ಲಂಚ ಭ್ರಷ್ಟಾಚಾರ ರಹಿತ ಊರಿನ ಅಭಿವೃದ್ಧಿಗೆ ತುಳುವೆರೆಂಕುಲು ಸಾಥ್-`ನಮ್ಮೂರು ನಮ್ಮ ಹೆಮ್ಮೆ’ಗೆ ಸಾಥ್ ನೀಡಲು ಸದಾ ಸಿದ್ಧ ಎಂದ ಬೆಂಗಳೂರಿನ ಕರಾವಳಿಗರು

0

ಬೆಂಗಳೂರು: ಭ್ರಷ್ಟಾಚಾರ ವಿರುದ್ಧದ ಸುದ್ದಿಯ ಜನಾಂದೋಲನ, ನಮ್ಮೂರು ನಮ್ಮ ಹೆಮ್ಮೆ ಕಾರ್ಯಕ್ರಮಕ್ಕೆ ಬೆಂಗಳೂರಿನ ತುಳುವೆರೆಂಕುಲು ಸಂಘಟನೆ ಸಾಥ್ ನೀಡಿದೆ. ಮೆಜೆಸ್ಟಿಕ್‌ನಲ್ಲಿರುವ ಸ್ವಾಗತ್ ಹೊಟೇಲ್‌ನಲ್ಲಿ ನಡೆದ ವಿಶೇಷ ಸಭೆಯಲ್ಲಿ ಸುದ್ದಿಯ ಜನಾಂದೋಲನದ ಬಗ್ಗೆ ಚರ್ಚೆ ನಡೆಸಲಾಯಿತು.

ನಮ್ಮೂರು ನಮ್ಮ ಹೆಮ್ಮೆ ನಮಗೂ ಹೆಮ್ಮೆ ತರುತ್ತದೆ. ಸುದ್ದಿ ಕರಾವಳಿ ಮತ್ತು ರಾಜಧಾನಿಯ ನಡುವೆ ಸಂಪರ್ಕದ ಸೇತುವೆಯಾಗಿದೆ. ನಮ್ಮೂರಿನ ಬಗ್ಗೆ ನಾವು ಸದಾ ಹೆಮ್ಮೆ ಪಡುತ್ತೇವೆ. ಅದು ಈಗ ಈ ಹೊಸ ಕಾರ್ಯಕ್ರಮದಿಂದ ಮತ್ತಷ್ಟು ಹೆಚ್ಚಾಗಿದೆ. ಸುದ್ದಿಯವರ ಭ್ರಷ್ಟಾಚಾರ ವಿರೋಧಿ ಆಂದೋಲನ ನಮ್ಮೂರು ನಮ್ಮ ಹೆಮ್ಮೆ ಎಂಬ ಕಾರ್ಯಕ್ರಮಕ್ಕೆ ನಮ್ಮ ಸಾಥ್ ಇದೆ ಎಂದು ತುಳುವೆರೆಂಕುಲು ಪದಾದಿಕಾರಿಗಳು ಒಕ್ಕೊರಲಿನಿಂದ ಹೇಳಿದರು.

ಲಂಚ ಭ್ರಷ್ಚಾಚಾರ ವಿರೋಧಿ ಫಲಕ ಸ್ವೀಕಾರ, ಘೋಷಣೆಗೆ ಸಾಥ್: ಲಂಚ ಭ್ರಷ್ಟಾಚಾರ ವಿರೋಧಿ ಘೋಷಣೆಯನ್ನು ತುಳುವೆರೆಂಕುಲು ಒಕ್ಕೊರಲಿನಿಂದ ಕೂಗಿದ್ರು. ಅಲ್ಲದೇ, ಫಲಕ ಸ್ವೀಕಾರ ಮಾಡಿ, ಸುದ್ದಿಯ ಜನಾಂದೋಲನಕ್ಕೆ ನಮ್ಮ ಸಾಥ್ ಸದಾ ಇರುತ್ತೆ ಅಂತ ಸಾರಿದ್ರು.

ಬೆಂಗಳೂರಿಗೆ ಬರುವವರಿಗೆ ಸಹಾಯ ಹಸ್ತ ಚಾಚಲು ಸಿದ್ಧ: ತುಳುವೆರೆಂಕುಲು ಪದಾಧಿಕಾರಿಗಳು ನಮ್ಮೂರಿನ ಯುವಕರಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದ್ರು. ಅಲ್ಲದೇ, ಊರಿನಿಂದ ಬರುವ ಯುವಕರಿಗೆ ರಾಜಧಾನಿಯಲ್ಲಿ ನೆರವಿಗೆ ನಿಲ್ಲಲು ಸಿದ್ಧವಾಗಿರುತ್ತೇವೆ. ಅಂತಹವರ ಮಧ್ಯೆ ಸುದ್ದಿ ಸಂಪರ್ಕದ ಕೊಂಡಿಯಾಗಿ ನಿಲ್ಲಲಿ ಅನ್ನುವುದು ನಮ್ಮ ಭಾವನೆ ಎಂದು ತಿಳಿಸಿದರು.

