ನರಿಮೊಗರು ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉನ್ನತೀಕರಿಸಿದ ತಾಂತ್ರಿಕ ಕೇಂದ್ರ ಪ್ರಧಾನಿ ಮೋದಿಯವರಿಂದ ಲೋಕಾರ್ಪಣೆ

0

  •  ಐ.ಟಿ.ಐ.ಯಲ್ಲಿ ವ್ಯವಸ್ಥೆಗಳು ಉತ್ತಮವಾಗಿದೆ-ಸುಧಾಕರ ಕುಲಾಲ್
  •  ನರಿಮೊಗರು ಐಟಿಐ.ಗೆ ಉತ್ತಮ ಹೆಸರಿದೆ-ರವಿಚಂದ್ರ
  •  ನಮ್ಮ ಐಟಿಐ ರಾಜ್ಯದಲ್ಲೇ ಹೆಸರು ಪಡೆದ ಸಂಸ್ಥೆ-ರಾಜೀವಿ

 

ಪುತ್ತೂರು: ಟಾಟಾ ಟೆಕ್ನಾಲಜಿ ಲಿಮಿಟೆಡ್ ಸಂಯೋಜನೆಯೊಂದಿಗೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ನರಿಮೊಗರು ಇದರ ಉನ್ನತೀಕರಿಸಿದ ತಾಂತ್ರಿಕ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿಯವರು ಆನ್‌ಲೈನ್ ಮೂಲಕ ಜೂ.20ರಂದು ಲೋಕಾರ್ಪಣೆಗೊಳಿಸಿದರು. ಪ್ರಧಾನಿಯವರು ಲೋಕಾರ್ಪಣೆಗೊಳಿಸುವ ಕಾರ್ಯಕ್ರಮ ವೀಕ್ಷಿಸಲು ಸಂಸ್ಥೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.


ಐ.ಟಿ.ಐ.ಯಲ್ಲಿ ವ್ಯವಸ್ಥೆಗಳು ಉತ್ತಮವಾಗಿದೆ-ಸುಧಾಕರ ಕುಲಾಲ್: ಪ್ರಧಾನಿಯವರು ಆನ್‌ಲೈನ್‌ನಲ್ಲಿ ಉದ್ಘಾಟಿಸಿದ ಬಳಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್ ಮಾತನಾಡಿ ಪ್ರಧಾನಿಯವರು ಆನ್‌ಲೈನ್ ಮೂಲಕ ತಾಂತ್ರಿಕ ಕೇಂದ್ರದ ಲೋಕಾರ್ಪಣೆಗೊಳಿಸಿರುವುದು ನಮಗೆಲ್ಲಾ ಖುಷಿಯ ವಿಚಾರ. ನರಿಮೊಗರು ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವ್ಯವಸ್ಥೆಗಳು ಉತ್ತಮವಾಗಿದ್ದು ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮಗೂ, ಸಂಸ್ಥೆಗೆ ಉತ್ತಮ ಹೆಸರು ಬರುವಂತೆ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.

