ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಯೋಗ ದಿನಾಚರಣೆ

0

ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ .(ರಿ.) ಪುತ್ತೂರು, ಸಾರಸ್ವತ ಯುವ ಸಂಘ ಮತ್ತು ಸರಸ್ವತಿ ವಿದ್ಯಾರ್ಥಿ ಸಂಘ , ಶ್ರೀ ಸರಸ್ವತಿ ಮಹಿಳಾ ಮಂಡಳಿ ಇವುಗಳ ಸಹಯೋಗದಲ್ಲಿ ಶತಸಂಭ್ರಮ ಆಚರಣಾ ಸಮಿತಿಯ ನೇತೃತ್ವದಲ್ಲಿ ದರ್ಬೆಯ ಸಚ್ಚಿದಾನಂದ ಸಭಾಭವನದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಆಚರಣೆ ಹಾಗೂ ಸಾರಸ್ವತ ಮನೆಗಳಲ್ಲಿ ಮನೆಮಂದಿಯೊಂದಿಗೆ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು .

ಯೋಗ ಗುರು ಸುಬ್ರಾಯ ನಾಯಕ್ ಅಜೇರು ಅವರಿಂದ ಯೋಗ ತರಬೇತಿ

ಕಾರ್ಯಕ್ರಮ ಉದ್ಘಾಟಿಸಿದ ಯೋಗ ಗುರು ಸುಬ್ರಾಯ ನಾಯಕ್ ಅಜೇರು “ಯೋಗ ನಮ್ಮ ಬದುಕಿನ ಸ್ವಾಸ್ಥ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ” ಎಂದರು. ಮುಖ್ಯ ಅತಿಥಿ ಡಾ.ಅರ್ಚನಾ ದಿನನಿತ್ಯದ ಬದುಕಿನಲ್ಲಿ ಯೋಗದ ಮಹತ್ವ ಕುರಿತು ಮಾತನಾಡಿದರು. ನಿವೃತ್ತ ಸರಕಾರಿ ವಕೀಲ ಉದಯಶಂಕರ್ ಕುಕ್ಕಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಬಾಲಕೃಷ್ಣ ನಾಯಕ್ ಆಜೇರು, ಶತಸಂಭ್ರಮ ಸಮಿತಿಯ ಕೋಶಾಧಿಕಾರಿ ರಮೇಶ್ ಪ್ರಭು ಸಂಪ್ಯ, ಕಾರ್ಯ ದರ್ಶಿ ಹರಿಪ್ರಸಾದ್ ಪುಂಡಿಕಾಯ್, ಮಹಿಳಾ ಮಂಡಳಿಯ ಅಧ್ಯಕ್ಷೆ ರಂಜಿತಾ ಪ್ರಭು, ಮಹಿಳಾ ಮಂಡಳದ ಪದಾಧಿಕಾರಿಗಳು ಸೇರಿದಂತೆ ಹಲವರು ಯೋಗ ಗುರು ಸುಬ್ರಾಯ‌ನಾಯಕ್ ಅಜೇರು ಅವರ ಮಾರ್ಗ ದರ್ಶನದಲ್ಲಿ ನಡೆದ ಯೋಗಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಸರಸ್ವತಿ ಮಹಿಳಾ ಮಂಡಳಿಯ ಕಾರ್ಯದರ್ಶಿ ರೇಖಾ ರಮೇಶ್ ಪ್ರಭು ಪ್ರಾರ್ಥಿಸಿದರು. ಸುಚರಿತ. ಬಿ ಸ್ವಾಗತಿಸಿ, ಮಲ್ಲಿಕಾ ಕುಕ್ಕಾಡಿ ವಂದಿಸಿದರು. ಶತಸಂಭ್ರಮ ಆಚರಣಾ ಸಮಿತಿಯ ಕಾರ್ಯದರ್ಶಿ ಹರಿಪ್ರಸಾದ್ ಪುಂಡಿಕಾಯ್ ಕಾರ್ಯಕ್ರಮ‌ ನಿರ್ವಹಿಸಿದರು.

LEAVE A REPLY

Please enter your comment!
Please enter your name here