ಲಿಟ್ಲ್ ಫ್ಲವರ್ ಶಾಲೆಯಲ್ಲಿ ಯೋಗ ದಿನಾಚರಣೆ

0

ಪುತ್ತೂರು: ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆಯಲ್ಲಿ ವಿಶ್ವ ಯೋಗ ದಿನಾಚಣೆಯು, ಶಾಲಾ ಮುಖ್ಯಶಿಕ್ಷಕಿ ಭಗಿನಿ. ವೆನಿಶಾ ಬೀ. ಎಸ್. ಅಧ್ಯಕ್ಷತೆಯಲ್ಲಿ ನಡೆಯಿತು.

ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ರಾಗಿರುವ ರಾಮಚಂದ್ರ ಭಟ್. ಮಾತನಾಡಿ ” ಯೋಗ ದಿನಾಚರಣೆಯು ಭಾರತದ ಸಾಂಸ್ಕತಿಕ ಪರಂಪರೆಯ ಪ್ರತೀಕ. ಯೋಗದಿಂದ ನಿರೋಗ. ಯೋಗದಿಂದ ಮಾನಸಿಕ ಸಮತೋಲನ ಸಾಧ್ಯ,” ಎಂದರು. ವೇದಿಕೆಯಲ್ಲಿ ಶಾಲಾ ರಕ್ಷಕ – ಶಿಕ್ಷಕ ಸಂಘದ ನಿಕಟ ಪೂರ್ವ ಉಪಾಧ್ಯಕ್ಷರಾದ ರಮೇಶ್ ಕೆ. ವಿ, ಹಿರಿಯ ವಿದ್ಯಾರ್ಥಿ ಹಾಗೂ ಕೋಸ್ಟಲ್ ಹೋಂ ಮಾಲಕರಾದ ಸಂದೇಶ ರೈ, ಶಾಲಾ ಮುಖ್ಯ ಶಿಕ್ಷಕಿ ಭಗಿನಿ. ವೆನಿಶಾ ಬಿ.ಎಸ್., ಹಿರಿಯ ಶಿಕ್ಷಕಿ ಭಗಿನಿ ಡೈನ ಸಿಕ್ವೇರಾ, ಉಪಸ್ಥಿತರಿದ್ದರು. ಬಳಿಕ ಯೋಗ ಪ್ರತಿಜ್ಞೆ ಸ್ವೀಕರಿಸಿ,500 ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ. ಎಸ್. ಸ್ವಾಗತಿಸಿ. ಶಿಕ್ಷಕರಾದ ಬಾಲಕೃಷ್ಣ ಪೊರ್ದಾಲ್ ವಂದಿಸಿ. ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

Please enter your comment!
Please enter your name here