ಜೂ.24: ರೋಟರಿ ಕ್ಲಬ್‌ನಿಂದ ಬ್ಲಡ್ ಕಲೆಕ್ಷನ್ ಆಂಬುಲೆನ್ಸ್ ಲೋಕಾರ್ಪಣೆ

0

ಪುತ್ತೂರು:ರೋಟರಿ ಕ್ಲಬ್ ಪುತ್ತೂರಿನ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗ್ಲೋಬಲ್ ಗ್ರಾಂಟ್ ಪ್ರೊಜೆಕ್ಟ್ ರೋಟರಿಕ್ಲಬ್ ಪುತ್ತೂರು ಬ್ಲಡ್ ಕಲೆಕ್ಷನ್ ಆಂಬುಲೆನ್ಸ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ರೋಟರಿ  ಅಂತರಾಷ್ಟ್ರೀಯ ಸಮಾವೇಶದಲ್ಲಿ ಪುತ್ತೂರು ಕ್ಲಬ್‌ಗೆ ಹಸ್ತಾಂತರವಾಗಿದ್ದು ಜೂ.24ರಂದು ಪುತ್ತೂರಿನಲ್ಲಿ ಲೋಕಾರ್ಪಣೆ ಮತ್ತು ರೋಟರಿ ಬ್ಲಡ್ ಬ್ಯಾಂಕ್‌ಗೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಕುರಿತು ರೋಟರಿ ಕ್ಲಬ್ ಅಧ್ಯಕ್ಷ ಮಧು ನರಿಯೂರು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 25 ವರ್ಷ ಪೂರೈಸಿದ ರೋಟರಿ ಬ್ಲಡ್ ಬ್ಯಾಂಕ್ ತನ್ನ ಹೊಸ ಯೋಜನೆಯಲ್ಲಿ ರಕ್ತ ವರ್ಗೀಕರಣ ಸೇರಿದಂತೆ ಮಹಾವೀರ ಆಸ್ಪತ್ರೆಯಲ್ಲಿ 2019-20ರಂದು ಡಯಾಲಿಸಿಸ್ ವ್ಯವಸ್ಥೆ ಮೂಲಕ ಹಲವು ಯೋಜನೆ ಹಮ್ಮಿಕೊಂಡ ರೋಟರಿ ಕ್ಲಬ್ ಪುತ್ತೂರು ಜನಸೇವೆಗಾಗಿ ರೋಟರಿ ಬ್ಲಡ್ ಕಲೆಕ್ಷನ್ ಆಂಬುಲೆನ್ಸ್ ಲೋಕಾರ್ಪಣೆ ಮಾಡಲಿದೆ.ಗ್ಲೋಬಲ್ ಗ್ರಾಂಟ್ ಪ್ರೊಜೆಕ್ಟ್‌ನಲ್ಲಿ ರೋಟರಿ ಬ್ಲಡ್ ಕಲೆಕ್ಷನ್ ಆಂಬುಲೆನ್ಸ್ ಲೋಕಾರ್ಪಣೆಯು ಪುತ್ತೂರು ಮಹಾವೀರ ವೆಂಚರ‍್ಸ್‌ನಲ್ಲಿ ನಡೆಯಲಿದೆ. ಈ ಪ್ರೊಜೆಕ್ಟ್‌ನಲ್ಲಿ ಅಂತರ್ರಾಷ್ಟ್ರೀಯ ಪಾಲುದಾರರಾಗಿ ಫಿನ್‌ಲ್ಯಾಂಡ್ ದೇಶದ ಆರ್‌ಐ ಡಿಸ್ಟ್ರಿಕ್ 1385, ಆರ್.ಐ ಡಿಸ್ಟ್ರಿಕ್ 1410 ಮತ್ತು ಆರ್‌ಐ ಡಿಸ್ಟ್ರಿಕ್ 3150 ಸಹಕಾರ ನೀಡುವ ಮೂಲಕ ಆಂಬುಲೆನ್ಸ್ ಪುತ್ತೂರಿನ ಜನತೆಗೆ ಉಪಯೋಗ ಆಗಲಿಕ್ಕಿದೆ. ಬೆಳಿಗ್ಗೆ ಗಂಟೆ 11ಕ್ಕೆ ಮಹಾವೀರ ವೆಂಚರ‍್ಸ್‌ನಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು ದೀಪ ಪ್ರಜ್ವಲಿಸಲಿದ್ದಾರೆ. ವರ್ಲ್ಡ್ ರೋಟಾ ಚೈರ್ ಪಿಡಿಜಿ ರವಿ ವಡ್ಲಮಣಿ ಅವರು ಆಂಬುಲೆನ್ಸ್ ಲೋಕಾರ್ಪಣೆ ಮಾಡಲಿದ್ದಾರೆ. ರೋಟರಿ ಜಿಲ್ಲಾ 1381 ವಲಯಾಧಿಕಾರಿ ರವೀಂದ್ರ ಭಟ್, ವಿಶ್ವ ಸಾಯಿ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಅಧ್ಯಕ್ಷ ರಾಮಮೂರ್ತಿ, ರೋಟರಿ ಜಿಲ್ಲಾ ಫೌಂಡೇಶನ್‌ನ ಡಾ.ಸೂರ್ಯನಾರಾಯಣ ಕೆ, ವಲಯ ೫ರ ಅಸಿಸ್ಟೆಂಟ್ ಗವರ್ನರ್ ಜಿತೇಂದ್ರ ಎನ್.ಎ, ಗವರ್ನರ್ ಅಬ್ಬಾಸ್ ಮುರ, ವಲಯ ೫ರ ಲೆಫ್ಟಿನೆಂಟ್ ಉಮೇಶ್ ನಾಯಕ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

