ಬಿಳಿಯೂರು ಸರಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ಸನ್ಮಾನ, ಪಠ್ಯಪುಸ್ತಕ ವಿತರಣೆ

0

ಪುತ್ತೂರು: ಬಿಳಿಯೂರು ಮಾಡತ್ತಾರು ಸರಕಾರಿ ಪ್ರೌಢಶಾಲೆಯಲ್ಲಿ 2021-22ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾದನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಉಚಿತ ಪಠ್ಯಪುಸ್ತಕ ವಿತರಣೆ ನಡೆಯಿತು.

 


ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಪವಿತ್ರ ಪಿ., ಮೇಘಾ ಟಿ.ಎಚ್., ಶ್ರಾವ್ಯ, ಮನ್ವಿತಾರವರನ್ನು ಎಸ್‌ಡಿಎಂಸಿ ವತಿಯಿಂದ ಸನ್ಮಾನಿಸಲಾಯಿತು. ದಾನಿ ಜಯವಿಕ್ರಂ ಸೊರಕೆರವರು ನಗದು ರೂಪದಲ್ಲಿ ನೀಡಿದ ರೂ.3000೦ವನ್ನು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೀಡಲಾಯಿತು. ಸುಂದರಿ, ಚಂದ್ರಶೇಖರ ಸೊರಕೆ ಮತ್ತು ಲೈಲಾಮಣಿರವರು ಸ್ಥಾಪಿಸಿದ ಶಾಶ್ವತ ದತ್ತಿ ನಿಧಿಯ ಬಡ್ಡಿ ರೂ.2000೦ ವೆಚ್ಚದ ನೋಟ್ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು.

ಸನ್ಮಾನ : 100 ಕ್ಕೆ 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ವಿಷಯವಾರು ಶಿಕ್ಷಕರು ಬಹುಮಾನ ನೀಡಿ ಗೌರವಿಸಿದರು. ಶಾಲಾ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ನಿವೃತ್ತ ದೈಹಿಕ ಶಿಕ್ಷಕಿ ವಂದನಾ ಶರತ್ ಮುದಲಾಜೆರವರನ್ನು ಸನ್ಮಾನಿಸಲಾಯಿತು.

ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಧನ್ಯಕುಮಾರ್ ರೈ ಮತ್ತು ಪೆರ್ನೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಎಸ್‌ಡಿಎಂಸಿ ಸದಸ್ಯ ತನಿಯಪ್ಪ ಪೂಜಾರಿ ಮಾತನಾಡಿ ಶುಭಹಾರೈಸಿದರು. ಪೆರ್ನೆ ಗ್ರಾ.ಪಂ.ಸದಸ್ಯ ಕೇಶವ ಸುಣ್ಣಾನ, ಬಿಳಿಯೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಅದ್ಯಕ್ಷ ರೋಹಿತಾಕ್ಷ ಬಾಣಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಜ್ಯೋತಿ ಕುಮಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಹಿಂದಿ ಶಿಕ್ಷಕ ಲೋಕೇಶ್ ಎಸ್. ವಂದಿಸಿದರು. ಗಣಿತ ಶಿಕ್ಷಕ ರಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು, ಶ್ರೀರಾಮ ಭಜನಾ ಮಂದಿರದ ಸದಸ್ಯರು, ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here