ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖೆ 8ನೇ ವರ್ಷಕ್ಕೆ ಪಾದಾರ್ಪಣೆ: ಗಣಹೋಮ ಲಕ್ಷ್ಮೀ ಪೂಜೆ

0

ಕುಂಬ್ರ: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿರುವ, ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಸಂಕೀರ್ಣದಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಇದರ ಕುಂಬ್ರ ಶಾಖೆಯು ಯಶಸ್ವಿ 8 ನೇ ವರ್ಷಕ್ಕೆ ಪಾದಾರ್ಪಣೆಗೊಂಡ ಹಿನ್ನಲೆಯಲ್ಲಿ ಕುಂಬ್ರ ಕಿರಣ್ ಸಂಕೀರ್ಣದಲ್ಲಿರುವ ಸಂಘದ ಕಛೇರಿಯಲ್ಲಿ ಪುರೋಹಿತ ಶ್ರೀಕೃಷ್ಣ ಉಪಾಧ್ಯಾಯ ಹೊಸಮೂಲೆರವರ ಪೌರೋಹಿತ್ಯದಲ್ಲಿ ಗಣಹೋಮ ಹಾಗೂ ಲಕ್ಷ್ಮಿಪೂಜೆ ನಡೆಯಿತು.


ನಂತರ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು 2002 ರಲ್ಲಿ ಆರಂಭಗೊಂಡು ಅನಂತರ ಅವಧಿಯಲ್ಲಿ 7 ಶಾಖೆಗಳನ್ನು ಆರಂಭಿಸಿಕೊಂಡು, ಎಲ್ಲ ಶಾಖೆಗಳು ಅತ್ಯುತ್ತಮ ರೀತಿಯಲ್ಲಿ ಯಶಸ್ವಿಯಾಗಿ ವ್ಯವಹಾರ ನಡೆಸುತಿದ್ದು, ಅತಿ ಶೀಘ್ರದಲ್ಲಿ ಸವಣೂರು ಹಾಗೂ ಬೆಳ್ಳಾರೆಯಲ್ಲಿ ಶಾಖೆ ತೆರೆಯಲು ಯೋಜನೆ ಹಾಕಿಕೊಂಡಿದ್ದು ಎಲ್ಲರ ಸಹಕಾರ ಅಗತ್ಯ ಎಂದರು. ಕಳೆದ ಆರ್ಥಿಕ ವರ್ಷದಲ್ಲಿ ಕುಂಬ್ರ ಶಾಖೆಯು ಸುಮಾರು 27ಕೋಟಿ ವ್ಯವಹಾರ ನಡೆಸಿದ್ದು 18 ಲಕ್ಷ ಲಾಭ ಪಡೆದು, ಸಾಲ ವಸೂಲಾತಿ ಶೇ99.03 ಮಾಡುವ ಮೂಲಕ ಅತ್ಯುತ್ತಮ ಮಟ್ಟದ ಸಾಧನೆ ಮಾಡಿದೆ. ಈ ಸಾಧನೆಗೆ ಪ್ರಮುಖ ಕಾರಣಕರ್ತರಾದ, ಸಲಹಾ ಸಮಿತಿ ಸದಸ್ಯರಿಗೆ, ಸಿಬ್ಬಂದಿ ವರ್ಗ ಹಾಗೂ ಗ್ರಾಹಕ ಬಂಧುಗಳಿಗೆ ಅಭಿನಂದನೆಗಳು ಎಂದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಗೌರವ ಸಲಹೆಗಾರ ಹಾಗೂ ಕುಂಬ್ರ ಶಾಖೆಯು ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಶಿವರಾಮ ಗೌಡ ಇದ್ಯಪೆ ಮಾತನಾಡಿ ಕುಂಬ್ರ ಶಾಖೆಯು ಆರಂಭದಿಂದಲೂ ಗ್ರಾಹಕ ಬಂಧುಗಳ ಪೂರ್ಣ ಸಹಕಾರ, ಆಡಳಿತ ಮಂಡಳಿ ಹಾಗೂ ಶಾಖ ಸಲಹಾ ಸಮಿತಿ ಸದಸ್ಯರ ಮಾರ್ಗದರ್ಶನ ಹಾಗೂ ಸಿಬ್ಬಂದಿ ವರ್ಗದ ದಕ್ಷ ಹಾಗೂ ನಗುಮೊಗದ ಪ್ರಾಮಾಣಿಕ ಸೇವೆಯಿಂದ ಕುಂಬ್ರ ಶಾಖೆಯು ವ್ಯವಹಾರದಲ್ಲಿ ಉತ್ತಮ ಸಾಧನೆಗೈಯಲು ಸಾಧ್ಯವಾಗಿದೆ ಎಂದರು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ, ಕುಂಬ್ರ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಲೋಕೇಶ್ ಚಾಕೋಟೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕುಂಬ್ರ ಶಾಖೆಯು ಯಶಸ್ವಿಯಾಗಿ 7 ವರ್ಷ ಪೂರೈಸಿ 8ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು ಇನ್ನು ಹೆಚ್ಚಿನ ಸಾಧನೆ ಸಾಧಿಸಲು ಆಡಳಿತ ಮಂಡಳಿ, ಸಲಹಾ ಸಮಿತಿ ಸದಸ್ಯರ, ಗ್ರಾಹಕ ಬಂಧುಗಳ, ಸಿಬ್ಬಂದಿ ವರ್ಗ ಸಹಕರಿಸುವಂತೆ ವಿನಂತಿಸಿದರು.

