ಆನಡ್ಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ಪುತ್ತೂರು:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕದಲ್ಲಿ   ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ನರಿಮೊಗರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧಾಕರ ಕುಲಾಲ್ ಉದ್ಘಾಟನೆಗೈದರು. ಎಸ್ಡಿಎಂಸಿ ಅಧ್ಯಕ್ಷರು  ನಾರಾಯಣ ಆನಡ್ಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಮಜಲು ಯೋಗದ ಮಹತ್ವ ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯ  ತಾರಾನಾಥ ಉಪಸ್ಥಿತರಿದ್ದರು.


ಮುಖ್ಯಶಿಕ್ಷಕಿ ಶ್ರೀಶುಭಲತ ಎಲ್ಲರನ್ನು ಸ್ವಾಗತಿಸಿ ಯೋಗ ಮತ್ತು ಧ್ಯಾನದ ಮಹತ್ವವನ್ನು ಹಾಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಬಗ್ಗೆ ತಿಳಿಸಿಕೊಟ್ಟರು. ಶಿಕ್ಷಕಿ ಅಕ್ಷತಾ ಸಂಕಲ್ಪವನ್ನು ಬೋಧಿಸಿದರು. ಶಿಕ್ಷಕಿ ಮಾಲತಿಯವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಫೆಲ್ಸಿಟಾ ಡಿ’ ಕುನ್ಹಾ ವಂದಿಸಿದರು.
ಕ್ರೀಡಾಪಟು ಶಿಕ್ಷಕಿ ಮಾಲತಿ ಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಅತಿಥಿಗಳು ಮತ್ತು ಪೋಷಕರು ಹಾಗೂ ಶಿಕ್ಷಕ ವೃಂದದವರು ಯೋಗಾಸನಗಳನ್ನು ಪ್ರದರ್ಶಿಸಿದರು. ಎಲ್ಲರೂ ಸೇರಿ ಧ್ಯಾನವನ್ನು ಮಾಡಿ ವಿಶ್ವಶಾಂತಿಗಾಗಿ ಪ್ರಾರ್ಥಿಸುವುದರ ಮೂಲಕ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಗೌರವ ಶಿಕ್ಷಕಿಯರಾದ ಸೌಮ್ಯ ಹಾಗೂ ಲೀಲಾವತಿ ಸಹಕರಿಸಿದರು.

LEAVE A REPLY

Please enter your comment!
Please enter your name here