ನಿಡ್ಪಳ್ಳಿ: ಒಡ್ಯ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯಗುರು ಜನಾರ್ದನ ಅಲ್ಚಾರು ಯೋಗದ ಸಂಕಲ್ಪ ಮತ್ತು ಮಹತ್ವವನ್ನು ತಿಳಿಸಿದರು. ಯೋಗ ಗುರುಗಳಾದ ನಿವೃತ್ತ ಶಿಕ್ಷಕ ಶಿವಕುಮಾರ್ ಭಟ್ ಕಾಕೆಕೊಚ್ಚಿ ಮತ್ತು ಶಿಕ್ಷಕಿ ಲಲಿತಾ ಪಿ. ಹೆಗಡೆ ಕಾಕೆಕೊಚ್ಚಿ ವಿವಿಧ ಭಂಗಿಯ ಯೋಗಾಸನಗಳನ್ನು ಹೇಳಿಕೊಟ್ಟರು. ಶಿಕ್ಷಕರಾದ ಉಸ್ಮಾನ್ ಮಂಚಿ, ದಿವ್ಯಾ ಪಡುಬಿದ್ರಿ ಉಪಸ್ಥಿತರಿದ್ದರು.