ಪುತ್ತೂರು ಪೇಟೆಯಲ್ಲಿ ಬಹುತೇಕ ಚರಂಡಿಗಳು ಹೂಳು ತುಂಬಿ ಬ್ಲಾಕ್ – ಮಳೆಗಾಲದ ಪೂರ್ವ ಸಿದ್ಧತೆ ವೇಳೆ ಬೆಳಕಿಗೆ -ವಿಲೇವಾರಿಗೆ ಅಧ್ಯಕ್ಷರ ಸೂಚನೆ

0

ಪುತ್ತೂರು: ಪುತ್ತೂರು ಪೇಟೆಯಲ್ಲಿ ಬಹುತೇಕ ಚರಂಡಿಗಳು ಹೂಳುತುಂಬಿ ಬ್ಲಾಕ್ ಆಗಿರುವ ಕುರಿತು ನಗರಸಭೆ ಮಳೆಗಾಲದ ಪೂರ್ವ ಸಿದ್ಧತೆಗಾಗಿ ಚರಂಡಿ ಸ್ಲಾಬ್‌ಗಳನ್ನು ತೆರೆಯುವಾಗ ಬೆಳಕಿಗೆ ಬಂದಿದೆ. ನಗರಸಭೆ ಅಧ್ಯಕ್ಷರು ಚರಂಡಿಯಲ್ಲಿರುವ ಹೂಳುಗಳನ್ನು ತೆರವು ಮಾಡಿ ವಿಲೇವಾರಿ ಮಾಡಲು ಸೂಚನೆ ನೀಡಿದ್ದಾರೆ.


ಪುತ್ತೂರು ಪೇಟೆಯ ಶ್ರೀ ಧರ್ಮಸ್ಥಳ ಕಟ್ಟಡದ ಬಳಿ ನೂತನವಾಗಿ ಕೌಕೇಚರ್ ಚರಂಡಿಯನ್ನು ನಿರ್ಮಿಸಲಾಗಿದೆ. ಆದರೆ ಅದರ ಮುಂದೆ ಚರಂಡಿ ಹೂಳು ತುಂಬಿ ಬ್ಲಾಕ್ ಆಗಿದ್ದರಿಂದ ಮಳೆ ನೀರು ಹರಿಯಲು ತೊಂದರೆ ಆಗಿತ್ತು. ಈ ಕುರಿತು ಮಳೆಗಾಲದ ಪೂರ್ವ ತಯಾರಿಯಾಗಿ ನಗರಸಭೆಯಿಂದ ಚರಂಡಿ ಹೂಳೆತ್ತುವ ಕಾಮಗಾರಿಯಲ್ಲಿ ಚರಂಡಿ ಸ್ಲಾಬ್ ತೆರವು ಮಾಡಿದ ವೇಳೆ ಚರಂಡಿಯುದ್ದಕ್ಕೂ ಹೂಳು ತುಂಬಿರುವುದು ಬೆಳಕಿಗೆ ಬಂದಿದೆ. ಈ ಕುರಿತು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಆಗಬಾರದು ಎಂಬ ನೆಲೆಯಲ್ಲಿ ತಕ್ಷಣ ಹೂಳು ತೆಗೆದು ವಿಲೇವಾರಿ ಮಾಡಲು ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here