ಜೂ.25: ರಾಜ್ಯ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡರಿಗೆ ನಾಗರಿಕ ಸನ್ಮಾನ-`ದಯಾಭಿಮಾನ’

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಜ್ಯ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ಶಿಕ್ಷಕರಾದ ದಯಾನಂದ ರೈ ಕೋರ್ಮಂಡ ಅವರಿಗೆ ನಾಗರಿಕ ಸನ್ಮಾನ `ದಯಾಭಿಮಾನ’ ಕಾರ್ಯಕ್ರಮವು ಜೂ.25ರಂದು ಶನಿವಾರ ಪೂರ್ವಾಹ್ನ 10 ಗಂಟೆಗೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ನಡೆಯಲಿದೆ.

 

ಈ ಬಗ್ಗೆ ಜೂ.22ರಂದು ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿದ ದಯಾನಂದ ರೈ ಕೋರ್ಮಂಡರ ದಯಾಭಿಮಾನ ನಾಗರಿಕ ಸನ್ಮಾನ ಸಮಿತಿಯ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು, ರಾಜ್ಯ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ಶಿಕ್ಷಕರಾದ ದಯಾನಂದ ರೈ ಕೋರ್ಮಂಡ ಅವರು, ಶೈಕ್ಷಣಿಕ, ಸಾಮಾಜಿಕ ಕೆಲಸ ಕಾರ್ಯಗಳಲ್ಲದೆ ಸಮಾಜದ ಎಲ್ಲಾ ಸ್ತರದ ಜನರೊಂದಿಗೆ ಸಂಬಂಧವನ್ನು ಇರಿಸಿಕೊಂಡು, ಎಲ್ಲಾ ಸಭೆ ಸಮಾರಂಭಗಳಲ್ಲಿ ನೇತೃತ್ವ ವಹಿಸಿಕೊಂಡು ಹೆಚ್ಚಿನ ಶಕ್ತಿಯನ್ನು ಹಾಕಿ ಕೆಲಸ ಕಾರ್ಯ ಮಾಡಿದವರು. ಇಂತಹವರು ಸೇವೆಯಿಂದ ನಿವೃತ್ತರಾದ ಸಂದರ್ಭದಲ್ಲಿ ಅವರಿಗೆ ನಾಗರಿಕ ಸನ್ಮಾನ ಮಾಡಬೇಕೆನ್ನುವ ಅಭಿಪ್ರಾಯ ವ್ಯಕ್ತವಾಯಿತು. ಆ ನೆಲೆಯಲ್ಲಿ ನಾಗರಿಕ ಸನ್ಮಾನ ಸಮಿತಿಯನ್ನು ರಚಿಸಿಕೊಂಡು ಬೆಟ್ಟಂಪಾಡಿ ಸಹಕಾರಿ ಸಂಘದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಸಭಾ ಕಾರ್ಯಕ್ರಮವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಬಿ. ಶೆಟ್ಟಿ, ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಎನ್. ಸಂಜೀವ ರೈ, ವಿಶ್ರಾಂತ ಚಿತ್ರಕಲಾ ಶಿಕ್ಷಕ ಐ. ಗೋಪಾಲಕೃಷ್ಣ ರಾವ್, ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ರೈ ಗುತ್ತು, ಪುತ್ತೂರು ನೋಟರಿ ವಕೀಲರಾದ ಚಿದಾನಂದ ಬೈಲಾಡಿ, ಮಂಜುನಾಥ ಎನ್.ಎಸ್., ಸಿವಿಲ್ ಕಂಟ್ರಾಕ್ಟರ್, ಆಲಿಕುಂಞ ಕೊರಿಂಗಿಲ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುಮಾರು 1 ಸಾವಿರ ಜನರನ್ನು ಸಂಘಟಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸುವ ಮೂಲಕ ಬೆಟ್ಟಂಪಾಡಿಯ ಕ್ರೀಡಾರಂಗದ ದಿಗ್ಗಜ, ಕಲಾವಿದ, ನಿರ್ದೇಶಕ, ಪ್ರತಿಭಾ ಪೋಷಕರೊಬ್ಬರ ಸನ್ಮಾನಕ್ಕೆ ಕಳೆಯನ್ನು ತಂದುಕೊಡಬೇಕು. ಕಾರ್ಯಕ್ರಮದಲ್ಲಿ ಸಂಘ ಸಂಸ್ಥೆಗಳಿಗೆ ಮತ್ತು ವೈಯಕ್ತಿಕವಾಗಿ ದಯಾನಂದ ರೈ ಕೋರ್ಮಂಡ ಅವರಿಗೆ ಗೌರವಾರ್ಪಣೆ ಸಲ್ಲಿಸಲು ಅವಕಾಶವಿದೆ. ಮಧ್ಯಾಹ್ನದ ಭೋಜನದ ವ್ಯವಸ್ಥೆಯಿದೆ ಎಂದು ಶಶಿಕುಮಾರ್ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಯಾನಂದ ರೈ ಕೋರ್ಮಂಡರ ದಯಾಭಿಮಾನ ನಾಗರಿಕ ಸನ್ಮಾನ ಸಮಿತಿಯ ಕಾರ್ಯದರ್ಶಿ ಮಹಮ್ಮದ್ ಕುಕ್ಕುವಳ್ಳಿ ಮತ್ತು ಕೋಶಾಧಿಕಾರಿ ಪ್ರಕಾಶ್ ರೈ ಬೈಲಾಡಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.