ಲಂಚ, ಭ್ರಷ್ಟಾಚಾರ ಮುಕ್ತವಾಗುವತ್ತ ಗ್ರಾ.ಪಂ.ಗಳು-ನಾಯಕರ ಅಭಿಪ್ರಾಯಗಳು, ಪ್ರಯತ್ನಗಳು

0

  • ನೆಟ್ಟಣಿಗೆ ಮುಡ್ನೂರು ಗ್ರಾ.ಪಂ

ಲಂಚ, ಭ್ರಷ್ಟಾಚಾರ ಎಂಬುದು ಪ್ರಜಾಪ್ರಭುತ್ವದ ಕಗ್ಗೊಲೆ
ಇತ್ತೀಚಿನ ದಿನಗಳಲ್ಲಿ ಲಂಚ ಮತ್ತು ಭ್ರಷ್ಟಾಚಾರ ಲಂಗು, ಲಗಾಮಿಲ್ಲದೆ ಬೆಳೆಯುತ್ತಿದೆ. ಭ್ರಷ್ಟ ಅಧಿಕಾರಿಗಳಿಗೆ ಯಾರ ಭಯವೂ ಇಲ್ಲದಾಗಿದೆ. ನಮ್ಮ ದೇಶದ ಆಡಳಿತ ವ್ಯವಸ್ಥೆಯಲ್ಲಿ ಸರಕಾರಿ ಅಧಿಕಾರಿ ಸಾರ್ವಜನಿಕ ಸೇವ ಮಾಡಲಿಕ್ಕಿರುವವರು. ತನ್ನ ಸೇವೆಗೆ ಸರಕಾರ ಅವರಿಗೆ ತಕ್ಕ ವೇತನ ನೀಡುತ್ತದೆ. ಆದರೆ ಈ ಸೇವೆಗೆ ಲಂಚವನ್ನು ಪಡೆಯುವುದು ಆತ ಪ್ರಜಾಪ್ರಭುತ್ವಕ್ಕೆ ಮಾಡಿದ ಅಗೌರವವಾಗಿದೆ. ಅಲ್ಲದೆ, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಆದುದರಿಂದ ಅಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಒಗ್ಗಟ್ಟಿನಿಂದ ಹೋರಾಡಬೇಕು.ಜನಪ್ರತಿನಿಧಿಗಳು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಲಂಚ ನೀಡಿ ಕೈ ಸುಟ್ಟುಕೊಂಡ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮಾಧ್ಯಮದ ಮುಂದೆ ಲಂಚ ಪಡೆದ ಅಧಿಕಾರಿಗಳ ಮಾಹಿತಿಯನ್ನು ಬಹಿರಂಗಪಡಿಸುವ ಮೂಲಕ ಅವರ ದುಷ್ಟ ಬುದ್ದಿಯನ್ನು ಬಯಲು ಮಾಡಬೇಕು
                                                                                                                        -ರಾಮ ಮೇನಾಲ, ಸದಸ್ಯರು ನೆಟ್ಟಣಿಗೆ ಮುಡ್ನೂರು ಗ್ರಾ.ಪಂ

LEAVE A REPLY

Please enter your comment!
Please enter your name here