ಡೆಂಬಲೆ ಶಿವತ್ತಮಠ: ಮಾ| ಪುರ್ವಾನ್ಶ್ ಪ್ರಥಮ ವರ್ಷದ ಹುಟ್ಟುಹಬ್ಬ ಆಚರಣೆ

ರಾಮಕುಂಜ: ಹಳೆನೇರೆಂಕಿ ಸಮೀಪದ ಡೆಂಬಲೆ ಶಿವತ್ತಮಠ ಪ್ರಶಾಂತ್ ಹಾಗೂ ಅಂಕಿತಾ ಪಿ.ಎಸ್.ರವರ ಪುತ್ರ ಮಾಸ್ಟರ್ ಪುರ್ವಾನ್ಶ್ ಎಸ್.,ರವರ ಪ್ರಥಮ ವರ್ಷದ ಹುಟ್ಟುಹಬ್ಬದ ಸಂಭ್ರಮ ಜೂ.19ರಂದು ಡೆಂಬಲೆ ಶಿವತ್ತಮಠ ಮನೆಯಲ್ಲಿ ನಡೆಯಿತು.

ದೀಪ ಬೆಳಗಿಸಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು. ಬೆಳ್ತಂಗಡಿ ಎಲ್‌ಡಿ ಬ್ಯಾಂಕ್‌ನ ಕ್ಷೇತ್ರಾಧಿಕಾರಿ ನವೀನ್, ಬೆಳ್ತಂಗಡಿ ವಾಣಿ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ಶೋಭಾ, ನಿವೃತ್ತ ಅಂಚೆಪಾಲಕ ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಎಎಸ್‌ಐ ಪದ್ಮಯ್ಯ ಗೌಡ ಡೆಂಬಲೆ, ಪ್ರಮುಖರಾದ ಸಂಜೀವ ಗೌಡ ಕಕ್ಕೆಪದವು, ರೇಗಪ್ಪ ಗೌಡ ಬಲ್ಯ ಕಲ್ಲೇರಿ, ನಾಗಪ್ಪ ಗೌಡ ಬನ್ನೂರು, ಗಂಗಮ್ಮ ಬನ್ನೂರು, ಗೋಪಣ್ಣ ಗೌಡ ಕನೆಮಾರು, ವಸಂತಿ ಕನೆಮಾರು, ಜೀವನ್ ಪ್ರಕಾಶ್ ಕೋಂಕ್ಯಾಡಿ, ಸುಪ್ರಿಯಾ ಜೀವನ್ ಪ್ರಕಾಶ್ ಕೋಂಕ್ಯಾಡಿ, ಆನಂದ ಗೌಡ ಕೋಂಕ್ಯಾಡಿ, ಕುಶಾಲಪ್ಪ ಗೌಡ ಪಿಜಕ್ಕಳ,ಲೋಕೇಶ್, ಆನಂದ ವಲ್ಚಿಲ್, ಯತೀಂದ್ರ ಗೌಡ, ನೋಣಪ್ಪ, ಮೋಹನ, ಜಲಜಾಕ್ಷಿ, ವಾಸುದೇವ, ನಾಗವೇಣಿ ಕಲ್ಲಡ್ಕ, ಬಾಲಚಂದ್ರ ಶರವೂರು, ಮಲ್ಲಿಕಾ ಶರವೂರು, ಹೊನ್ನಪ್ಪ ಗೌಡ ಅರಂತಬೈಲು, ಚಂದ್ರಾವತಿ, ಸೋಮಶೇಖರ ಗೌಡ ನಿಡ್ಲೆ, ವಸಂತಿ, ಗಿರೀಶ್ ಬೆಂಗಳೂರು, ಗಂಗಾಧರ ಕೆ.ಎಸ್.ಮೇಲೂರು, ಹೊನ್ನಪ್ಪ ಗೌಡ ಚಾರ್ಮಡಿ, ಜಾನಕಿ, ಬಾಬು ಗೌಡ ಕುಂಡಡ್ಕ, ವಾರಿಜ, ಮಾ| ಪುರ್ವಾನ್ಶ್ ಅವರ ಮುತ್ತಜ್ಜಿ ಬೊಮ್ಮಕ್ಕ ಕಂಗುಳೆ ಪಿಜಕ್ಕಳ, ತಾತ ಮಾಜಿ ಸೈನಿಕ ಸುಂದರ ಪಿ.ಯಂ., ಅಮ್ಮಮ್ಮ ರಾಜರತ್ನ ಕಂಗುಳೆ ಪಿಜಕ್ಕಳ, ಮಾವ ನವನೀತ್ ಪಿ.ಎಸ್., ಅತ್ತೆ ವಿಜೇತಾ, ತಾತ ಅಣ್ಣು ಗೌಡ ಶಿವತ್ತಮಠ ಡೆಂಬಲೆ, ಅವ್ವ ಹೊನ್ನಮ್ಮ ಶಿವತ್ತಮಠ, ಚಿಕ್ಕಪ್ಪ ಪ್ರಕಾಶ್ ಶಿವತ್ತಮಠ, ಮುತ್ತಜ್ಜಿ ಜಾಜಿ ಸಿದ್ದಪ್ಪ ಕರಿಯಾಲು ಬೆಳ್ತಂಗಡಿ ಸೇರಿದಂತೆ ಹಲವು ಗಣ್ಯರು ಹಾಗೂ ಡೆಂಬಲೆ ಕುಟುಂಬಸ್ಥರು, ಬೆಂಗಳೂರು ಸಂಜೀವಿನಿ ಸ್ನೇಹ ಕುಟುಂಬದ ಸದಸ್ಯರು ಆಗಮಿಸಿ ಶುಭಾಶಯ ಕೋರಿದರು. ಪುರ್ವಾನ್ಶ್ ತಂದೆ ಪ್ರಶಾಂತ್ ಹಾಗೂ ತಾಯಿ ಅಂಕಿತಾ ಪಿ.ಎಸ್.,ರವರು ಅತಿಥಿಗಳನ್ನು ಬರಮಾಡಿಕೊಂಡು ಸತ್ಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.