ಉಪ್ಪಿನಂಗಡಿ ಶ್ರೀರಾಮ ಶಾಲೆಯಲ್ಲಿ ಯೋಗ ದಿನಾಚರಣೆ

0

ಪುತ್ತೂರು : ಉಪ್ಪಿನಂಗಡಿ ವೇದಶಂಕರನಗರದ ಶ್ರೀರಾಮ ಶಾಲೆಯಲ್ಲಿ ಉರಿಮಜಲು ಕೆ. ರಾಮ ಭಟ್ ಸಭಾಂಗಣದಲ್ಲಿ ಶ್ರೀರಾಮ ಶಾಲೆ ಮತ್ತು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಉಜಿರೆ ಇದರ ಸಹಯೋಗದಲ್ಲಿ ಯೋಗಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.

ಉತ್ತಮ್ ನೇಜಿಕಾರುರವರು ಮಾತನಾಡಿ ಯೋಗದ ಮಹತ್ವ ತಿಳಿಸಿದರು. ತರಬೇತುದಾರ ಡಾ.ಮಂಜುನಾಥ್‌ರವರು ಯೋಗ ಎಂದರೆ ಅದು ದೇಹವನ್ನು ದಂಡಿಸುವುದಲ್ಲ ನಮಗೆ ದಿನನಿತ್ಯಕ್ಕೆ ಆಹಾರ ಎಷ್ಟು ಪ್ರಾಮುಖ್ಯವಾಗಿರುತ್ತದೋ ಅದೇ ಪ್ರಾಮುಖ್ಯತೆಯನ್ನು ಯೋಗಕ್ಕೆ ಕೊಡಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕ ಯು. ಜಿ. ರಾಧಾ ಮಾತನಾಡಿ ಶುಭ ಹಾರೈಸಿದರು. ಯೋಗ ತರಬೇತುದಾರರಾದ ಶ್ರಾವ್ಯ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಅನುರಾಧ ಆರ್. ಶೆಟ್ಟಿ, ಪ್ರೌಢವಿಭಾಗದ ಮುಖ್ಯ ಶ್ರೀಮಾನ್ ರಘುರಾಮ ಭಟ್ ಸಿ., ಮತ್ತು ಪ್ರಾಥಮಿಕ ವಿಭಾಗದ ಮುಖ್ಯಗುರು ವಿಮಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಷಾ ಸ್ವಾಗತಿಸಿ, ಲತಾಕುಮಾರಿ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಮಾತಾಜಿ ಸುಮಿತ್ರಾ ವಂದಿಸಿದರು.

LEAVE A REPLY

Please enter your comment!
Please enter your name here