’1947ರ ಸ್ವಾತಂತ್ರ್ಯ ದಲಿತರ ಬಾಗಿಲಿಗೆ ಇನ್ನೂ ಬಂದಿಲ್ಲ’ : ಮಾನವ ಬಂಧುತ್ವ ವೇದಿಕೆ ಸಮ್ಮಿಲನ ಕಾರ್ಯಕ್ರಮದಲ್ಲಿ ಎ.ಕೆ.ಹಿಮಕರ್

0

ಮಾನವೀಯತೆಯನ್ನು ಉಳಿಸಲು ಮಾನವ ಬಂಧುತ್ವ ವೇದಿಕೆ- ಸತೀಶ್ ಕುಮಾರ್

ಪುತ್ತೂರು: 1947ರ ಸ್ವಾತಂತ್ರ್ಯ ದಲಿತರು ಸೇರಿದಂತೆ ಅಲ್ಪಸಂಖ್ಯಾತರ, ಆದಿವಾಸಿ ಗುಡ್ಡಗಾಡು ಜನರ, ಹಳ್ಳಿಯ ರೈತರ, ಹಿಂದುಳಿದ ಜಾತಿ ಪಂಗಡದವರ ಬಾಗಿಲಿಗೆ ಇನ್ನೂ ಬಂದಿಲ್ಲ. ಸ್ವಾತಂತ್ರ್ಯ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿರುವ ಅಂಬಾನಿಯಂತವರಿಗೆ ಬಂದಿದೆ ಎಂದು ಚಿಂತಕ ಎ.ಕೆ.ಹಿಮಕರ್ ಅವರು ಹೇಳಿದರು.

ಮಾನವ ಬಂಧುತ್ವ ವೇದಿಕೆ – ಕರ್ನಾಟಕ ಇದರ ಪುತ್ತೂರು ಘಟಕದ ಆಯೋಜನೆಯಲ್ಲಿ ಇಲ್ಲಿನ ಕೇಪುಳುವಿನಲ್ಲಿ ಜೂ.19ರ ಸಂಜೆ ನಡೆದ ’ಸರ್ವ ಜನಾಂಗದ ಬಂಧುತ್ವ ಸಮ್ಮಿಲನ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ದೇಶದ ಆದಾಯ ನೋಡಿದರೆ ಭಾರತ ಮೇಲೆ ಬರುತ್ತಾ ಇದೆ ಎಂದು ಹೇಳುವವರಿದ್ದಾರೆ. ಆದರೆ ಇಲ್ಲಿ ಇರುವವರಿಗೆ ಉಂಟು, ಇಲ್ಲದವರಿಗೆ ಇಲ್ಲ ಎಂದ ಅವರು ರೈತರು, ದಲಿತರು, ಕೂಲಿ ಕಾರ್ಮಿಕರ ದುಡಿಮೆಯ ಶ್ರಮ ಎಲ್ಲಿ ಹೋಗುತ್ತಿದೆ ಎಂದು ಚಿಂತನೆ ಮಾಡಬೇಕಾಗಿದೆ. ತೂತು ಬಿದ್ದಿರುವ ತಂಬಿಗೆಯಲ್ಲಿ ನೀರು ತುಂಬಿಸಿದಂತೆ ಇವತ್ತಿನ ಪರಿಸ್ಥಿತಿ ಆಗಿದೆ. ಹಿಂದೆ ಬ್ರಿಟೀಷರು ಕೋವಿ ತೋರಿಸಿ ನಮ್ಮ ಸಂಪತ್ತು ಲೂಟಿ ಮಾಡಿದ್ದರು. ಅದಕ್ಕಿಂತ ಹಿಂದೆ ಭೂಮಾಲಕರು ಪಡೆಯುತ್ತಿದ್ದರು. ಇವತ್ತು ನಮಗೆ ಗೊತ್ತಿಲ್ಲದೆ ಕಂಪೆನಿಗಳಿಗೆ ನಮ್ಮ ಶ್ರಮ ಹೋಗುತ್ತಿದೆ. ಇಲ್ಲಿ ದುಡಿಯುವವರಿಗೆ ಬದುಕಲು ಜಾಗವಿಲ್ಲ ಎಂದ ಅವರು, ಅಂಬೇಡ್ಕರ್ ಸಂವಿಧಾನ ಬರೆದರು. ಆದರೆ ಅದನ್ನು ಸರಿಯಾಗಿ ಜಾರಿಗೆ ತರಲು -ಶಿಸ್ಟ್ ವಿರೋಽಸುತ್ತದೆ. ಸಂವಿಧಾನದಿಂದಾಗಿ ಸಮಾನತೆ ಅನ್ನುವ ಕಲ್ಪನೆಯ ಆಧಾರದಲ್ಲಿ ದಲಿತರು, ರೈತರು, ಹಿಂದುಳಿದವರು, ಅಲ್ಪಸಂಖ್ಯಾತರ ಗೌರವಕ್ಕಾಗಿ ವೇದಿಕೆ ಸೃಷ್ಟಿಯಾಯಿತು. ಅದರ ತತ್ವವೇ ಮಾನವ ಬಂಧುತ್ವ ವೇದಿಕೆ ಎಂದರು.