ನರಿಮೊಗರು ಐಟಿಐ.ಗೆ ಉತ್ತಮ ಹೆಸರಿದೆ-ರವಿಚಂದ್ರ: ನರಿಮೊಗರು ಗ್ರಾ.ಪಂ ಪಿಡಿಓ ರವಿಚಂದ್ರ ಮಾತನಾಡಿ ನರಿಮೊಗರು ಐಟಿಐ ಉತ್ತಮ ಹೆಸರು ಪಡೆದಿದ್ದು ಇದು ನಮಗೆಲ್ಲಾ ಹೆಮ್ಮೆಯ ವಿಚಾರ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉತ್ತಮವಾಗಿ ಕಲಿತು ಭವಿಷ್ಯದಲ್ಲಿ ಸಾಧಕರಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯದಲ್ಲೇ ಹೆಸರು ಪಡೆದ ಸಂಸ್ಥೆ-ರಾಜೀವಿ: ಅಧ್ಯಕ್ಷತೆ ವಹಿಸಿದ್ದ ನರಿಮೊಗರು ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಭಾರ ಪ್ರಾಂಶುಪಾಲರಾದ ರಾಜೀವಿ ಮಾತನಾಡಿ ನಮ್ಮ ಐಟಿಐ ರಾಜ್ಯದಲ್ಲೇ ಹೆಸರು ಪಡೆದ ಸಂಸ್ಥೆಯಾಗಿದ್ದು ಇದೀಗ ತಾಂತ್ರಿಕ ಕೇಂದ್ರದ ಲೋಕಾರ್ಪಣೆಯೊಂದಿಗೆ ನಮ್ಮ ಸಂಸ್ಥೆಯ ಕಿರೀಟಕ್ಕೆ ಇನ್ನೊಂದು ಗರಿ ಸೇರಿಸಿದಂತಾಗಿದೆ ಎಂದು ಹೇಳಿದರು. ಆಫೀಸ್ ಸೂಪರಿಂಟೆಂಡೆಂಟ್ ಹೇಮಾವತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ನರಿಮೊಗರು ಸಿ.ಎ ಬ್ಯಾಂಕ್ ಅಧ್ಯಕ್ಷ ಬಾಬು ಶೆಟ್ಟಿ, ನರಿಮೊಗರು ಐಟಿಐ.ಯ ನಿವೃತ್ತ ಪ್ರಾಚಾರ್ಯ ಎಂ.ಎಸ್ ಸುಬ್ರಹ್ಮಣ್ಯ, ನರಿಮೊಗರು ಗ್ರಾ.ಪಂ ಸದಸ್ಯ ಉಮೇಶ್ ಉಪಸ್ಥಿತರಿದ್ದರು. ನಿರ್ಮಿತಿ ಕೇಂದ್ರದ ಹರೀಶ್ ಹಾಗೂ ಗುತ್ತಿಗೆದಾರ ಆಶಿಕುದ್ದೀನ್ ಅಖ್ತರ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಸ್ಥಳೀಯ ಪ್ರಮುಖರಾದ ವೇದನಾಥ ಸುವರ್ಣ ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜೂನಿಯರ್ ಟ್ರೈನಿಂಗ್ ಆಫಿಸರ್ ಯೋಗೀಶ್ ಸ್ವಾಗತಿಸಿದರು. ವಿದ್ಯಾರ್ಥಿನಿ ಕರಿಷ್ಮಾ ಪ್ರಾರ್ಥಿಸಿದರು. ಜಿ.ಟಿ.ಓ ಉಶಾ ವಂದಿಸಿದರು. ಜಿ.ಟಿ.ಓ ಪೂರ್ಣಿಮಾ ರಾವ್ ಕಾರ್ಯಕ್ರಮ ನಿರೂಪಿಸಿದರು.

ಸ್ಥಳೀಯ ಪ್ರಮುಖರಿಂದ ಭೌತಿಕ ಉದ್ಘಾಟನೆ:
ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಟಾಟಾ ಲ್ಯಾಬ್, ವರ್ಕ್ ಶಾಪ್, ಕಚೇರಿ ಮೊದಲಾದವುಗಳ ಉದ್ಘಾಟನೆಯನ್ನು ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್, ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ, ನರಿಮೊಗರು ಐ.ಟಿ.ಐ.ಯ ಮಾಜಿ ಪ್ರಾಚಾರ್ಯ ಎಂ.ಎಸ್ ಸುಬ್ರಹ್ಮಣ್ಯ ಹಾಗೂ ನರಿಮೊಗರು ಗ್ರಾ.ಪಂ ಸದಸ್ಯ ಉಮೇಶ್ ನೆರವೇರಿಸಿದರು.

LEAVE A REPLY

Please enter your comment!
Please enter your name here