೫ ಆಸ್ಪತ್ರೆಗಳಲ್ಲಿ ರಕ್ತದಾನ ಶಿಬಿರದ ಬಳಿಕ ಟ್ರಸ್ಟ್‌ಗೆ ಹಸ್ತಾಂತರ:

ಲೋಕಾರ್ಪಣೆಯ ದಿನ ಪುತ್ತೂರಿನ ಮಹಾವೀರ ಆಸ್ಪತ್ರೆ, ಪ್ರಗತಿ ಆಸ್ಪತ್ರೆ, ಆದರ್ಶ ಆಸ್ಪತ್ರೆ, ಪುತ್ತೂರು ಸಿಟಿ ಆಸ್ಪತ್ರೆ, ಚೇತನಾ ಆಸ್ಪತ್ರೆಯಲ್ಲಿ ನೂತನ ಬ್ಲಡ್ ಕಲೆಕ್ಷನ್ ಆಂಬುಲೆನ್ಸ್‌ನಲ್ಲಿ ಸಾಂಕೇತಿಕ ರಕ್ತದಾನ ಶಿಬಿರ ನಡೆಯಲಿದೆ.ಬಳಿಕ ಪುತ್ತೂರು ಚಾರಿಟೇಬಲ್ ಟ್ರಸ್ಟ್‌ಗೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.ರೋಟರಿ ಬ್ಲಡ್ ಸೆಂಟರ್‌ನ ಮೂಲಕ ಮುಂದಿನ ದಿನ ರಕ್ತದಾನ ಶಿಬಿರಕ್ಕೆ ಆಂಬುಲೆನ್ಸ್ ಸೇವೆ ಬಳಸಲಾಗುತ್ತದೆ ಎಂದು ಮಧು ನರಿಯೂರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ್ ಗೌಡ ಕಣಜಾಲು, ಗ್ಲೋಬಲ್ ಗ್ರಾಂಟ್‌ನ ಸೆಕೆಂಡರಿ ಕಾಂಟೆಕ್ಟ್ ಸುನಿಲ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here