ಪುತ್ತೂರು: ಕೊರಗ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಮತ್ತು ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಸಹಾಯ ಮಾಡಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಕೆಯ್ಯೂರು ಗ್ರಾಮ ಪಂಚಾಯತ್ನ ಶೇ.25 ನಿಧಿಯಿಂದ ಗ್ರಾಮದ ಕೊರಗ ಸಮುದಾಯದ ಓರ್ವ ವಿದ್ಯಾರ್ಥಿನಿಗೆ ಬ್ಯಾಗ್, ಪುಸ್ತಕ,ಯೂನಿಫಾರಂ ಅನ್ನು ಜೂ.೨೧ ರಂದು ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿಯವರು ಗ್ರಾಪಂ ಕಛೇರಿಯಲ್ಲಿ ವಿತರಿಸಿದರು.
ಕೆಯ್ಯೂರು ಜನತಾ ಕಾಲನಿಯ ಭಾಗೀರಥಿ ಎಂಬವರ ಪುತ್ರಿಯಾಗಿರುವ ರೇಖಾರವರು ಕೆಯ್ಯೂರು ಕೆಪಿಎಸ್ನಲ್ಲಿ ವ್ಯಾಸಂಗ ಮಾಡುತ್ತಿದ್ದು ಎಸ್ಎಸ್ಎಲ್ಸಿಯಲ್ಲಿ ೩೯೩ ಅಂಕಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಪ್ರಥಮ ಪಿಯುಸಿಗೆ ಸೇರ್ಪಡೆಯಾಗಿದ್ದು ಕೊರಗ ಸಮುದಾಯದಿಂದ ಪ್ರಥಮ ಪಿಯುಸಿಗೆ ಸೇರ್ಪಡೆಯಾಗುತ್ತಿರುವ ಗ್ರಾಮದ ಪ್ರಥಮ ವಿದ್ಯಾರ್ಥಿನಿಯಾಗಿದ್ದಾರೆ. ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಪಂ ವತಿಯಿಂದ ಎಲ್ಲಾ ಪಠ್ಯ ಪುಸ್ತಕ, ನೋಟ್ಬುಕ್ ಸೇರಿದಂತೆ ಯೂನಿಫಾರಂ ಹಾಗೂ ಶಾಲಾ ಶುಲ್ಕವನ್ನು ಕೂಡ ಭರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಪಂ ಪ್ರಭಾರ ಅಭಿವೃದ್ಧಿ ಅಧಿಕಾರಿ ಸುರೇಂದ್ರ ರೈ ಇಳಂತಾಜೆ, ಗ್ರಾಪಂ ಉಪಾಧ್ಯಕ್ಷೆ ಗಿರಿಜ ಕಣಿಯಾರು, ಸದಸ್ಯರುಗಳಾದ ತಾರಾನಾಥ ಕಂಪ, ವಿಜಯ ಕುಮಾರ್, ಶರತ್ ಕುಮಾರ್ ಮಾಡಾವು, ಅಬ್ದುಲ್ ಖಾದರ್ ಮೇರ್ಲ, ಬಟ್ಯಪ್ಪ ರೈ, ಜಯಂತ ಪೂಜಾರಿ ಕೆಂಗುಡೇಲು, ಶೇಷಪ್ಪ ಡಿ, ಸುಭಾಷಿಣಿ, ಮೀನಾಕ್ಷಿ ವಿ.ರೈ, ಅಮಿತಾ ಎಚ್.ರೈ, ನೆಬಿಸ, ಮಮತಾ ರೈ, ಸುಮಿತ್ರ ಪಲ್ಲತ್ತಡ್ಕ ಉಪಸ್ಥಿತರಿದ್ದರು. ಗ್ರಾಪಂ ಸಿಬ್ಬಂದಿಗಳು ಸಹಕರಿಸಿದ್ದರು.
ಚಿತ್ರ: ಕೆಯ್ಯೂರು ಗ್ರಾಪಂ