ಕೊಂಬೆಟ್ಟು ಪ.ಪೂ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಯೋಗ ದಿನಾಚರಣೆ

0

 

ಪುತ್ತೂರು: ಕೊಂಬೆಟ್ಟು ಪ.ಪೂ ಕಾಲೇಜಿನ ಪ್ರೌಢಶಾಲೆಯ ವಿಭಾಗದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ದಿನಾಚರಣೆ ನಡೆಯಿತು. ಯೋಗ ನಿರ್ದೇಶಕರು ಹಾಗೂ ಎನ್.ಸಿ.ಸಿ ಅಧಿಕಾರಿ ಗ್ರೆಗೋರಿ ರೋನಿ ಪಾಯಸ್‌ರವರ ನೇತೃತ್ವದಲ್ಲಿ ಸುಮಾರು ಒಂದು ವಾರಗಳ ಕಾಲ ಯೋಗ ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು ಯೋಗ ಅಭ್ಯಾಸ ಮಾಡಿದರು. ಶಾಲಾ ಅಂಗಳದಲ್ಲಿ ವಿದ್ಯಾರ್ಥಿಗಳು ನೆಲ ಹಾಸು ಹಾಕಿ ವಿವಿಧ ರೀತಿಯ ಆಸನಗಳನ್ನು ಮಾಡಿದರು. ಶಾಲೆಯ ಹಿರಿಯ ಶಿಕ್ಷಕಿ ಮಮತಾ ರೈ ಯೋಗ ದಿನದ ಮಹತ್ವದ ಕುರಿತು ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕಿ  ಗೀತಾಮಣಿ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಯೋಗ ಪ್ರದರ್ಶನ ಮಾಡಲು ಯೋಗ ಮಂಟಪವನ್ನು ವ್ಯವಸ್ಥೆ ಮಾಡಲಾಯಿತು. ಎಲ್ಲ ಶಿಕ್ಷಕ ವೃಂದ ಯೋಗ ಪ್ರದರ್ಶನದಲ್ಲಿ ಸಹಕರಿಸಿದರು. ಎನ್‌ಸಿಸಿ ವಿದ್ಯಾರ್ಥಿಗಳು ಯೋಗದಲ್ಲಿ ವಿಶೇಷ ಮುಂದಾಳತ್ವ ವಹಿಸಿದ್ದರು.

LEAVE A REPLY

Please enter your comment!
Please enter your name here