ಗೌರವಾರ್ಪಣೆ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಕುಂಬ್ರ ಶಾಖೆಯಲ್ಲಿ ಪ್ರಾರಂಭದಿಂದಲೂ ಮೆನೇಜರ್ ಆಗಿ ಕಾರ್ಯನಿರ್ವಹಿಸಿ ಸುಮಾರು 7 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಗೊಂಡ ದಿನೇಶ್ ಪೆಲತ್ತಿಂಜರವರನ್ನು ಶಾಲು ಹಾಕಿ, ಹೂಗುಚ್ಛ, ಸ್ಮರಣಿಕೆ ನೀಡಿ ಗೌರವಿಸಲಾಯಿತು. 2021-022ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 613 (98.08%) ಅಂಕ ಪಡೆದು ಸಾಧನೆಗೈದ ಬಡ ಕುಟುಂಬದ ನಿಡ್ಪಳ್ಳಿ ಗ್ರಾಮದ ಪೊಯ್ಯಗದ್ದೆ ರತ್ನಾವತಿರವರ ಪುತ್ರಿ ಸಾಕ್ಷಿ ಸಿ. ಹೆಚ್. ರವರನ್ನು ಶಾಲು ಹೊದಿಸಿ ಹೂಗುಚ್ಛ ನೀಡಿ ಹಾಗೂ ಬೊಳ್ಳಾಡಿ ಕುಟುಂಬಸ್ಥರಿಂದ ಅರ್ಥಿಕ ಧನ ಸಹಾಯವನ್ನು ನೀಡಿ ಗೌರವಿಸಲಾಯಿತು.

ಕುಂಬ್ರ ಶಾಖೆಯಲ್ಲಿ 7 ವರ್ಷಗಳ ಕಾಲ ಮೇನೇಜರ್ ಆಗಿ ಸೇವೆ ಸಲ್ಲಿಸಿ ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಗೊಂಡ ದಿನೇಶ್ ಇವರಿಗೆ ಗೌರವಾರ್ಪಣೆ

ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ವಿಶ್ವನಾಥ ಗೌಡ ಕೆಯ್ಯೂರು, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಕಾರ್ಯದರ್ಶಿ ಕೆ.ಎಸ್ ಸುರೇಶ್ ಗೌಡ ಕಲ್ಲಾರೆ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮೋಹನ್ ಗೌಡ ಇಡ್ಯಡ್ಕ, ಜಿನ್ನಪ್ಪ ಗೌಡ ಮಳುವೇಲು, ಪ್ರವೀಣ್ ಕುಂಟ್ಯಾನ, ನಿರ್ದೇಶಕರು ಮತ್ತು ಕುಂಬ್ರ ಶಾಖಾ ಸಲಹಾ ಸಮಿತಿ ಉಪಾಧ್ಯಕ್ಷರಾದ ಸತೀಶ್ ಪಾಂಬಾರು, ಅಂತರಿಕ ಪರಿಶೋಧಕ ಶ್ರೀಧರ ಗೌಡ ಕಣಜಾಲು, ಮುಖ್ಯ ಕಾರ್ಯನಿರ್ವಹಣಾಽಕಾರಿ ಸುಧಾಕರ್ ಕೆ, ತಾಲೂಕು ಒಕ್ಕಲಿಗ ಗೌಡ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಡಿ. ಗೌಡ, ಪದಾಧಿಕಾರಿ ನವೀನ ಬಿ ಡಿ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಎ.ವಿ ನಾರಾಯಣ್, ಕುಂಬ್ರ ಶಾಖಾ ಸಲಹಾ ಸಮಿತಿ ಸದಸ್ಯರಾದ ಮಾಜಿ ನಿರ್ದೇಶಕಿ ರೇಖಾ ಆರ್ ಗೌಡ, ಸಲಹಾ ಸಮಿತಿ ಸದಸ್ಯರಾದ ನಾಗಪ್ಪ ಗೌಡ ಬೊಮ್ಮೆಟ್ಟಿ, ಉಮೇಶ್ ಗೌಡ ಕನ್ನಯ, ಚಂದ್ರಶೇಖರ ಗೌಡ ಸಾರೆಪ್ಪಾಡಿ, ಶ್ರೀಧರ ಗೌಡ ಅಂಗಡಿಹಿತ್ಲು, ವಿಶ್ವನಾಥ ಗೌಡ ಬೊಳ್ಳಾಡಿ, ರಾಮಣ್ಣ ಗೌಡ ಬಸವಹಿತ್ಳು, ಶ್ರೀಧರ ಗೌಡ ಎರಕ್ಕಲ, ವಿಜಯಭಾರತಿ ಮಡ್ಯಂಗಳ, ತಿರುಮಲೇಶ್ವರ ದೊಡ್ಡಮನೆ, ಸುಬ್ರಾಯ ಗೌಡ ಪಾಲ್ತಾಡಿ, ಕಿರಣ್ ಸಂಕೀರ್ಣದ ಮಾಲಕರಾದ ಪರಮೇಶ್ವರ, ಚಂಚಲ ಚಾಕೋಟೆ, ರಾಮಣ್ಣ ಗೌಡ ಜ್ಯೋತಿ ನಿಲಯ, ಶಿವರಾಮ್ ಗೌಡ ಬೊಳ್ಳಾಡಿ, ಮೋಹನ್ ಗೌಡ ಬೊಳ್ಳಾಡಿ, ರಾಮಣ್ಣ ಗೌಡ ಬೊಳ್ಳಾಡಿ, ಮೋಹನ್ ಗೌಡ ಎರಕ್ಕಲ, ಶುಭಪ್ರಕಾಶ್ ಎರಬೈಲು, ಉಮಾಕಾಂತ್ ಬೈಲಾಡಿ, ಕೃಷ್ಣಪ್ಪ ಗೌಡ ಸಣಂಗಳ, ರಾಮಯ್ಯ ಗೌಡ ಬೊಳ್ಳಾಡಿ, ಶರತ್ ರೈ ದೇರ್ಲ, ಕುಂಬ್ರ ಮೂರ್ತೆದಾರರ ಸಹಕಾರಿ ಸಂಘದ ನಿರ್ದೇಶಕ ನಿತೀಶ್ ಕುಮಾರ್ ಶಾಂತಿವನ, ಮೆನೇಜರ್ ಚಂದ್ರಕಾAತ್ ಹಾಗೂ ಸಿಬ್ಬಂದಿ ವರ್ಗ, ವರ್ತಕರ ಸಂಘದ ಅಧ್ಯಕ್ಷ ಮಾಧವ ರೈ ಕುಂಬ್ರ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಮೆನೇಜರ್ ವಿನುತಾ ಹಾಗೂ ಸಿಬ್ಬಂದಿ ವರ್ಗ, ಕುಂಬ್ರ ಡಿಸಿಸಿ ಬ್ಯಾಂಕ್‌ನ ಮೆನೇಜರ್ ಹರೀಶ್ ರೈ ಹಾಗೂ ಸಿಬ್ಬಂದಿ ವರ್ಗ, ಜ್ಯೋತಿ ಸ್ಟುಡಿಯೋ ಮಾಲಕ ಕರುಣಾಕರ ಗೌಡ ಎಲಿಯ, ಸಿಬ್ಬಂದಿ ಸತೀಶ್, ಸುಶ ಡ್ರೆಸ್ಸಸ್‌ನ ಸುರೇಶ್ ಕುಮಾರ್, ರೋಯಲ್ ಜನರಲ್ ಸ್ಟೋರ್‌ನ ರಮೇಶ್ ರೈ, ಜಯರಾಮ ಆಚಾರ್ಯ, ರವಿಚಂದ್ರ ಗೌಡ, ಸತಾರ್ ಎನ್.ವಿ, ಚರಿತ್ ಕುಮಾರ್ ಶುಭಹಾರೈಸಿದರು.

ಎಸ್ ಎಸ್ ಎಲ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಸಾಕ್ಷಿ ಸಿ ಹೆಚ್ ಇವರಿಗೆ ಅಭಿನಂದನೆ

ಕುಂಬ್ರ ಶಾಖಾ ಪ್ರಭಾರ ಮೆನೇಜರ್ ಹರೀಶ್ ವೈ, ಸಿಬ್ಬಂದಿಗಳಾದ ಕಾವ್ಯ ಎ.ಎಸ್, ದಿನೇಶ್ ಕುಮಾರ್, ಪಿಗ್ಮಿ ಸಂಗ್ರಹಕಾರರಾದ ಅನುರಾಜ್, ಅಶ್ವಥ್ ಪಿ. ಸ್ವಾಗತಿಸಿ ಸತ್ಕರಿಸಿದರು. ನಿರ್ದೇಶಕ ಹಾಗೂ ಸಲಹಾ ಸಮಿತಿ ಅಧ್ಯಕ್ಷರಾದ ಲೊಕೇಶ್ ಚಾಕೋಟೆ ಸ್ವಾಗತಿಸಿ, ಶಾಖಾ ಪ್ರಭಾರ ಮೆನೇಜರ್ ಹರೀಶ್ ವೈ ವಂದಿಸಿದರು, ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here