ಅಕ್ಷಯ ಕಾಲೇಜಿನಲ್ಲಿ 8ನೇ ವಿಶ್ವ ಯೋಗ ದಿನಾಚರಣೆ

0

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್(ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮದಡಿಯಲ್ಲಿ 8ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವು    ಜೂ.೨೧ರಂದು ನಡೆಯಿತು.


ಕಾರ್ಯಕ್ರಮವನ್ನು ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲುರವರು ಉದ್ಘಾಟಿಸಿ, ಯೋಗವನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಸಾಧನೆಗೆ ಯೋಗಾಭ್ಯಾಸ ಶಕ್ತಿ ನೀಡುತ್ತದೆ. ಮಾನವೀಯತೆಯಿಂದ ಮನುಕುಲವಾದುದರಿಂದ ನಾವೆಲ್ಲರೂ ವಿಶ್ವಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ, ದಿಶಾ ಯೋಗ ಫೌಂಡೇಶನ್ ಸ್ಥಾಪಕಾಧ್ಯಕ್ಷ ಯೋಗಗುರು ಶ್ರೀ ಚಂದ್ರಶೇಖರ ಪುತ್ತೂರು ಮಾತನಾಡಿ ಯೋಗದಿಂದ ಆರೋಗ್ಯ. ಯೋಗವು ನಮ್ಮ ಮುಖ್ಯ ಸಂಪತ್ತಾಗಬೇಕು. ನಮ್ಮ ಪರಂಪರೆಗೆ ಅದು ತಲುಪುವಲ್ಲಿ ನಮ್ಮ ಮನೆ-ಮನೆಯಲ್ಲಿ ಯೋಗಾಭ್ಯಾಸ ನಡೆಯಬೇಕು. ಇಂದು ಜಗತ್ತೇ ಭಾರತದ ಯೋಗ ಸಾಧನೆಯನ್ನು ಮೆಚ್ಚಿ ಅಳವಡಿಸೊಂಡಿದೆ. ನಿರಂತರ ಯೋಗಾಭ್ಯಾಸದಿಂದ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಬುಹುದು ಎಂದು ಹೇಳಿದರು.


ಕಾಲೇಜಿನ ಅಂತರಾಷ್ಟ್ರೀಯ ಯೋಗ ಸಾಧಕಿಯರಾದ ಕು.ಪ್ರಣಮ್ಯ ಮತ್ತು ಪ್ರತೀಕ್ಷಾ ರೈರವರು ಯೋಗಗುರು ಶ್ರೀಚಂದ್ರಶೇಖರ್ ಪುತ್ತೂರು ಜೊತೆಗೂಡಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ನಡೆಸಿದರು.


ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಸಂಪತ್ ಪಕ್ಕಳ ಸ್ವಾಗತಿಸಿ, NSS ಕಾರ್ಯಕ್ರಮ ಅಧಿಕಾರಿಗಳಾದ  ಪ್ರಿಯಾ ವಂದಿಸಿದರು. ಅಂತರಾಷ್ಟ್ರೀಯ ಯೋಗ ಸಾಧಕಿ ಕು. ಪ್ರಣಮ್ಯ ವಿಶ್ವಯೋಗ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ಸಮಾರಂಭದಲ್ಲಿ ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಬೋಧಕ ಹಾಗೂ ಬೋಧಕಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here