ಕಾಣಿಯೂರು: ದಾಖಲೆ ಮೊತ್ತಕ್ಕೆ ಮೀನು ಮಾರುಕಟ್ಟೆ ಹರಾಜು

0

ಕಾಣಿಯೂರು: ಹಸಿ ಮೀನಿನ ಏಲಂ ಪ್ರಕ್ರಿಯೆ ಕಾಣಿಯೂರು ಗ್ರಾಮ ಪಂಚಾಯತ್‌ನಲ್ಲಿ ನಡೆದಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹರಾಜು ಆಗುವ ಮೂಲಕ ದಾಖಲೆ ನಿರ್ಮಿಸಿದೆ.

ಮುಂದಿನ ಒಂದು ವರ್ಷದ ಅವಧಿಗೆ ಹಸಿ ಮೀನಿನ ವಸೂಲಿ ಹಕ್ಕು ಏಲಂ ಪ್ರಕ್ರಿಯೆ ಕಾಣಿಯೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆದಿದೆ. ಪ್ರಪ್ರಥಮವಾಗಿ ಕಾಣಿಯೂರು ಗ್ರಾ.ಪಂ.ನಲ್ಲಿ ಮೀನು ಮಾರುಕಟ್ಟೆ ಏಲಂ ಪ್ರಕ್ರಿಯೆ ನಡೆದಿದ್ದು, ಮೀನಿನ ಹರಾಜು ಪ್ರಕ್ರಿಯೆಯಲ್ಲಿ ಹಲವಾರು ಮಂದಿ ಭಾಗವಹಿಸಿದ್ದರು. ಕೊನೆಯಲ್ಲಿ ಸವಣೂರಿನ ಅಬೂಬಕ್ಕರ್ ಸಿದ್ದಿಕ್ ಎಂಬವರು ರೂ 3,05,೦೦೦ರವರೆಗೆ ಹರಾಜು ಪಡೆದುಕೊಂಡು ಮುಂದಿನ ಒಂದು ವರ್ಷದ ಅವಧಿಗೆ ಹಸಿ ಮೀನು ವರಿ ವಸೂಲಿ ಹಕ್ಕನ್ನು ತನ್ನದಾಗಿಸಿಕೊಂಡಿದ್ದಾರೆ. ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಖಾಸು, ಉಪಾಧ್ಯಕ್ಷ ಗಣೇಶ್ ಉದನಡ್ಕ, ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ದೇವರಾಜ್ ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here