ಮಾಧ್ಯಕ್ಷರಾದ ವಂ|ಅಲೋಶಿಯಸ್ ಪಾವ್ಲ್ ಡಿ’ಸೋಜರವರಿಂದ ವಂ|ಸ್ಟ್ಯಾನಿ ಪಿಂಟೋರವರು ಯಾಜಕೀದೀಕ್ಷೆಯನ್ನು ಪಡೆದುಕೊಂಡ ಬಳಿಕ ಸಹಾಯಕ ಧರ್ಮಗುರುಗಳಾಗಿ ಬಿಜೈ ಚರ್ಚ್(2 ವರ್ಷ)ನಲ್ಲಿ, ಪೆರ್ಮನ್ನೂರು ಚರ್ಚ್(2 ವರ್ಷ)ನಲ್ಲಿ, ಮಡಂತ್ಯಾರು ಚರ್ಚ್(1 ವರ್ಷ)ನಲ್ಲಿ, ಮಂಗಳೂರು ಜೆಪ್ಪು ವರ್ಕ್‌ಶಾಪ್‌ನಲ್ಲಿ ಸಹಾಯಕ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here