ಪುತ್ತೂರು : ಪ್ರತಿಷ್ಠಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಜಾಗತಿಕ ಜಾನಪದ ವಿದ್ವಾಂಸ, ಕನ್ನಡ ಮತ್ತು ತುಳು ಸಂಶೋಧಕ, ನಿವೃತ್ತ ಕುಲಪತಿ ಡಾ.ಬಿ.ಎ.ವಿವೇಕ ರೈ ಆಯ್ಕೆಯಾಗಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡಲಾಗುವ ಟಿ.ವಿಮಲಾ ವಿ.ಪೈ ಪ್ರಾಯೋಜಿತ 2022ನೇ ಸಾಲಿನ ಪ್ರಶಸ್ತಿಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಆಯ್ಕೆ ಸಮಿತಿಯು ಈ ಆಯ್ಕೆ ಮಾಡಿದೆ. ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಯನ್ನು ಉದ್ಯಮಿ ಟಿ. ಮೋಹನ್‌ದಾಸ್ ಪೈರವರು ತನ್ನ ತಾಯಿಯ ಹೆಸರಿನಲ್ಲಿ ಸ್ಥಾಪಿಸಿದ್ದಾರೆ.
ಪ್ರಾಚೀನ ಕನ್ನಡ ಕಾವ್ಯಗಳ ಇಂಗ್ಲಿಷ್ ಅನುವಾದಕ ಹಾಗೂ ಅಂಕಣಕಾರರೂ ಆಗಿರುವ ಡಾ.ವಿವೇಕ ರೈರವರು ಪುಣಚ ಗ್ರಾಮದ ಅಗ್ರಾಳ ನಿವಾಸಿಯಾಗಿದ್ದಾರೆ.