ಜೂ.21: ಎಲ್ಲಾ ಶಾಲೆಗಳಲ್ಲಿ ಯೋಗ ದಿನಾಚರಣೆ ಆಚರಿಸುಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

0

  • ಜೂ.21 ರಂದು ಶನಿವಾರದ ವೇಳಾಪಟ್ಟಿಯಂತೆ ಅರ್ಧದಿನದ ತರಗತಿ, ಜೂ.25ರಂದು ಪೂರ್ಣ ದಿನದ ಶಾಲೆ

ಪುತ್ತೂರು: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಜೂ.21ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರುಗಳು ಹಾಗೂ ಸ್ಥಳೀಯ ಯೋಗ ಸಂಸ್ಥೆಗಳ ಸಹಕಾರದೊಂದಿಗೆ ಯೋಗ ದಿನಾಚರಣೆ ಯನ್ನು ಅರ್ಥಪೂರ್ಣವಾಗಿ ಆಚರಿಸುಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.


ಅಂದು ಶನಿವಾರದ ವೇಳಾಪಟ್ಟಿಯಂತೆ ಅರ್ಧದಿನದ ತರಗತಿಗಳನ್ನು ನಡೆಸಬೇಕು. ಅಲ್ಲದೆ ಮೊದಲ ಪಂದೂವರೆ ಗಂಟೆಯ ಅವಧಿಯಲ್ಲಿ ವಿದ್ಯಾರ್ಥಿಗಳ ವಯಸ್ಸಿಗೆ ಅನುಗುಣವಾದ ಯೋಗಾಸನಗಳ ಅಭ್ಯಾಸಗಳನ್ನು ಹಾಗೂ ಪ್ರದರ್ಶನಗಳನ್ನು ಹಮ್ಮಿಕೊಳ್ಳಬೇಕು. ಸದರಿ ದಿನದ ಪಾಠಗಳನ್ನು ಸರದೂಗಿಸಲು ಜೂ.25ರ ಶನಿವಾರದಂದು ಪೂರ್ಣ ದಿನದ ಶಾಲೆ ನಡೆಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here