- ಅಧ್ಯಕ್ಷ : ಶಫೀಕ್ ವಳವೂರ್, ಪ್ರ.ಕಾರ್ಯದರ್ಶಿ: ಸಫ್ವಾನ್ ಕೊಡಂಗಾಯಿ, ಕೋಶಾಧಿಕಾರಿ: ಆಶೀರ್
ಪುತ್ತೂರು : ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಪಡೆದಿರುವ ಉಳ್ಳಾಲ ಸಯ್ಯಿದ್ ಮುಹಮ್ಮದ್ ಶರಿಫುಲ್ ಮದನಿ (ಖ.ಸಿ) ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸೈಯದ್ ಮದನಿ ಅರಬಿಕ್ ಕಾಲೇಜ್ ಉಳ್ಳಾಲ ಇದರ ವಿದ್ಯಾರ್ಥಿ ಸಂಘಟನೆಯಾದ ಬಹ್ಜತುಲ್ ಉಲಮಾ ಸ್ಟೂಡೆಂಟ್ ಅಸೋಸಿಯೇಷನ್ ಮಹಾಸಭೆ ಶೈಖುನಾ ಉಸ್ಮಾನ್ ಫೈಝಿ ತೋಡಾರುರವರ ಅಧ್ಯಕ್ಷತೆಯಲ್ಲಿ ಜರಗಿತು. 2022-23ನೇ ಸಾಲಿನ ನೂತನ ವಿದ್ಯಾರ್ಥಿ ಸಂಘಟನೆಯನ್ನು ಆಯ್ಕೆ ಮಾಡಲಾಯಿತು. ಎಕ್ಸಿಕ್ಯೂಟಿವ್ ಕಮಿಟಿಯ ಚೇರ್ಮನ್ ಆಗಿ ಉಸ್ಮಾನ್ ಪೈಝಿ ತೋಡರು ಹಾಗೂ ವಿದ್ಯಾರ್ಥಿ ಸಂಘಟನೆಯ ಮಾರ್ಗದರ್ಶಕರಾಗಿ ಅಫ್ಸಲ್ ವಾಫಿ ಹಾಗೂ ಎಕ್ಸಿಕ್ಯೂಟಿವ್ ಸದಸ್ಯರಾಗಿ ಇಬ್ರಾಹಿಂ ಅಹ್ಸನಿ ಅನ್ವರ್ ಅಲಿ ದಾರಿಮಿ, ಕೆ.ಪಿ ನವಾಜ್ ಮಾಸ್ಟರ್ರವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶಫೀಕ್ ವಳವೂರ್, ಪ್ರಧಾನ ಕಾರ್ಯದರ್ಶಿಯಾಗಿ ಸಫ್ವಾನ್ ಕೊಡಂಗಾಯಿ, ಕೋಶಾಧಿಕಾರಿಯಾಗಿ ಆಶೀರ್ ಕುಂತೂರು, ಉಪಾಧ್ಯಕ್ಷರುಗಳಾಗಿ ಮುಹಾಸಿರ್ ಕೊಡಿ, ರಾಝಿಕ್ ಕಡಬ, ಜೊತೆ ಕಾರ್ಯದರ್ಶಿಗಲಾಗಿ ಶಂಸುದ್ದೀನ್ ಪೊಯತ್ತಬೈಲು, ಹರ್ಷದ್ ಮುಕ್ಕಚ್ಚೇರಿರವರನ್ನು ಆಯ್ಕೆ ಮಾಡಲಾಯಿತು. ವಿದ್ಯಾರ್ಥಿಗಳ ಉನ್ನತಿಗಾಗಿ ಕೆಲವೊಂದು ವಿಂಗ್ಗಳನ್ನು ರಚನೆ ಮಾಡಲಾಯಿತು. ಅರ್ಫಾಜ್, ನಿಝಾಮುದ್ದೀನ್, ಶಫೀಕ್ ಪಿ, ಝಿಯಾದ್, ಮುಝಂಮ್ಮಿಲ್, ಶಫೀಕ್ ಜೆ., ಸಿನಾನ್, ಸಾಲಿಂ, ಶಾಹಿನ್, ಅಫ್ರಿದ್, ತ್ವಯ್ಯುಬ್, ಸಫ್ವನ್ ಎಮ್.ಎನ್, ರಾಫಿಹ್, ಜವಾದ್, ಸಲೀಲ್, ಫೈಝಲ್ , ಮಾಲಿಕ್ ಮುಂತಾದವರನ್ನು ಆಯ್ಕೆ ಮಾಡಲಾಯಿತು.