ಮುಕ್ವೆಯಲ್ಲಿ ಡಾ.ಸುಜಯಕೃಷ್ಣ ತಂತ್ರಿಯವರ ಆತ್ರೇಯ ಕ್ಲಿನಿಕ್ ಶುಭಾರಂಭ

0

ಪುತ್ತೂರು:ಪ್ರತಿಷ್ಠಿತ ಕೆಮ್ಮಿಂಜೆ ತಂತ್ರಿ ಮನೆತನದ ದಿ.ಕೇಶವ ತಂತ್ರಿಗಳ ಮೊಮ್ಮಗ, ದಿ.ಸುಬ್ರಹ್ಮಣ್ಯ ತಂತ್ರಿಗಳ ಪುತ್ರ ಡಾ.ಸುಜಯಕೃಷ್ಣ ತಂತ್ರಿಯವರ ಕ್ಲಿನಿಕ್ ಆತ್ರೇಯ ಕ್ಲಿನಿಕ್ ಜೂ.19ರಂದು ಮುಕ್ವೆ ಹೆವನ್ಸ್ ರೆಸಿಡೆನ್ಸಿಯಲ್ಲಿ ಶುಭಾರಂಭಗೊಂಡಿತು.

ಚೇತನಾ ಆಸ್ಪತ್ರೆಯ ಡಾ.ಜೆ.ಸಿ ಅಡಿಗರವರು ಕ್ಲಿನಿಕ್‌ನ್ನು ಉದ್ಘಾಟಿಸಿ, ಜನತೆಗೆ ಉತ್ತಮ ಸೇವೆ ದೊರೆಯಲಿ ಎಂದು ಹಾರೈಸಿದರು. ಡಾ.ಶ್ರೀಕುಮಾರ್ ಕತ್ರಿಬೈಲ್ ಈಶ್ವರಮಂಗಲ ಮಾತನಾಡಿ ಶುಭಹಾರೈಸಿದರು. ಡಾ.ಶಂಕರ ಭಟ್ ಪುರುಷರಕಟ್ಟೆ, ಇಂಜಿನಿಯರ್ ಪ್ರಸನ್ನ ಭಟ್ ಪಂಚವಟಿ, ನರಿಮೊಗರು ಗ್ರಾ.ಪಂ ಸದಸ್ಯ ಕೇಶವ ಮುಕ್ವೆ, ಹೆವೆನ್ ರೆಸಿಡೆನ್ಸಿ ಮ್ಹಾಲಕ ಮೊಹಮ್ಮದ್ ಇಲಿಯಾಸ್ ಹಾಗೂ ಸರಸ್ವತಿ ಸುಬ್ರಹ್ಮಣ್ಯ ತಂತ್ರಿಯವರು ಉಪಸ್ಥಿತರಿದ್ದರು. ಡಾ.ಸುಜಯಕೃಷ್ಣ ತಂತ್ರಿಯವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ, ಬಿಎಎಂಎಸ್ ಪದವಿಯನ್ನು ಸುಳ್ಯ ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ಹಾಗೂ ಎಂ.ಡಿ ಪದವಿಯನ್ನು ತುಮಕೂರು ಅಶ್ವಿನಿ ಆಯುರ್ವೇದ ಕಾಲೇಜಿನಲ್ಲಿ ಪಡೆದಿರುತ್ತಾರೆ. ತನ್ನ ಪಾರಂಪರಿಕ ತಾಂತ್ರಿಕ ವೃತ್ತಿಯನ್ನು ಮುಂದುವರಿಸುತ್ತಿರುವ ಸುಜಯಕೃಷ್ಣ ತಂತ್ರಿಯವರು ಬೆಳ್ತಂಗಡಿ ಪ್ರಸನ್ನ ಆಯುರ್ವೇದ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊ-ಸರ್ ಆಗಿ ಕಾರ್ಯನಿರ್ವಹಿಸುತ್ತಿರುವುದಲ್ಲದೆ ದರ್ಬೆ ಉಷಾ ಪಾಲಿಕ್ಲಿನಿಕ್‌ನಲ್ಲಿ ಕನ್ಟಲ್ಟೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಮುಕ್ವೆಯಲ್ಲಿ ಆತ್ರೇಯ ಕ್ಲಿನಿಕ್ ಪ್ರಾರಂಭಿಸಿದ್ದು ಸೋಮವಾರದಿಂದ ಶನಿವಾರ ತನಕ ಪ್ರತಿದಿನ ಸಂಜೆ 3.30 ಗಂಟೆಯಿಂದ ರಾತ್ರಿ 7 ಗಂಟೆಯ ತನಕ ಸೇವೆಗೆ ಲಭ್ಯರಿರುವುದಾಗಿ ಡಾ.ಸುಜಯಕೃಷ್ಣ ತಂತ್ರಿಯವರು ತಿಳಿಸಿದ್ದಾರೆ.

ಮಹಾವೀರ ಆಸ್ಪತ್ರೆಯ ಡಾ,ಸುರೇಶ್ ಪುತ್ತೂರಾಯ, ಕೆಮ್ಮಿಂಜೆ ನಾಗೇಶ ತಂತ್ರಿ, ಉದಯ ತಂತ್ರಿ, ಡಾ.ಸೂರ್ಯನಾರಾಯಣ ಪುತ್ತೂರಾಯ, ಡಾ.ಸಚಿನ್ ಶಂಕರ್, ಕೃಷ್ಣದಾಸ ತಂತ್ರಿ ಇರುವೈಲು, ಲಕ್ಷ್ಮೀಶ ತಂತ್ರಿ ಕೆಮ್ಮಿಂಜೆ, ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಯೋಗೀಶ ಬೈಪಾಡಿತ್ತಾಯ, ವೇದನಾಥ ಸುವರ್ಣ, ಪದ್ಮನಾಭ ಪೂಜಾರಿ, ನ್ಯಾಯವಾದಿ ದಿವಾಕರ ನಿಡ್ವಣ್ಣಾಯ, ರತ್ನಾಕರ ಪಿ.ಎಸ್. ಪಂಜಿಗ, ದಿನೇಶ್ ಹಬ್ಬಾರ್, ಪರಮೇಶ್ವರ ಭಂಡಾರಿ, ಗಣೇಶ್ ಮುಕ್ವೆ, ನಾಗೇಂದ್ರ ಕಾಮತ್, ಸುಶಾಂತ್ ಎಂ.ಶೆಟ್ಟಿ ಹಾಗೂ ನವೀನ್ ಚಂದ್ರ ನಾಯ್ಕ್ ಬೆದ್ರಾಳ ಸಹಿತ ಹಲವು ಮಂದಿ ಆಗಮಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here