ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ

0

ಬಿಳಿನೆಲೆ: ಎಂಟನೇ ವರ್ಷದ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಯೋಗ ದಿನವನ್ನು ಆಚರಿಸಲಾಯಿತು.

ಯೋಗ ಹಾಗೂ ಪ್ರಾಣಾಯಾಮ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಪ್ರತಿನಿತ್ಯವೂ ಯೋಗ ಪ್ರಾಣಾಯಾಮಗಳನ್ನು ಮಾಡುವುದರಿಂದ ಶರೀರವನ್ನು ಸದೃಢವಾಗಿ ಇಟ್ಟುಕೊಳ್ಳಲು ಸಾಧ್ಯ. ನಿರಂತರ ಯೋಗಾಭ್ಯಾಸದಿಂದ ಮನಸ್ಸನ್ನು ಹಾಗೂ ಶರೀರದ ಎಲ್ಲ ಇಂದ್ರಿಯಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ಸಂಸ್ಕೃತ ಅಧ್ಯಾಪಕರಾದ ಸತ್ಯ ಶಂಕರಭಟ್ ಯೋಗದ ಮಹತ್ವವನ್ನು ತಿಳಿಸಿದರು. ಯೋಗ ದಿನಾಚರಣೆಗೆ ಮಾತ್ರ ಯೋಗವು ಸೀಮಿತವಾಗಿರದೆ ನಿರಂತರವಾಗಿರಲಿ ಎಂದರು.

ಶಾಲಾ ಮುಖ್ಯಗುರುಗಳಾದ ಗಣಪತಿ ಭಟ್ ಮನಸ್ಸು ಮತ್ತು ಶರೀರದ ಸೇರಿಸುವಿಕೆಯೇ ಯೋಗ ಎಂಬ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಧ್ಯಾಪಕ ಯತೀಶ್ ವಂದಿಸಿದರು. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ನಿವೃತ್ತ ಗುಮಾಸ್ತರೂ , ಯೋಗ ಪಟುವೂ ಆದ ದುಗ್ಗಪ್ಪ ಇವರು ವಿದ್ಯಾರ್ಥಿಗಳಿಗೆ ಯೋಗ ಪ್ರಾಣಾಯಾಮಗಳ ಮಹತ್ವವನ್ನು ತಿಳಿಸುತ್ತಾ ಯೋಗಾಭ್ಯಾಸವನ್ನು ಮಾಡಿಸಿದರು. ಶಾಲೆಯ ಮುಖ್ಯಗುರು ಗಣಪತಿ ಭಟ್ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅತಿಥಿಗಳನ್ನು ಗೌರವಿಸಿದರು.

LEAVE A REPLY

Please enter your comment!
Please enter your name here