ಜೂ.28: ಬೆಟ್ಟಂಪಾಡಿ ಗ್ರಾ.ಪಂ. ಸಭಾಂಗಣದಲ್ಲಿ ಕಿರು ಅರಣ್ಯ ಉತ್ಪನ್ನಗಳ ತರಬೇತಿ

0

ಪುತ್ತೂರು : ಪ್ರಧಾನಮಂತ್ರಿ ವನ-ಧನ ವಿಕಾಸ ಯೋಜನೆಯಡಿ ಪಾಣಾಜೆ ಶ್ರೀವನದುರ್ಗಾ ವನಧನ ವಿಕಾಸ ಕೇಂದ್ರ ಸಮಿತಿಯ ಸಮೀಕ್ಷೆಯ ಮೂಲಕ ಆಯ್ದ ಬೆಟ್ಟಂಪಾಡಿ, ನಿಡ್ಪಳ್ಳಿ, ಪಾಣಾಜೆ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವ್ಯಾಪ್ತಿಯ 300 ಮಹಿಳಾ ಸದಸ್ಯರಿಗೆ ಜೂ.28ರಂದು ಬೆಳಿಗ್ಗೆ 10.30 ಗಂಟೆಗೆ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ಹಲಸಿನಕಾಯಿ, ಪುನರ್ಪುಳಿ, ಬಾಳೆಕಾಯಿ, ಜೇನುಹನಿ, ವೀಳ್ಯದ ಎಲೆ ಸೇರಿದಂತೆ ಇತರ ಕಿರು ಅರಣ್ಯ ಉತ್ಪನ್ನಗಳಿಗೆ ತರಬೇತಿ ನಡೆಯಲಿದೆ ಎಂದು ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here