ಮಾನವೀತೆಯನ್ನು ಉಳಿಸಲು ಮಾನವ ಬಂಧುತ್ವ ವೇದಿಕೆ: ಮಾನವ ಬಂಧುತ್ವ ವೇದಿಕೆಯ ಹಾಸನ ಜಿಲ್ಲೆಯ ವಿಭಾಗೀಯ ಸಂಚಾಲಕ ಸತೀಶ್ ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶವನ್ನು ಕಟ್ಟಿದವರು, ದೇಶದ ಕೃಷಿ, ಕೈಗಾರಿಕೆ ನಿರ್ಮಾಣ ಮಾಡಿದವರು ದೇಶದ ದಲಿತರು. ಆದರೆ ನಾವೆಲ್ಲ ಬಹು ಸಂಖ್ಯಾತರಾಗಿದ್ದರೂ ನಮ್ಮನ್ನು ಒಡೆಯುವ ಮೂಲಕ -ಶಿಸ್ಟ್ ಶಕ್ತಿಗಳು ನಿರಂತರ ದಾಳಿ ಮಾಡಿವೆ. ಅಂಬೇಡ್ಕರ್ ಅವರ ಮೊಮ್ಮಗಳ ಗಂಡನನ್ನು -ಶಿಸ್ಟ್ ಶಕ್ತಿಗಳು ಎರಡು ವರ್ಷಗಳಿಂದ ಯಾವುದೇ ಕಾರಣವಿಲ್ಲದೆ ಜೈಲಿಗೆ ಹಾಕಿದ್ದಾರೆ. ಪ್ಯಾಶಿಸ್ಟ್ ಶಕ್ತಿಯ ಪ್ರಭಾವದಿಂದ ಕರ್ನಾಟಕದಲ್ಲಿನ ಒಂದು ಕೋಟಿ ದಲಿತರಿಗೂ ಅಂಬೇಡ್ಕರ್ ಅವರ ಮೊಮ್ಮಗಳ ಗಂಡ ಜೈಲಲ್ಲಿ ಇದ್ದಾರೆಂದು ಅನಿಸುತ್ತಿಲ್ಲ. ಈ ಒಡೆದ ಶಕ್ತಿಯನ್ನು ಒಂದು ಗೂಡಿಸುವುದಕ್ಕೆ ಅಲ್ಪಸಂಖ್ಯಾತರು ಮತ್ತು ದಲಿತರು ಹಾಗೂ ಇತರೆ ಹಿಂದುಳಿದ ವರ್ಗಗಳ ಶಕ್ತಿಯನ್ನು ಒಂದು ಗೂಡಿಸುವ ಕೆಲಸಕ್ಕೆ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಭಾರತ ಮೂಲ ನಿವಾಸಿಗಳ ಮೂಲ ಪ್ರವೃತಿಯಾದ ಮಾನವೀಯತೆಯನ್ನು ಉಳಿಸುವುದಕ್ಕೆ ಈ ಮಾನವ ಬಂಧುತ್ವ ವೇದಿಕೆ ಕಟಿ ಬದ್ದವಾಗಿ ವಿವಿಧ ಆಯಾಮಗಳಲ್ಲಿ ಕೆಲಸ ಮಾಡುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಕಾರ್ಕಳದ ಸದಾಶಿವ ಡಿ ಬನ್ನೂರು, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಪ್ರಧಾನ ಸಂಚಾಲಕ ಚೆನ್ನಕೇಶವ ಮಾತನಾಡಿದರು. ಮಾನವ ಬಂಧುತ್ವ ವೇದಿಕೆಯ ಸಂಚಾಲಕ ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಮಳ ರಾಮಚಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಭೇದ, ಭಾವ ಬಿಟ್ಟು ನಾವೆಲ್ಲರೂ ಒಂದಾಗಬೇಕೆಂಬ ಉದ್ದೇಶದಿಂದ ಮಾನವ ಬಂಧುತ್ವ ವೇದಿಕೆ ಆರಂಭಗೊಂಡಿದೆ. ಪುತ್ತೂರಿನಲ್ಲಿ ಮಾನವ ಬಂಧುತ್ವ ವೇದಿಕೆಯ ಘಟಕ ಆರಂಭವಾಗಿ ಪ್ರಥಮ ಕಾರ್ಯಕ್ರಮ ಇದಾಗಿದ್ದು ಈ ವೇದಿಕೆ ಹೊಸ ಪರಿಕಲ್ಪನೆಯಲ್ಲಿ ಆರಂಭಗೊಂಡಿದ್ದು, ಸದಸ್ಯತ್ವ ಅಭಿಯಾನವು ನಡೆಯಲಿದೆ ಎಂದರು. ಮಾನವ ಬಂಧುತ್ವ ವೇದಿಕೆಯ ಪುತ್ತೂರು ನಗರದ ಸಂಚಾಲಕ ಅಭಿಷೇಕ್ ಬೆಳ್ಳಿಪ್ಪಾಡಿ ಸ್ವಾಗತಿಸಿದರು.

ಕಲಾವಿದ ಕೃಷ್ಣಪ್ಪ ಆಶಯಗೀತೆ ಹಾಡಿದರು. ಸ್ಥಳೀಯರಾದ ಕೇಶವ ಪಡೀಲ್, ಅಭಿಷೇಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭೆಯ ಕೊನೆಯಲ್ಲಿ ಜೈ ಭೀಮ್ ಎಂಬ ಚಲನಚಿತ್ರವನ್ನು ಪ್ರದರ್ಶನ ಮಾಡಲಾಯಿತು. ಬಳಿಕ ರಾತ್ರಿ ಸಹಭೋಜನ ನಡೆಯಿತು. ಸ್ಥಳೀಯ ಸಮಾಜದ ಬಂಧುಗಳ ನೇತೃತ್ವದಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here