ಎಂ.ಬಿ.ಜಯರಾಮರು ಮತ್ತು ಡಾ.ಕೆ.ಎನ್.ಅಡಿಗರು ಹೇಳಿರುವ,ದ.ಕ-ಉಡುಪಿ ಜಿಲ್ಲೆಯವರ ಸಹಾಯಕ್ಕೆ ನಿಲ್ಲಲಿರುವ ಸಂಘ ಸಂಸ್ಥೆಗೆ ಬೆಂಬಲ ನೀಡಲಿzವೆ ಎಂದು ತಿಳಿಸಿದರು.ಸುದ್ದಿ ಮೀಡಿಯಾದವರು ಕೂಡಾ ಅದಕ್ಕೆ ಕೈಜೋಡಿಸಿ ಬೆಂಗಳೂರಲ್ಲಿ ತುಳುವೆರೆಂಕುಲು ಸಂಘಟನೆಯವರ ತುಳು ಭಾಷೆಯ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ತಿಳಿಸಿದರು.

ಸುದ್ದಿಯ ಸಂಪಾದಕರಾದ ಡಾ.ಯು.ಪಿ ಶಿವಾನಂದ್ ಈ ಆಂದೋಲನದ ರೂಪುರೇಷೆಯನ್ನು ಸಾರಿದ್ರೆ, ಎಂ.ಬಿ ಜಯರಾಮ್ ರಾಜಧಾನಿಯಲ್ಲಿರುವವರ ಜವಾಬ್ದಾರಿ ಇದು ಎಂದು ತಿಳಿಸಿದರು. ತುಳುವೆರೆಂಕುಲು ಅಧ್ಯಕ್ಷ ಜಯಂತ್ ರಾವ್, ಕಾರ್ಯದರ್ಶಿ ಪಳ್ಳಿ ವಿಶ್ವನಾಥ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಚಂದ್ರಹಾಸ್, ಚಾರ್ಲ್ಸ್ ಗೋಮ್ಸ್, ಉಪಾಧ್ಯಕ್ಷೆ ಜಲಜಾಶೇಖರ್, ಪದಾದಿಕಾರಿಗಳಾದ ಕೆ.ಎನ್ ಅಡಿಗ, ವಿಜಯಕುಮಾರ್ ಕುಲಶೇಖರ, ಗೋಪಾಲ ಪೂಜಾರಿ, ಸದಾನಂದ ಕಾರ್ಕಳ, ಉಮೇಶ್, ಗೋಪಾಲಕೃಷ್ಣ, ಶೇಖರ್ ಎಸ್, ವಾಮನ್ ಬೆಂಗ್ರೆ, ಡಾ. ಉಮ್ಮರ್ ಬೀಜದ ಕಟ್ಟೆ, ಬೆಳ್ತಂಗಡಿ ಸುದ್ದಿಯ ಸಿ.ಇ.ಓ ಸಿಂಚನ ಊರುಬೈಲು, ಸುದ್ದಿ ಚಾನೆಲ್‌ನ ಮುಖ್ಯಸ್ಥ ದಾಮೋಧರ ದೊಂಡೋಲೆ, ಮಂಗಳೂರು ವರದಿಗಾರ ಭಾಸ್ಕರ ರೈ ಕಟ್ಟ, ಪುತ್ತೂರು ಮುಖ್ಯ ವರದಿಗಾರ ಗಣೇಶ್ ಕಲ್ಲರ್ಪೆ, ಪುತ್ತೂರು ಸುದ್ದಿ ಚಾನೆಲ್‌ನ ಸುಧಾಕರ್ ಪಡೀಲ್, ಬೆಳ್ತಂಗಡಿಯ ಚಾನೆಲ್ ವರದಿಗಾರ ಆದಿತ್ಯ ರಾವ್ ದೊಂಡೋಲೆ, ಸುದ್ದಿಯ ಕುಶಾಲಪ್ಪ, ಮುಂತಾದವರು ಉಪಸ್ಥಿತರಿದ್ದರು.

