ಕಾಣಿಯೂರಿನಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಯ ನೋಂದಾವಣಾ ಕಾರ್ಯಕ್ರಮ

0

ಕಾಣಿಯೂರು: ಕಾರ್ಮಿಕ ಇಲಾಖೆ, ಜಿಲ್ಲಾಡಳಿತ, ಸಿ.ಎಸ್.ಸಿ ಇ ಗವರ್ನೆನ್ಸಿ ಸರ್ವಿಸಸ್ ಇಂಡಿಯಾ ಲಿ.ದ.ಕ.ಜಿಲ್ಲೆ, ಗ್ರಾಮ ಪಂಚಾಯತ್ ಕಾಣಿಯೂರು ಮತ್ತು 25 ನೇ ವರ್ಷಾಚರಣೆಯಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ(ರಿ) ಕಾಣಿಯೂರು
ಇದರ ಸಹಭಾಗಿತ್ವದಲ್ಲಿ 75 ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಯ ಉಚಿತ ನೋಂದಾವಣಾ ಶಿಬಿರ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಣಿಯೂರು ಗ್ರಾ.ಪಂ.ಪ್ರಭಾರ ಅಭಿವೃದ್ಧಿ ಅಧಿಕಾರಿ ದೇವರಾಜ್ ಕೆ. ಮಾತನಾಡಿ ಸರಕಾರದ ಉತ್ತಮ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಯುವಕ ಮಂಡಲದ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಪುತ್ತೂರು ಬೀಡಿ ಕಾರ್ಮಿಕರ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅಶೋರಾ ಕಾರ್ಮಿಕ ಯೋಜನೆಗಳ ಮಾಹಿತಿ ನೀಡಿ ಪಿಎಫ್ ಇಲ್ಲದ ಅಸಂಘಟಿತ ಕಾರ್ಮಿಕರಿಗೆ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆ ಅತ್ಯಂತ ಪ್ರಯೋಜನಕಾರಿಯಾಗಿದ್ದು ಅರ್ಹತೆ ಇರುವ ಎಲ್ಲರೂ ಈ ಯೋಜನೆಗೆ ಸೇರಬೇಕೆಂದು ಹೇಳಿದರು. ಕಾಣಿಯೂರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ವಂದನ್ ರವರು ಬ್ಯಾಂಕ್ ನಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಡೆಂಗ್ಯೂ, ಮಲೇರಿಯಾ ಮುಂತಾದ ರೋಗಿಗಳಿಗೆ 35 ರೂ. ಕಟ್ಟಿ ಜನರಕ್ಷಾ ವಿಮೆ ಮಾಡಿದರೆ 10000 ರೂ.ಆಸ್ಪತ್ರೆ ಖರ್ಚನ್ನು ನೀಡಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ಮಂಗಳೂರು ಕಾರ್ಮಿಕ ಇಲಾಖೆಯ ಭಾಗ್ಯಶ್ರೀ, ಬೀಡಿ ಕಾರ್ಮಿಕ ಆಸ್ಪತ್ರೆಯ ಡಿ.ಸಿ.ಸುರೇಶ್, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಉಪಾಧ್ಯಕ್ಷರಾದ ವಿಶ್ವನಾಥ ಓಡಬಾಯಿ, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಮಾಜಿ ಅಧ್ಯಕ್ಷ ದಯಾನಂದ ಗೌಡ ಕಟ್ಟತ್ತಾರು, ಕಣ್ವರ್ಷಿ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಪ್ರವೀಣ್ ಕೋಳಿಗದ್ದೆ, ಉಜ್ವಲ ಸಂಜೀವಿಣಿ ಒಕ್ಕೂಟ ಕಾಣಿಯೂರು ಇದರ ಅಧ್ಯಕ್ಷೆ ಸುಚಿತ್ರಾ ಕಟ್ಟತ್ತಾರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ ವಹಿಸಿದ್ದರು. ಯುವಕ ಮಂಡಲದ ಉಪಾಧ್ಯಕ್ಷ ಜಯಂತ ಅಬೀರ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ ಪೆರ್ಲೋಡಿ ವಂದಿಸಿದರು. ಮಾಜಿ ಅಧ್ಯಕ್ಷ ಪರಮೇಶ್ವರ ಅನಿಲ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಕಾರ್ಮಿಕ ಇಲಾಖೆಯ ಹರೀಶ್ ಓಡಬಾಯಿ, ಯುವಕ ಮಂಡಲದ ಸದಸ್ಯರಾದ ರಾಜೇಶ್ ಮೀಜೆ, ಜಗದೀಶ್ ಪೆರ್ಲೋಡಿ, ಕಿಶನ್ ಕಾಣಿಯೂರು, ಕರುಣಾಕರ ಬಂಡಾಜೆ, ಕೀರ್ತಿಕುಮಾರ್ ಎಲುವೆ, ಮೋಹನ್ ಪೆರ್ಲೋಡಿ, ರಚನ್ ಬರಮೇಲು, ಮಮತಾ ಅಗಳಿ, ಪಾರ್ವತಿ ಕಾಣಿಯೂರು ಅತಿಥಿಗಳನ್ನು ಗೌರವಿಸಿದರು.

ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಕಾಣಿಯೂರು‌, ಶ್ರೀ ಒಡಿಯೂರು ಗ್ರಾಮ ವಿಕಾಸ ಯೋಜನಾ ಘಟಕ, ಉಜ್ವಲ ಸಂಜೀವಿನಿ ಒಕ್ಕೂಟ ಕಾಣಿಯೂರು ಇವರು ಕಾರ್ಯಕ್ರಮದಲ್ಲಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here