ನಿಡ್ಪಳ್ಳಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ನಿಡ್ಪಳ್ಳಿ;  ನಿಡ್ಪಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21 ರಂದು ಆಚರಿಸಲಾಯಿತು.
ಐ.ಬಿ.ಎಮ್ ಇಂಡಿಯಾ ಕಂಪೆನಿ ಉದ್ಯೋಗಿ ಭೀಷ್ಮ ಕೆಮ್ಮಣ್ಣು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಯೋಗ ನಡೆಸಿ ಕೊಟ್ಟರು.  ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕರುಣಾಕರ ರೈ ಮುಂಡೂರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶಾಲಿನಿ.ಕೆ ಉಪಸ್ಥಿತರಿದ್ದರು.   ಮುಖ್ಯಗುರು ಉದಯ ಕುಮಾರ್ ಶರವು ಪ್ರಾಸ್ತಾವಿಕವಾಗಿ ಮಾತನಾಡಿ ಯೋಗದ ಮಹತ್ವವನ್ನು ವಿವರಿಸಿದರು. ಸಹಶಿಕ್ಷಕಿ ಹೇಮಾ ಸ್ವಾಗತಿಸಿ, ಗೌರವ ಶಿಕ್ಷಕಿ ಕುಸುಮ.ಸಿ.ಎಚ್ ವಂದಿಸಿ, ಅತಿಥಿ ಶಿಕ್ಷಕಿ ಸುಮ.ಡಿ ಕಾರ್ಯಕ್ರಮ ನಿರೂಪಿಸಿದರು. ಅಕ್ಷರ ದಾಸೋಹ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here