ನಮ್ಮ ಊರು ನಮ್ಮ ಹೆಮ್ಮೆ ಧ್ಯೇಯ ವಾಕ್ಯ ಕೇಳುವಾಗಲೇ ಖುಷಿಯಾಗುತ್ತಿದೆ. ಕಳೆದ 31 ವರ್ಷಗಳಿಂದ ಇಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಯುವಕರು ಸೇರಿಕೊಂಡು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಯಾವುದೇ ಉತ್ತಮ ಕಾರ್ಯಕ್ರಮಕ್ಕೂ ನಮ್ಮ ಬೆಂಬಲವಿದೆ. ಅದೇ ರೀತಿ ಸುದ್ದಿಯ ನೇತೃತ್ವದಲ್ಲಿ ನಡೆಯುತ್ತಿರುವ ಲಂಚ ಭ್ರಷ್ಟಾಚಾರ ನಿರ್ಮೂಲನೆಯ ಆಂದೋಲನಕ್ಕೂ ನಾವು ಸಾಥ್ ನೀಡುತ್ತೇವೆ. ಆಂದೋಲನ ಉತ್ತಮ ರೀತಿಯಲ್ಲಿ ನಡೆಯಲಿ.
                                                                                                                    – ಜಯಂತ ವೈ, ಅಧ್ಯಕ್ಷರು, ತುಳುವೆರೆಂಕುಲು ಬೆಂಗಳೂರು

 

ಸುದ್ದಿ ಬಿಡುಗಡೆ ಮಾಧ್ಯಮ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದೆ. ನಮ್ಮ ಊರು ನಮ್ಮ ಹೆಮ್ಮೆ ಮೂಲಕ ನಮ್ಮೂರಿನ ಜನರಿಗೆ ಸಹಾಯ ಮಾಡುವ ಕಾರ್ಯಕ್ರಮ. ಲಂಚ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಈ ಕಾರ್ಯಕ್ರಮಕ್ಕೆ ರಾಜಧಾನಿಯ ಎಲ್ಲಾ ತುಳುವರ ಬೆಂಬಲವಿದೆ. ತುಳುವರೆಂಕುಲು ಕಳೆದ 31 ವರ್ಷಗಳಿಂದ ಕೆಲಸ ಮಾಡುತ್ತಿದೆ. ಈ ಅಭಿಯಾನಕ್ಕೆ ಶುಭಹಾರೈಕೆ.
                                                                                               – ಪಳ್ಳಿ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ, ತುಳುವೆರೆಂಕುಲು ಬೆಂಗಳೂರು

 

ತುಳುವರ ಎಲ್ಲಾ ಸಂಘ ಸಂಸ್ಥೆಗಳಲ್ಲಿ ನಾನು ಸಕ್ರೀಯವಾಗಿದ್ದೇನೆ. ಲಂಚ ಭ್ರಷ್ಟಾಚಾರ ನಿರ್ಮೂಲನೆಯ ಕಾನ್ಸೆಪ್ಟ್ ಚೆನ್ನಾಗಿದೆ. ಈ ಆಂದೋಲನಕ್ಕೆ ಬೆಂಗಳೂರಿನಲ್ಲಿರುವ ಊರಿನವರು ಸಹಕಾರ ನೀಡುತ್ತೇವೆ. ನಮ್ಮ ಊರು ನಮ್ಮ ಹೆಮ್ಮೆ.
                                                                                                                 – ಚಂದ್ರಹಾಸ್, ಉಪಾಧ್ಯಕ್ಷರು, ತುಳುವರೆಂಕುಲು ಬೆಂಗಳೂರು

ನಿಮ್ಮ ಮುಂದಿನ ಎಲ್ಲಾ ಕಾರ್ಯಯೋಜನೆಗೆ ನಮ್ಮೆಲ್ಲರ ಸಹಕಾರ ಇದೆ. ಬೆಂಗಳೂರಿನಲ್ಲಿ ಸಮಿತಿ ಮಾಡಿಕೊಂಡು, ಮುಂದಿನ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತೇವೆ. ಬೆಂಗಳೂರಿಗೆ ಬರುವವರಿಗೆ ಸಹಾಯಸ್ತ ನೀಡುತ್ತೇವೆ.
                                                                                                – ಡಾ. ಕೆ.ಎನ್. ಅಡಿಗ, ಮಾಜಿ ಅಧ್ಯಕ್ಷರು, ತುಳುವೆರೆಂಕುಲು ಬೆಂಗಳೂರು

LEAVE A REPLY

Please enter your comment!
Please enter your name here