ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪುತ್ತೂರು ತಾ| ಮಟ್ಟದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

0

  • ಯೋಗದಿಂದ ದೇಹರಕ್ಷಣೆ, ದೇಶಜೋಡಣೆ – ಜೀವಂಧರ್ ಜೈನ್
  • ಕಲಿಕೆಗೆ ಉತ್ತಮ ಸಾಧನ ಯೋಗ – ಡಾ. ಶಿವಪ್ರಕಾಶ್
  • ಸಂಗೀತ ಮತ್ತು ಯೋಗ ಆರೋಗ್ಯಕ್ಕೆ ಪೂರಕ – ಲೋಕೇಶ್ ಸಿ.
  • ಪ್ರಧಾನಿಯವರು ಪ್ರಪಂಚಕ್ಕೆ ಜ್ಞಾನವನ್ನು ಒದಗಿಸಿದವರು – ರವಿನಾರಾಯಣ

ಪುತ್ತೂರು: ಯುಜ್ಯತೇಇತಿಯೋಗ:.ಯೋಗೋ ನಾಮ ಚಿತ್ತವೃತ್ತಿ ನಿರೋಧ: ಯೋಗದಿಂದ ದೇಹಾರೋಗ್ಯ, ದೀರ್ಘಾಯುಷ್ಯ, ಶಕ್ತಿ, ಸುಖ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್. ಎಂ ಹೇಳಿದರು. ಅವರು “ಮಾನವೀಯತೆಗಾಗಿ ಯೋಗ” ಎಂಬ ಧ್ಯೇಯದೊಂದಿಗೆ ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇವರ ಜಂಟಿ ಆಶ್ರಯದಲ್ಲಿ ಜೂ. 21ರಂದು ವಿವೇಕಾನಂದ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ನಡೆದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಆಶಯ ಭಾಷಣ ಮಾಡಿ ಮಾತನಾಡಿದರು. ದೀಪಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪುತ್ತೂರು ನಗರಸಭಾಧ್ಯಕ್ಷರಾದ ಜೀವಂಧರ್ ಜೈನ್‌ರವರು ಯೋಗದ ಮೂಲಕ ದೇಹದ ರಕ್ಷಣೆ ಹಾಗೂ ದೇಶಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ. ಭಾರತದಲ್ಲಿ ಆರಂಭವಾದ ಈ ಕಾರ್ಯ ಇಂದು ಪ್ರಪಂಚದ 175ಕ್ಕೂ ಅಧಿಕ ದೇಶಗಳಲ್ಲಿ ನಡೆಯುತ್ತಿದೆ ಎಂದರು.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್. ಸಿ ಯವರು ಮಾತನಾಡಿ, `ವಿಶ್ವ ಸಂಗೀತ ದಿನವೂ ಇಂದೇ ಆಗಿರುವುದರಿಂದ ಸಂಗೀತ ಮತ್ತು ಯೋಗ ಎರಡೂ ನಮ್ಮ ಆರೋಗ್ಯ ಮತ್ತು ಕಲಿಕೆಗೆ ಪೂರಕವಾದ ವಿಚಾರಗಳಾಗಿವೆ. ಹಾಗಾಗಿ ಇಂದಿನ ದಿನಗಳನ್ನು ಹೆಚ್ಚಿನ ಮಹತ್ವದಿಂದ ನಾವೆಲ್ಲಾ ಅನುಸರಿಸಬೇಕಾಗಿದೆ ಎಂದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಸಂಚಾಲಕ ರವಿನಾರಾಯಣ ಎಂ. ಶುಭಾಶಂಸನೆಗೈದು, `ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳು ಒಪ್ಪಿಕೊಂಡ ಭಾರತದ ಯೋಗವನ್ನು ಇಂದು ಜಾಗತಿಕ ಮಟ್ಟಕ್ಕೆ ಪರಿಚಯಿಸಿದ ಪ್ರಧಾನಿ ಮೋದಿಯವರನ್ನು ಮೊದಲು ಸ್ಮರಿಸಿಕೊಳ್ಳಬೇಕಾಗಿದೆ. ಜ್ಞಾನದ ಮೂಲಕ ಪ್ರಪಂಚವನ್ನು ಒಂದುಗೂಡಿಸಿದವರು ಪ್ರಧಾನಿಯವರು’ ಎಂದರು. ವೇದಿಕೆಯಲ್ಲಿ ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಸುಂದರಗೌಡ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯಕುಮಾರ್. ಎಂ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಪಂಚಾಯತ್ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಸ್ವಾಗತಿಸಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್‌ರೈ ವಂದಿಸಿದರು. ಸಹಶಿಕ್ಷಕರಾದ ಯಶೋದಾ ಮತ್ತು ವೆಂಕಟೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ನಡೆದ ಸಾಮೂಹಿಕ ಯೋಗ ಪ್ರದರ್ಶನವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ನಮಿತಾ ಕೆ.ಕೆ ಮತ್ತು ಪವನ್‌ಕುಮಾರ್ ನಡೆಸಿಕೊಟ್ಟರು. ಪ್ರತಿಜ್ಞಾ ವಿಧಿ ನೆರವೇರಿಸಿದ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ ಗೌಡ ಇವರ ಮಾರ್ಗದರ್ಶನದಲ್ಲಿ ಗಿರೀಶ್, ದೀಪಕ್, ಆಶಾಲತಾ, ವಾಣಿಶ್ರೀ, ರಶ್ಮಿ ಯೋಗ ಪ್ರದರ್ಶನದಲ್ಲಿ ಸಹಕರಿಸಿದರು. ಸಾಮೂಹಿಕ ಯೋಗ ಪ್ರದರ್ಶನದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರ ಜೊತೆಗೆ ಸರಕಾರಿ ಪದವಿಪೂರ್ವ ಕಾಲೇಜು, ಪುತ್ತೂರು ಹಾಗೂ ನೆಲ್ಲಿಕಟ್ಟೆ ಶಿವರಾಮ ಕಾರಂತ ಪ್ರೌಢಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು, ಶಿಕ್ಷಕೇತರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಹಕರಿಸಿದರು.

 


ನೇರ ಪ್ರಸಾರ
ಕಾರ್ಯಕ್ರಮವು `ಸುದ್ದಿ ಪುತ್ತೂರು ಯುಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪೇಜ್‌ನಲ್ಲಿ ನೇರಪ್ರಸಾರಗೊಂಡಿತು.

ಯೋಗ ಕಲಿತರೆ ಲಂಚ ನಿರ್ಮೂಲನೆಯಾಗುತ್ತದೆ – ಸುದ್ದಿ ಅಭಿಯಾನ ಯಶಸ್ವಿಯಾಗಲಿ
ಸುದ್ದಿ ಪತ್ರಿಕೆಯವರು ಅಭಿಯಾನ ಮಾಡುತ್ತಿದ್ದಾರೆ. ಲಂಚ ಭ್ರಷ್ಟಾಚಾರ ಮುಕ್ತ ಆಗಬೇಕೆಂದು ಸುದ್ದಿಯವರು ಅಭಿಯಾನ ಮಾಡುತ್ತಿದ್ದಾರೆ. ಯೋಗ ಕಲಿತರೆ ಅದರ ಅಪರಿಗ್ರಹದಲ್ಲಿ ಈ ವಿಷಯ ಬರುತ್ತದೆ. ಇದರಿಂದ ಲಂಚ ನಿರ್ಮೂಲನೆಯಾಗುತ್ತದೆ. ವಿಶ್ವ ಯೋಗ ದಿನಾಚರಣೆಯ ಈ ದಿನ ಸುದ್ದಿಯವರ ಲಂಚ ಭ್ರಷ್ಟಾಚಾರ ನಿರ್ಮೂಲನೆಯ ಆಂದೋಲನ ಯಶಸ್ವಿಯಾಗಲೆಂದು ಶುಭ ಹಾರೈಸುತ್ತೇನೆ ಎಂದು ಡಾ. ಶಿವಪ್ರಕಾಶ್ ತಮ್ಮ ಭಾಷಣದಲ್ಲಿ ಹೇಳಿದರು.

LEAVE A REPLY

Please enter your comment!
Please enter your name here