ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಹಾಗೂ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ,ಮೊಗರು, ಸವಣೂರು ಇವರ ಸಹಯೋಗದಲ್ಲಿ ಜೂ. 21ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಗರು, ಸವಣೂರು ಇಲ್ಲಿ ವಿಶ್ವ ಯೋಗ ದಿನ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮೊಗರು ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಹಾಗೂ ಸವಣೂರು ಮೊಗರು ಗ್ರಾ..ಪಂ ವಾರ್ಡ್ ಸದಸ್ಯ ರಫೀಕ್ ಎಂ.ರವರು, ಹಲವು ರೋಗಗಳಿಗೆ ಯೋಗವೇ ಪರಿಹಾರವೆಂದು ತಿಳಿಸಿ ಯೋಗದ ಮಹತ್ದದ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಗಳಾದ ಸವಣೂರು ಮೊಗರು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಮತಾ ಎನ್.ರವರು ವಿಶ್ವ ಯೋಗ ದಿನದ ಬಗ್ಗೆ ಪರಿಚಯವನ್ನು ನೀಡಿ ಯೋಗದ ಇತಿಹಾಸವನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಸವಣೂರು ಮೊಗರು ಗ್ರಾ.ಪಂ ಸದಸ್ಯ ಸತೀಶ್ ಅಂಗಡಿಮೂಲೆ ಮಂಜುನಾಥನಗರ,ಮೊಗರು ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ದಿವ್ಯಲತಾ, ಪತ್ರಕರ್ತ ಪ್ರವೀಣ್ ಚೆನ್ನಾವರ, ಉಮ್ಮರ್, ಹಾಮಿದ್ ಎಸ್ಡಿಎಂಸಿ ಸದಸ್ಯರು, ಹಾಗೂ ಸಹ ಶಿಕ್ಷಕಿಯರು, ಶಾಲಾ ವಿದ್ಯಾರ್ಥಿಗಳು,ಹಾಗೂ ಯೋಗ ತರಬೇತಿದಾರರು ಉಪಸ್ಥಿತರಿದ್ದರು.
ಪ್ರಥಮ ವರ್ಷದ ಸ್ನಾತಕೋತ್ತರ ಸಮಾಜಕಾರ್ಯ ವಿದ್ಯಾರ್ಥಿನಿ ಮಧುರ ಕೆ.ಎಂ ರವರು ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಗೆ ಯೋಗ ತರಬೇತಿಯನ್ನು ನೀಡಿದರು. ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಶಶಾಂಕ್ ಸ್ವಾಗತಿಸಿ, ಕೌಶಿಕ್ ವಂದಿಸಿದರು. ಮನಸ್ವಿ ಕಾರ್ಯಕ್ರಮವನ್ನು ನಿರೂಪಿಸಿದರು.