ಪುತ್ತೂರು : ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಒತ್ತಡದ ಅರಿವು ಎಂಬ ವಿಷಯದ ಕಾರ್ಯಕ್ರಮ ನಡೆಯಿತು.
ಡಾ. ಸುಲೇಖ ವರದರಾಜ್ ಆಗಮಿಸಿ ಒತ್ತಡದಿಂದ ಆಗುವ ಪರಿಣಾಮ ಮತ್ತು ಒತ್ತಡವನ್ನು ಕಡಿಮೆ ಮಾಡುವ ಮಾರ್ಗವನ್ನು ತಿಳಿಸಿಕೊಟ್ಟರು. ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕಿ ಅನುರಾಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾಲೇಜಿನ ಪ್ರಾಧ್ಯಾಪಕಿ ರಾಜೀವಿ ಬಿ. ಸ್ವಾಗತಿಸಿ, ಉಪನ್ಯಾಸಕ ಮುರಳಿ ಕೃಷ್ಣ ವಂದಿಸಿದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು.